'ತುಂಟಿ'ಯಂಥ ಪದ ಬಳಸದೇ ಬುದ್ಧಿ ಹೇಳಿ ಮಕ್ಕಳಿಗೆ...

By Web DeskFirst Published Jul 14, 2019, 1:59 PM IST
Highlights

ಮಕ್ಕಳನ್ನು ಬೆಳೆಸುವಾಗ ತುಂಬಾ ಕೇರ್‌ಫುಲ್ ಆಗಿರಬೇಕು. ಮಕ್ಕಳು ತಾವಾಗಿ ಕಲಿಯುವುದಕ್ಕಿಂತ ಹಿರಿಯರನ್ನು ನೋಡಿ ಕಲಿಯುವುದೇ ಹೆಚ್ಚು, ಆದುದರಿಂದ ನಿಮ್ಮ ಪ್ರತೀ ಮಾತು ಮತ್ತು ನಡೆ ಮಕ್ಕಳ ಮೇಲೆ ದುಷ್ಪರಿಮಾಣ ಬೀರಬಹುದು. 

ಪೋಷಕರಾಗಿ ಮಕ್ಕಳನ್ನು ಬೆಳೆಸುವಾಗ ಒಂದಷ್ಟು ತಪ್ಪುಗಳಾಗಬಹುದು. ಆದರೆ ಆ ತಪ್ಪು ಯಾವುದು ಎಂದರ್ಥ ಮಾಡಿಕೊಂಡು ಸರಿ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಆ ತಪ್ಪನ್ನೇ ಅನುಸರಿಸಿಕೊಂಡು ಹೋಗಿ, ಮುಂದೆ ಅದು ಅವರ ಜೀವನಕ್ಕೆ ತೊಡಕಾಗಬಹುದು. ಹಾಗಿದ್ದರೆ ಏನನ್ನು ಸರಿ ಮಾಡಬೇಕು? 

ಪೋಷಕರು ಸಾಮಾನ್ಯವಾಗಿ ಮಕ್ಕಳಿಗೆ 'ನೀನು ತುಂಬಾ ತುಂಟಿ ಅಥವಾ ತುಂಟ' ಎನ್ನುತ್ತಾರೆ. ಈ ಪದವೇ ಮಕ್ಕಳ ಭವಿಷ್ಯಕ್ಕೆ ತೊಡಕಾಗಬಹುದು. ಈ ರೀತಿ ಮಕ್ಕಳಿಗೆ ಹೇಳುವುದರಿಂದ ಮಕ್ಕಳು ಅದನ್ನೇ ತಮ್ಮಲ್ಲಿ ಉಳಿಸಿಕೊಂಡು ತುಂಟರಾಗಿಯೇ ಬೆಳೆಯುವ ಸಾಧ್ಯತೆ ಇದೆ. ಮಕ್ಕಳಿಗೆ ತುಂಟ, ನಾಟಿ ಎಂದು ಹೇಳುವ ಬದಲು ಅದನ್ನು ಬೇರೆ ವಿಧಾನಗಳ ಮೂಲಕ ಹೇಳಿದರೆ ಉತ್ತಮ. 

ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?

ಮಕ್ಕಳು ತಪ್ಪೆಸೆಗಿದರೆ ಯಾಕೆ ರೀತಿ ಮಾಡಿದೆ, ಅದು ಮಾಡೋದು ತಪ್ಪು ಅನ್ನೋದು ಗೊತ್ತಿಲ್ವಾ ಎಂದು ಗದರಬೇಡಿ. ಇದರಿಂದ ಮಕ್ಕಳಲ್ಲಿ ಭಯ ಹೆಚ್ಚುತ್ತದೆ. ಆದುದರಿಂದ ಸಾಧ್ಯವಾದಷ್ಟು ನೀವು ಹೀಗೆ ಮಾಡಿದರೆ ಬೇರೆಯವರಿಗೆ ಎಷ್ಟೊಂದು ನೋವಾಗುತ್ತೆ ಗೊತ್ತಾ? ನೀವು ಈ ಕೆಲಸವನ್ನು ಹೀಗೆ ಮಾಡುವ ಬದಲು ಬೇರೆ ರೀತಿಯಾಗಿ ಮಾಡಿದರೆ ಚೆಂದ ಎಂದು ತಿಳಿ ಹೇಳಿ. 

ಮಕ್ಕಳು ತಿನ್ನದಿದ್ದರೆ ಅವರಿಗೆ ಬೈಯುವ ಬದಲು 'ನೀನು ಈ ತಿಂಡಿಯನ್ನು ಪೂರ್ತಿಯಾಗಿ ತಿಂದರೆ ಅಮ್ಮನಿಗೆ ಎಷ್ಟು ಖುಷಿಯಾಗುತ್ತದೆ ಗೊತ್ತಾ...? ಎಂದು ಹೇಳುವುದಲ್ಲದೇ, ಅನ್ನದ ಮಹತ್ವವನ್ನು ಹೇಳಿ ನೋಡಿ. ಆಗ ಮಕ್ಕಳು ಎಷ್ಟು ಸುಲಭವಾಗಿ ನಿಮ್ಮ ಮಾತಿಗೆ ಬಗ್ಗುತ್ತಾರೆ ಗೊತ್ತಾ?

ಮಗು ಒಂದೇ ಮನೇಲಿರುತ್ತಾ? ಹಾಗಾದ್ರೆ ಈ ವಿಷ್ಯ ಗಮನದಲ್ಲಿರಲಿ...

ಈ ರೀತಿಯಾಗಿ ಹೇಳಿದರೆ ಮಕ್ಕಳಲ್ಲಿ ನಿಮ್ಮ ಬಗ್ಗೆ ಗೌರವ, ಪ್ರೀತಿ ಮೂಡುತ್ತದೆ. ಹಾಗೂ ಅವರು ನೀವು ಹೇಳಿದ ಎಲ್ಲಾ ಮಾತುಗಳನ್ನು ಕೇಳಿ ಅದರಂತೆ ನಡೆಯಲು ಆರಂಭಿಸುತ್ತಾರೆ. ಇದರಿಂದ ಅವರು ಉತ್ತಮ ವ್ಯಕ್ತಿಯಾಗಿಯೂ ರೂಪುಗೊಳ್ಳುತ್ತಾರೆ. ಎಲ್ಲವೂ ಹೇಳಿದ ಕೂಡಲೇ ಆಗಬೇಕೆಂದು ಬಯಸಿದರೂ ಸಾಧ್ಯವಿಲ್ಲ. ಸಹನೆ ಎಂಬುವುದು ಪೋಷಕರಿಗೆ ಮುಖ್ಯವೆಂದು ನೆನಪಿರಲಿ.

click me!