ಹೀಗ್ ಮಾಡಿದ್ರೆ ಬ್ಯೂಟಿ ಕ್ವೀನ್ ಆಗ್ತೀರಾ....!

By Web Desk  |  First Published Jan 17, 2019, 4:17 PM IST

ಚೆಂದ ಕಾಣಬೇಕೆಂಬ ಬಯಕೆ ಯಾರಿಗೆ ತಾನೇ ಇಲ್ಲ ಹೇಳಿ? ಫೇಷಿಯಲ್, ಆ್ಯಂಟಿ ಟ್ಯಾನ್..... ಅದು ಇದು ಎಂದು ಮಾಡಿಸಿಕೊಳ್ಳಲು ಶಕ್ತರಾಗದಿದ್ದಲ್ಲಿ ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ.....


ಸುಂದರವಾಗಿ ಕಾಣಿಸಲು ಹಲವಾರು ಟಿಪ್ಸ್ ಇವೆ. ಇಲ್ಲಿ ಕೆಲವು ಅಸಾಮಾನ್ಯ ಬ್ಯೂಟಿ ಟ್ರಿಕ್ಸ್ ನೀಡಲಾಗಿವೆ. ಟ್ರೈ ಮಾಡಿದರೆ ಖಂಡಿತವಾಗಿ ಬದಲಾವಣೆ ಕಾಣಬಹುದು.

  • ಕಣ್ಣಿನ ಸುತ್ತಲೂ ಊತ ಕಾಣಿಸಿಕೊಂಡರೆ ಒಂದು ಸ್ಪೂನ್ ತೆಗೆದುಕೊಂಡು ಅದನ್ನು ಫ್ರಿಜ್‌ನಲ್ಲಿಡಿ. ಐದು ನಿಮಿಷದ ನಂತರ ಅದರಿಂದ ಕಣ್ಣಿನ ಸುತ್ತ ಮಸಾಜ್ ಮಾಡಿ. ಇದರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ.
  • ಮರಳನ್ನು ನೀರಿನ ಜೊತೆ ಸೇರಿಸಿ ಸ್ಕ್ರಬ್ ಮಾಡಿದರೆ ಆರೋಗ್ಯಕ್ಕೆ ಹಾಗೂ ದೇಹಕ್ಕೂ ಉತ್ತಮ.
  • ನಿಂಬೆ ರಸವನ್ನು ಹೇರ್ ಹೈ ಲೈಟ್ ಆಗಿ ಬಳಸಬಹುದು. ಅದಕ್ಕಾಗಿ ನಿಂಬೆ ರಸ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿ. ಇದರಿಂದ ಬಿಸಿಲಿಗೆ ಹೋದಾಗ ಕೂದಲು ಹೊಳೆಯುತ್ತದೆ.
  • ಹಲ್ಲು ಹೊಳೆಯುವಂತೆ ಮಾಡಲು ಸ್ಟ್ರಾಬೆರ್ರಿಯಿಂದ ಹಲ್ಲು ತಿಕ್ಕಬೇಕು. ಅಥವಾ ಸ್ಟ್ರಾಬೆರ್ರಿ ಸ್ಮಾಷ್ ಮಾಡಿ ಅದನ್ನು ಪೇಸ್ಟ್ ಜೊತೆ ಬೆರೆಸಿ ಹಲ್ಲುಜ್ಜಿದರೆ ಹಲ್ಲು ಹೊಳೆಯುತ್ತದೆ.
  • ಮುಖದಲ್ಲಿ ಪಿಂಪಲ್ ಕಾಣಿಸಿಕೊಂಡರೆ ಟೂತ್ ಪೇಸ್ಟನ್ನು ಪಿಂಪಲ್ ಮೇಲೆ ಹಚ್ಚಬೇಕು. ಇದರಿಂದ ಪಿಂಪಲ್ ನಿವಾರಣೆಯಾಗುತ್ತದೆ.
  • ಕೂದಲು ಆಯ್ಲಿ ಆಗಿದ್ದರೆ ಅದನ್ನು ಕ್ಲೀನ್ ಮಾಡಲು ಡ್ರೈ ಶಾಂಪೂ ಇಲ್ಲದಿದ್ದರೆ, ಅದಕ್ಕೆ ಬೇಬಿ ಪೌಡರ್ ಬಳಸಿ.
  • ತುಟಿಗಳಿಗೆ ನ್ಯಾಚುರಲ್ ಬಣ್ಣ ಬರಬೇಕೆಂದರೆ ಬೀಟ್‌ರೂಟ್ ಅನ್ನು ಅರೆದು, ಅದರ ನೀರನ್ನು ತುಟಿಗೆ ಹಚ್ಚುತ್ತಿರಬೇಕು. ಇದರಿಂದ ತುಟಿ ಕೆಂಪಾಗುತ್ತದೆ.
  • ಉಗುರು ಪದೇ ಪದೇ ಕತ್ತರಿಸಿ ಹೋಗುತ್ತಿದ್ದರೆ, ನಿಂಬೆ ಹಣ್ಣನ್ನು ಕತ್ತರಿಸಿ ಅದರ ನಡುವೆ ಬೆರಳನ್ನು ಅದ್ದಿಡಿ. ಹೀಗೆ ಮಾಡಿದರೆ ಉಗುರು ಸ್ಟ್ರಾಂಗ್ ಆಗುತ್ತದೆ.

ಅರೋಗ್ಯ, ಸೌಂದರ್ಯಕ್ಕೂ ಸೈ ಎಳ್ಳೆಣ್ಣೆ

Tap to resize

Latest Videos

click me!