ಬಿಗ್ ಬಾಸ್ ಒಟಿಟಿ ಮೂಲಕ ಪ್ರಚಾರಕ್ಕೆ ಬಂದ ಉರ್ಫಿ ಮೈಮೇಲೆ ಬಟ್ಟೆ ನಿಲ್ಲೋದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ದುಬೈನಲ್ಲಿ ತುಂಟು ಬಟ್ಟೆ ತೊಟ್ಟು ಪೊಲೀಸ್ ಕೈಗೆ ಸಿಕ್ಕಿಬಿದ್ದಿರುವ ಉರ್ಫಿ ಮತ್ತೊಂದು ಸುದ್ದಿ ಮಾಡಿದ್ದಾಳೆ. ಆಕೆಗೆ ಲಾರಿಂಜೈಟಿಸ್ ಸಮಸ್ಯೆ ಶುರುವಾಗಿದೆ. ಲಾರಿಂಜೈಟಿಸ್ ಅಂದ್ರೇನು ಎಂಬುದು ಇಲ್ಲಿದೆ.
ಫ್ಯಾಶನ್ ಮತ್ತು ಇನ್‌ಸ್ಟಾಗ್ರಾಮ್ ಜಗತ್ತಿನಲ್ಲಿ ವೈರಲ್ ಆದ ಬೆಡಗಿ ಉರ್ಫಿ ಜಾವೇದ್. ಅಸಾಮಾನ್ಯ ಉಡುಪುಗಳನ್ನು ಧರಿಸಿ ಸುದ್ದಿ ಮಾಡುವ ನಟಿ ಈ ಬಾರಿ ಆಸ್ಪತ್ರೆ ವಿಡಿಯೋ ಹಂಚಿಕೊಂಡಿದ್ದಾಳೆ. ಉರ್ಫಿ ಜಾವೇದ್ ಗೆ ಲಾರಿಂಜೈಟಿಸ್ ಎಂಬ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಇದನ್ನು ಸ್ವತಃ ನಟಿ ಉರ್ಫಿ ಇನ್ಸ್ಟಾಗ್ರಾಮ್ ಮೂಲಕ ಹೇಳಿಕೊಂಡಿದ್ದಾಳೆ. ನಾವಿಂದು ಲಾರಿಂಜೈಟಿಸ್ ಲಕ್ಷಣವೇನು ಎನ್ನುವ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಲಾರಿಂಜೈಟಿಸ್ (Laryngitis) ಎಂದರೇನು? : ಲಾರಿಂಜೈಟಿಸ್ ಎನ್ನುವುದು ಧ್ವನಿ ಪೆಟ್ಟಿಗೆಯಲ್ಲಿ ಉರಿಯೂತದಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ಸೋಂಕಿ (Infection) ನಿಂದ ಉಂಟಾಗುತ್ತದೆ. ನೀವು ಲಾರಿಂಜೈಟಿಸ್ ಹೊಂದಿದ್ದರೆ ನಿಮ್ಮ ಧ್ವನಿ ಗಟ್ಟಿಯಾಗಬಹುದು ಅಥವಾ ನೀವು ಧ್ವನಿ (Voice) ಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.
ಪ್ರಯಾಣಿಕರು ರಾತ್ರಿ ವಿಮಾನ ನಿಲ್ದಾಣದಲ್ಲಿ ಮಲಗಬಹುದೇ? ಇಲ್ಲಿದೆ ಫುಲ್ ಡಿಟೇಲ್ಸ್
ಲಾರಿಂಜೈಟಿಸ್ ಲಕ್ಷಣಗಳು (Symptoms) ಯಾವುವು? : ಲಾರಿಂಜೈಟಿಸ್‌ನ ಲಕ್ಷಣಗಳು ನಿಮ್ಮ ಗಂಟಲಿನ ಊತ ಎಷ್ಟು ತೀವ್ರವಾಗಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ರೋಗಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಮೊದಲ ಮೂರು ದಿನಗಳಲ್ಲಿ ಇದು ಉಲ್ಬಣಗೊಳ್ಳುತ್ತವೆ. ಧ್ವನಿ ಒರಟಾಗುತ್ತದೆ. ಧ್ವನಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ನಿರಂತರವಾಗಿ ಕೆಮ್ಮು ಮತ್ತು ಗಂಟಲು ಕೆರತ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಲಾರಿಂಜೈಟಿಸ್ ಒಂದರಿಂದ ಎರಡು ವಾರಗಳಲ್ಲಿ ಗುಣವಾಗುತ್ತದೆ. ಆದ್ರೆ ರೋಗ ಲಕ್ಷಣ ತೀವ್ರವಾಗಿದ್ದರೆ ಇದು ಸಮಯ ತೆಗೆದುಕೊಳ್ಳಬಹುದು. ಶೀತ ಅಥವಾ ಜ್ವರದಂತಹ ಸೋಂಕಿನಿಂದ ಇದು ಉಂಟಾಗುತ್ತದೆ. ತಲೆನೋವು, ಗ್ರಂಥಿಗಳು ಊದಿಕೊಳ್ಳುವುದು, ಮೂಗು ಸೋರುವುದು, ಆಯಾಸ ಮತ್ತು ಗಂಟಲು ನೋವು ಕೂಡ ನಿಮ್ಮನ್ನು ಕಾಡುತ್ತದೆ.
ಯಾವಾಗ ವೈದ್ಯರನ್ನು ಭೇಟಿಯಾಗ್ಬೇಕು? : ಲಾರಿಂಜೈಟಿಸ್ ಸಾಮಾನ್ಯವಾಗಿ ಒಂದರಿಂದ ಎರಡು ವಾರಗಳಲ್ಲಿ ಗುಣವಾಗುತ್ತದೆ. ಹಾಗಾಗಿ ಹೆಚ್ಚಿನ ಸಮಯದಲ್ಲಿ ವೈದ್ಯರನ್ನು ಭೇಟಿಯಾಗುವ ಅಗತ್ಯವಿರುವುದಿಲ್ಲ. ನಿಮ್ಮ ರೋಗಲಕ್ಷಣಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಇದ್ದಲ್ಲಿ, ನೋವು ವಿಪರೀತವಾಗಿದ್ದರೆ ಅಥವಾ ಆಹಾರ ನುಂಗಲು ಕಷ್ಟವಾಗುತ್ತಿದ್ದರೆ, ಮಾತನಾಡಲು ಸಾಧ್ಯವಾಗ್ತಿಲ್ಲ ಎಂದಾದ್ರೆ ನಿಮಗೆ ಉಸಿರಾಟದ ಸಮಸ್ಯೆ ಕಾಡಲು ಶುರುವಾಗಿದ್ದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಅಗತ್ಯವಿರುತ್ತದೆ.
ನಾಲಿಗೆ ಬಣ್ಣ ರಟ್ಟು ಮಾಡುತ್ತೆ ಅನಾರೋಗ್ಯದ ಗುಟ್ಟು!
ಇದು ಸಾಂಕ್ರಾಮಿಕ ರೋಗವೇ? : ಲಾರಿಂಜೈಟಿಸ್ ಸಾಂಕ್ರಾಮಿಕ ರೋಗ. ಸಾಮಾನ್ಯವಾಗಿ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ಇದು ಸೋಂಕಿತ ಜನರ ಕೆಮ್ಮಿದಾಗ, ಸೀನಿದಾಗ ಅಥವಾ ಲಾಲಾರಸದಿಂದ ಹರಡುತ್ತದೆ.
ಆದ್ರೆ ಎಲ್ಲ ಸಮಯದಲ್ಲೂ ಲಾರಿಂಜೈಟಿಸ್ ಸಾಂಕ್ರಾಮಿಕ ಎನ್ನಲು ಸಾಧ್ಯವಿಲ್ಲ. ನಿಮ್ಮ ದೇಹದಲ್ಲಿಯೇ ಅನೇಕ ಬಾರಿ ಸೋಂಕು ಹುಟ್ಟಿಕೊಳ್ಳುತ್ತದೆ. ಅಲರ್ಜಿಯಾದಾಗ, ಗಾಳಿಯಲ್ಲಿನ ಜೀವಾಣುಗಳಿಗೆ ಒಡ್ಡಿಕೊಂಡಾಗ, ನಿಮ್ಮ ಧ್ವನಿಯ ಅತಿಯಾದ ಬಳಕೆಯಿಂದಲೂ ಇದು ಕಾಣಿಸಿಕೊಳ್ಳಬಹುದು.
ಲಾರಿಂಜೈಟಿಸ್ ಗೆ ಏನು ಚಿಕಿತ್ಸೆ ? : ಎರಡು ವಾರಗಳ ಕಾಲ ಲಾರಿಂಜೈಟಿಸ್ ಗೆ ಯಾವುದೇ ಚಿಕಿತ್ಸೆ ಅಗತ್ಯವಿಲ್ಲ. ನಿಮ್ಮ ರೋಗಲಕ್ಷಣಗಳು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾದರೆ ವೈದ್ಯರು ಪ್ರತಿಜೀವಕಗಳನ್ನು ಶಿಫಾರಸು ಮಾಡಬಹುದು. ಕೆಮ್ಮಿನಿಂದ ಬಳಲುತ್ತಿದ್ದರೆ ಕೆಮ್ಮು ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಬಹುದು.
ಲಾರಿಂಜೈಟಿಸ್‌ಗೆ ಮನೆಮದ್ದು : ಲಾರಿಂಜೈಟಿಸ್ ನಿಂದ ಗುಣಮುಖರಾಗಲು ನೀವು ಮನೆ ಮದ್ದನ್ನು ಬಳಸಬಹುದು.
1. ಧ್ವನಿಗೆ ವಿಶ್ರಾಂತಿ ನೀಡುವುದು ಬಹಳ ಮುಖ್ಯವಾಗುತ್ತದೆ. ಅನವಶ್ಯಕ ಮಾತನ್ನು ನಿಲ್ಲಿಸಬೇಕು.
2. ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡಬೇಕು.
3. ಆಲ್ಕೋಹಾಲ್ ಅಥವಾ ಕೆಫೀನ್ ಸಮಸ್ಯೆ ಹೆಚ್ಚಿಸಬಹುದು. ಹಾಗಾಗಿ ಅದ್ರಿಂದ ದೂರವಿರಿ.
4. ಧೂಮಪಾನ ಮಾಡುವುದನ್ನು ತಪ್ಪಿಸಿ.
5. ಬಹಳಷ್ಟು ಧೂಳು ಅಥವಾ ಹೊಗೆ ಇರುವ ಸ್ಥಳಕ್ಕೆ ಹೋಗಬೇಡಿ.
6. ನೋವು ಹೆಚ್ಚಿದ್ದಲ್ಲಿ ನೀವು ವೈದ್ಯರ ಸಲಹೆ ಮೇರೆಗೆ ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡಬಹುದು.