ಸುತ್ತ ಮುತ್ತಲ ಪೂರ್ತಿ ಕತ್ತಲೆ. ಸುಂದರ ನೀಲಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿದರೆ ಆಗೋ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಅಂತಹ ಸುಂದರ ಅನುಭೂತಿ ಪಡೆಯಲು ಈ ತಾಣಕ್ಕೆ ನೀವು ಹೋಗಬಹುದು.
ತಂಪಾದ ಗಾಳಿ, ಶುಭ್ರ ನೀಲಿ ಆಕಾಶ, ಅಲ್ಲಲ್ಲಿ ಚಲಿಸುವ ಮೋಡಗಳು, ಆಕಾಶದ ತುಂಬಾ ಒಂದಿಂಚು ಬಿಡದಂತೆ ತುಂಬಿರುವ ನಕ್ಷತ್ರಗಳು... ವಾವ್ ಆ ವರ್ಣನೆಯೇ ಕೇಳಲು ಚೆಂದ? ಅಂಥದ್ದೊಂದು ಅದ್ಭುತ ಜಾಗ ನಮ್ಮ ದೇಶದಲ್ಲೇ ಇದೆ!
ರಾಜಸ್ಥಾನದ ಅಲವರ್ ಜಿಲ್ಲೆಯ ಅರಾವಳಿ ರೇಂಜ್‌ನಲ್ಲಿ ಸರಿಸ್ಕಾ ಆಸ್ಟ್ರೋಪೋರ್ಟ್ ಹೆಸರಿನ ಒಂದು ರೆಸಾರ್ಟ್ ಇದೆ. ಭಾರತದ ಅತ್ಯಂತ ಕತ್ತಲ ಜಾಗಗಳಲ್ಲಿ ಒಂದಾದ ಅರಾವಳಿಯಲ್ಲಿ ನೀವು ಒಂದು ರಾತ್ರಿ ಕಳೆದರೆ ಅದ್ಭುತ ಅನುಭವ ನಿಮ್ಮದಾಗುತ್ತದೆ. ಹೆಚ್ಚಾಗಿ ಫೋಟೋಗ್ರಫಿಗೆ ಫೇವರೇಟ್ ಪ್ಲೇಸಾದ ಇದು ಅಸ್ಟ್ರಾನಮಿ ಪ್ರಿಯರಿಗೂ ಅಚ್ಚುಮೆಚ್ಚು.
ಪಾಕ್ ಎಂದರೆ ಪ್ರಕೃತಿ ಸೌಂದರ್ಯದ ಭೂಲೋಕದ ಸ್ವರ್ಗ!
ನಗರೀಕರಣದ ಪರಿಣಾಮ ಆಕಾಶದಲ್ಲಿ ನಕ್ಷತ್ರಗಳನ್ನು ಕಾಣುವುದೇ ಕಷ್ಟ. ನಕ್ಷತ್ರ ಪುಂಜಗಳನ್ನು ಕಣ್ಣಿನಲ್ಲಿ ತುಂಬಿ ಕೊಳ್ಳಬೇಕೆಂದರೆ ಆಸ್ಟ್ರೋಪೋರ್ಟ್ ಸರಿಸ್ಕಾಗೆ ಹೋಗಬೇಕು. ದೆಹಲಿಯಿಂದ 5 ಗಂಟೆ ಡ್ರೈವ್ ಮಾಡಿದರೆ ನೀವು ಈ ತಾಣವನ್ನು ತಲುಪಬಹುದು. ಮಕ್ಕಳಿಗೆ ಬೇರೆಯದ್ದೇ ಜಗತ್ತನ್ನು ತೋರಿಸುತ್ತದೆ ಈ ತಾಣ.
ಸರಿಸ್ಕಾ ರಾಜಸ್ಥಾನದ ಅರಾವಳಿ ಪರ್ವತ ಸಾಲಿನಲ್ಲಿರುವ ಪ್ರದೇಶ. ಇದು ನಗರೀಕರಣದಿಂದ ತುಂಬಾನೇ ದೂರ ಇದೆ. ಇದು ಒಂದು ರೀತಿಯ ರಾಯಲ್ ತಾಣವಿದು. ಇದು ಟೈಗರ್ ರಿಸೆರ್ವ್ ತಾಣವೂ ಆಗಿದೆ. ಇದೀಗ ಟ್ರಾವೆಲರ್‌ಗಳ ಫೆವರಿಟ್ ತಾಣವಾಗಿದೆ.
ಇಲ್ಲಿಗೆ ನೀವು ಮಳೆಗಾಲದಲ್ಲಿ ಭೇಟಿ ನೀಡಲು ಸಾಧ್ಯವಿಲ್ಲ. ಯಾಕಂದ್ರೆ ಮಳೆ, ಮೋಡದಿಂದಾಗಿ ನಕ್ಷತ್ರಗಳು ಕಾಣಿಸುವುದಿಲ್ಲ. ಇನ್ನು ಇಲ್ಲಿ ನಕ್ಷತ್ರಗಳನ್ನು ನೋಡಲು ಮಾಡರ್ನ್ ಟೆಲಿಸ್ಕೋಪ್ ಕೂಡ ಇದೆ. ಅಲ್ಲದೆ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಬಹುದಾದ ಎಲ್ಲಾ ರೀತಿಯ ಸೌಲಭ್ಯಗಳು ಇಲ್ಲಿವೆ. ಜೊತೆಗೆ ನಕ್ಷತ್ರಗಳ ಅಧ್ಯಯನದ ಬಗ್ಗೆ ಕೋರ್ಸ್ ಗಳಿಗೂ ಇಲ್ಲಿದೆ ಅವಕಾಶ.
ಒಂದು ರಾತ್ರಿಗೆ ರೆಂಟ್
ಇಲ್ಲಿ ರಾತ್ರಿ ಕಳೆಯಲು ಟೆಂಟ್ ಸೌಲಭ್ಯವಿದೆ. ಸ್ಟುಡಿಯೋ ಅಪಾರ್ಟ್ಮೆಂಟ್‌ನಂತಿರುವ ಸ್ಟೈಲ್ ಗ್ಯಾಲಕ್ಸಿಯ ಟೆಂಟ್ ಬೆಲೆ ಒಂದು ರಾತ್ರಿಗೆ 13,000 ರೂ. ಇನ್ನು ನೆಬುಲಾ ಸ್ವಿಸ್ ಟೆಂಟ್ ಕಾಟೇಜ್ ಬೆಲೆ 22,000 ರೂ ಇದೆ.
ಟ್ರಾವೆಲ್ ಬ್ಯಾಗ್‌ನಲ್ಲಿ ಇರಲೇ ಬೇಕಾದ 7 ವಸ್ತುಗಳು!
ಏನೇನು ನೋಡಬಹುದು?
ನಿಸರ್ಗ ಸೌಂದರ್ಯ ಸವಿಯೋ ಮನಸ್ಸಿರುವವರಿಗೆ ಇಲ್ಲಿ ಹಬ್ಬ. ಜಂಗಲ್ ಸಫಾರಿಯನ್ನೂ ಮಾಡಬಹುದು, ಆರ್ಗಾನಿಕ್ ಫಾರ್ಮ್‌ಗೆ ಭೇಟಿ ನೀಡಬಹುದು ಹಾಗೂ ಅಲ್ಲಿಯ ಆಹಾರವನ್ನು ಸೇವಿಸಬಹುದು. ಕಾಡಿನಲ್ಲಿ ಬೆಂಗಾಲ್ ಟೈಗರ್, ನೀಲ್ ಗೈ, ಸೇರಿ ವಿಶೇಷ ತಳಿಯ ಎಲ್ಲೂ ಕಾಣಸಿಗದ ಅಪರೂಪದ ಪ್ರಾಣಿ, ಪಕ್ಷಿಗಳನ್ನೂ ಇಲ್ಲಿ ಕಣ್ತುಂಬಿಸಿಕೊಳ್ಳಬಹುದು. ಅಷ್ಟೇ ಯಾಕೆ ಸೈಕಲ್ ಟೂರ್ ಮಾಡಬಹುದು, ಸೋಲಾರ್ ವಾಕ್, ನೇಚರ್ ವಾಕ್, ಆಯುರ್ವೇದ ಸೆಷನ್ ಇದೆಲ್ಲದರ ಅನುಭವ ಈ ಒಂದು ತಾಣದಲ್ಲಿಯೇ ಪಡೆಯಬಹುದು. ಟ್ರಾವೆಲ್ ಮಾಡೋರಿಗೆ ಇಂಥ ಒಂದು ತಾಣ ಸಿಕ್ಕಿದ್ರೆ ಮತ್ತೇನು ಬೇಕು ಹೇಳಿ?