ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

Published : Aug 06, 2018, 04:34 PM ISTUpdated : Aug 06, 2018, 04:42 PM IST
ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ!

ಸಾರಾಂಶ

ಕನ್ಯತ್ವ ಹಾಗೂ ಹೆಣ್ಣಿಗೂ ಅವಿನಾಭಾವ ಸಂಬಂಧ. ಮದುವೆ ತನಕವೂ ಇದನ್ನು ಉಳಿಸಿಕೊಳ್ಳಬೇಕು ಎಂಬುವುದು ಅನಾದಿಕಾಲದಿಂದಲೂ ಇರೋ ತಪ್ಪು ಕಲ್ಪನೆ. ಬರೀ ಮನೆಯೊಳಗೇ ಇರುತ್ತಿದ್ದ ಹೆಣ್ಣೀಗ ಯಾವ ಗಂಡಿಗೂ ಕಡಿಮೆ ಇಲ್ಲವೆನ್ನುವಂತೆ ದೈಹಿಕ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಿದ್ದಾಳೆ. ಸಹಜವಾಗಿಯೇ ಈ ಕನ್ಯತ್ವ ಪೊರೆಯೂ ಮರೆಯಾಗಿರುತ್ತದೆ. ಹಾಗಾಗಿ ಈ ಕನ್ಯತ್ವ ಎನ್ನೋ ಪದಕ್ಕೆ ಅರ್ಥ ಹುಡುಕುವುದು ಈಗೀಗ ತುಸು ಕಷ್ಟ

ಆದರೆೇನು ಮಾಡುವುದು? ಕಾಲ ಬದಲಾದರೂ, ತಾನು ಕಟ್ಟಿಕೊಂಡ ಸಂಗಾತಿಯ ಕನ್ಯತ್ವ ಮಾತ್ರ ಕಾಲಕ್ಕೆ ತಕ್ಕಂತೆ ಬದಲಾದ ಗಂಡಿಗಿನ್ನೂ ಅಷ್ಟೇ ಮಹತ್ವದ ವಿಷಯ. ಕನ್ಯತ್ವ ಉಳಿಸಿಕೊಳ್ಳದಿದ್ದರೂ, ಗಂಡಿನ ಅಹಂ ತಣಿಸುವಂಥ ಚಿಕಿತ್ಸೆ, ಔಷಧಿಗಳೂ ಇವೆ. ಇದಕ್ಕೊಂದು ಹೊಸ ಮಾತ್ರೆಯೂ ಸೇರ್ಪಡೆಯಾಗಿದೆ. ಕೃತಕ ಕನ್ಯತ್ವ ಅಥವಾ ವರ್ಜಿನಿಟಿ ಪಿಲ್ ಎನ್ನೋ ಈ ಮಾತ್ರೆಯಿಂದ ಕನ್ಯತ್ವ ಕಳೆದುಕೊಂಡರೂ, ಅದು ಗೊತ್ತಾಗದಂತೆ ಮಾಡಬಹುದು.

ಈ ಮಾತ್ರೆಯನ್ನು ಯೋನಿಯೊಳಗೆ ಸೇರಿಸಿಕೊಂಡರೆ ಸರಿ, ಕನ್ಯತ್ವ ಪ್ರೂವ್ ಮಾಡಿಬಿಡಬಹುದು. ಲೈಂಗಿಕ ಕ್ರಿಯೆ ನಡೆಸಿದಾಗ ಕನ್ಯತ್ವ ಪೊರೆ ಹರಿದು, ರಕ್ತ ಸ್ರಾವವಾಗುವಂತೆಯೇ ಮಾಡುತ್ತದೆ ಈ ಪಿಲ್.

ಬಳಸುವುದು ಹೇಗೆ?

  • ಲೈಂಗಿಕ ಕ್ರಿಯೆ ಮಾಡುವ 45-60 ನಿಮಿಷಗಳಿಗೂ ಇದನ್ನು ಯೋನಿಯೊಳಗೆ ಸೇರಿಸಿಕೊಳ್ಳಬೇಕು.
  • ಈ ಮಾತ್ರೆಯನ್ನು ಬಳಸುವಾಗ ಕೈ ಹಾಗೂ ಯೋನಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
  • ಟ್ಯಾಂಪೂನ್ ಬಳಸಿದಂತೆಯೇ ಈ ಮಾತ್ರೆಯನ್ನು ಬಳಸಬೇಕು.
  • ಮಾತ್ರೆಯನ್ನು 7 ಸೆ.ಮೀ.ನಷ್ಟು ಯೋನಿಯೊಳಗೆ ಹಾಕಬೇಕು.
  • ಈ ಮಾತ್ರೆ ಕರಗಲು 45-60 ನಿಮಿಷ ಬೇಕಾಗುತ್ತದೆ.

ಸುರಕ್ಷತಾ ಕ್ರಮಗಳೇನು?

  • ಈ ಮಾತ್ರೆಯನ್ನು ಸೇವಿಸಬಾರದು. 
  • ಯೋನಿಗೆ ಮಾತ್ರ ಬಳಸಬೇಕು
  • ಮೂತ್ರ ವಿಸರ್ಜಿಸುವ ಜಾಗಕ್ಕೆ ಹೋಗದಂತೆ ಎಚ್ಚರವಹಿಸಬೇಕು.
  • ಟ್ಯಾಂಪನ್ ಬಳಸಿದಾಗ, ಈ ಮಾತ್ರೆ ಬಳಸಬಾರದು.
  • ಯೋನಿಯಲ್ಲಿ ನೋವಿದ್ದರೆ ಇದನ್ನು ಬಳಸುವುದು ಸೂಕ್ತವಲ್ಲ.

ಸೈಡ್ ಎಫೆಕ್ಟ್ಸ್:

ಈ ಮಾತ್ರೆ ಬಳಸೋದ್ರಿಂದ ಸೈಡ್ ಎಫೆಕ್ಟ್ಸ್ ಏನೂ ಇರೋಲ್ಲ. ಆದರೆ, ಸ್ವಚ್ಛತೆ ಕಾಪಾಡದೇ ಹೋದಲ್ಲಿ ತೊಂದರೆಯಾಗುತ್ತೆ. ದೇಹದ ತಾಪಮಾನಕ್ಕೆ ತಕ್ಕಂತೆ ಇದು ಪರಿಣಾಮ ಬೀರುತ್ತದೆ. ಆದ್ದರಿಂದ ತಜ್ಞರ ಸಲಹೆ ಪಡೆದೇ, ಮಾರುಕಟ್ಟೆಯಲ್ಲಿ ಸಿಗೋ ಈ ಮಾತ್ರೆಯನ್ನು ಬಳಸಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಳಿಗಾಲದಲ್ಲಿ ಬೆಚ್ಚಗಿನ ಹಾಸಿಗೆಯಿಂದ ಎದ್ದ ತಕ್ಷಣ ಟಾಯ್ಲೆಟ್’ಗೆ ಹೋದ್ರೆ ಹೃದಯಾಘಾತ!
11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ