ಮುಖ ಡ್ರೈ ಆದರೂ ಚೆಂದವಲ್ಲ, ತೀರಾ ಎಣ್ಣೆ ಎಣ್ಣೆಯಿದ್ದರೂ ಕಷ್ಟ. ಎಣ್ಣೆ ಮುಖದಿಂದ ಮೊಡವೆಯಂಥ ಸಮಸ್ಯೆಗಳು ಹೆಚ್ಚುತ್ತೆ. ಆದರೆ, ಮುಲ್ತಾನಿ ಮಿಟ್ಟಿಯಂಥ ಮಣ್ಣು ಇಂಥ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
ಎಣ್ಣೆ ಮುಖ ಎಂದಾಕ್ಷಣ ಗ್ಲೂ ಮಾತ್ರ ಜ್ಞಾಪಕ ಬರುತ್ತದೆ. ಆದರೆ ಕೆಲವರಿಗೆ ಮುಖದ ತುಂಬಾ ಮೊಡವೆಯೂ ಮೂಡುತ್ತದೆ. ಇಂಥತೊಂದರೆಗಳನ್ನು ತಡೆಯೋಕೆ ಈ ಮಿಲ್ತಾನಿ ಮಿಟ್ಟಿ ಎಂಬ ದಿವ್ಯೌಷಧಿಯೊಂದು ಇದೆ ಗೊತ್ತಾ?
ಮುಲ್ತಾನಿ ಮಿಟ್ಟಿಯಿಂದ ಮುಖದಲ್ಲಿರುವ ಅಧಿಕ ತೈಲಾಂಶ ಹಾಗೂ ಮೃತ ಚರ್ಮ ನಶಿಸಿ ಹೋಗುತ್ತವೆ. ಇದು ಚರ್ಮವನ್ನು ಕ್ಲೀಯರ್ ಆ್ಯಂಡ್ ಗ್ಲೋ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಇಂಥ ಔಷಧಿಯನ್ನು ಬಳಸುವುದು ಹೇಗೆ?
ಮುಲ್ತಾನಿ ಮಿಟ್ಟಿಯೊಂದು ನೈಸರ್ಗಿಕ ಮಣ್ಣು. ಇದರಲ್ಲಿ ಜಿಂಕ್, ಸಿಲಿಕಾ, ಐರನ್ ಹಾಗೂ ಮೇಗ್ನೀಷಿಯಂ ಅಂಶಗಳಿದ್ದು, ಯಾವುದೇ ರೀತಿಯ ನೆಗೆಟಿವ್ ಎಫೆಕ್ಟ್ ಬೀರುವುದಿಲ್ಲ. ಅಷ್ಟೇ ಅಲ್ಲದೇ ಸುಕ್ಕಾಗಿರುವ ಚರ್ಮವನ್ನು ಬಿಗಿ ಮಾಡುತ್ತದೆ.
ಮುಲ್ತಾನಿ ಮಿಟ್ಟಿಯನ್ನು ಟೋಮ್ಯಾಟೊ, ರೋಸ್ ವಾಟರ್, ಮೊಸರು, ಗಂಧದ ಪುಡಿ ಹಾಗೂ ಅರಿಶಿಣದೊಂದಿಗೆ ಬೆರಿಸಿ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ.
ಟೊಮ್ಯಾಟೋ ಮುಲ್ತಾನಿ ಮಿಟ್ಟಿ: 2 ಚಮಚ ಮುಲ್ತಾನಿ ಮಿಟ್ಟಿ, 1 ಟೊಮ್ಯಾಟೊ (ಬೀಜಾ ತೆಗೆದು ಹಿಸುಕಿದ್ದು) ಹಾಗೂ 1 ಚಮಚ ನಿಂಬೆ ರಸವನ್ನು ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಂಡು 30-40 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದನ್ನು ವಾರಕ್ಕೊಂದೆರಡು ಸಲ ಮಾಡಿದರೆ ಎಫೆಕ್ಟ್ ಗೊತ್ತಾಗುತ್ತದೆ.
1 ಚಮಚ ಮುಲ್ತಾನಿ ಮಿಟ್ಟಿ, 2 ಚಮಚ ಗುಲಾಬಿ ವಾಟರ್ ಹಾಗೂ ನೀರು ಸೇರಿಸಿದ ಪೇಸ್ಟನ್ನು ಮುಖಕ್ಕೆ ಹಂಚಿಕೊಂಡು 30 ನಿಮಿಷಗಳ ನಂತರ ತೊಳೆಯಬೇಕು. ಇದನ್ನು ವಾರಕ್ಕೊಂದು ಸಲವಾದರೂ ಮಾಡಬೇಕು.
1 ಚಮಚ ಮೊಸರು ಹಾಗು 1 ಚಮಚ ಮುಲ್ತಾನಿ ಮಿಟ್ಟಿ ಸೇರಿಸಿದ್ದನ್ನು ಮುಖಕ್ಕೆ ಹಚ್ಚಿ. 15-20 ನಿಮಿಷಗಳ ನಂತರ ತಣ್ಣಗಿರುವ ನೀರಿನಲ್ಲಿ ತೊಳೆಯಬೇಕು. ಇದನ್ನು ಮಾತ್ರ ವಾರದಲ್ಲಿ ಮೂರ್ನಾಲ್ಕು ಸಲ ಬಳಸಬಹುದು.
1 ಚಮಚ ಮುಲ್ತಾನಿ ಮಿಟ್ಟಿ, 1 ಚಮಚ ಗಂಧದ ಪುಡಿ ಹಾಗೂ ನೀರು ಸೇರಿಸಿದ ಪೇಸ್ಟನ್ನು ಮುಖಕ್ಕೆ ಹಂಚಿಕೊಳ್ಳಬೇಕು. ಇದನ್ನು 15-20 ನಿಮಿಷಗಳು ಮಾತ್ರ ಇಟ್ಟಿಕೊಳ್ಳಬೇಕು ಹಾಗೂ ವಾರದಲ್ಲಿ 2 ಸಲ ಬಳಸಿದರೆ ಮುಖ ಹೊಳೆಯುವುದು ಗ್ಯಾರಂಟಿ.
ಅರ್ಧ ಚಮಚ ಕಸ್ತೂರಿ ಅರಿಶಿಣ, 1 ಚಮಚ ಮುಲ್ತಾನಿ ಮಿಟ್ಟಿ ಹಾಗೂ ನೀರು. ಇದನ್ನು ವಾರಕ್ಕೆ ಮೂರು ಸಲ ಬಳಸಬಹುದಾದರೂ ಕೇವಲ 20-30 ನಿಮಿಷಗಳ ಮಾತ್ರ ಒಣಗಲು ಬಿಡಬೇಕು. ಇಲ್ಲದಿದ್ದರೆ ಮುಖ ಡ್ರೈ ಆಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.