ಯಾವುದೋ ಒಂದು ಕೆಲಸ ಮಾಡುತ್ತಿರುತ್ತೀರಿ. ಆದರೆ ನಿಮ್ಮ ಆಲೋಚನೆಯು ಸಂಪೂರ್ಣವಾಗಿ ಬೇರೆ ಯಾವುದೂ ಕಡೆಯಲ್ಲಿ ಇರುತ್ತದೆ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನೇ ಮರೆತು ನಿಮ್ಮ ಆಲೋಚನೆಯಲ್ಲಿ ಮುಳುಗಿ ಇರುತ್ತೀರಿ. ಇಂತಹ ಅನುಭವಗಳು ಸಾಕಷ್ಟು ಬಾರಿ ಆಗಿರಬಹುದು.
ಯಾವುದೇ ಒಂದು ದಿನದಂದು ನಿಮ್ಮ ಮನಸ್ಸಿನಲ್ಲಿ ನಿರಂತರವಾದ ಆಲೋಚನೆಗಳ ಹರಿವನ್ನು ನೀವು ಅನುಭವಿಸಿರುತ್ತೀರಿ. ಹೀಗೆ ಬರುವ ಆಲೋಚನೆಗಳಿಗೆ ನಿಮ್ಮ ಅನುಮತಿ (permission) ಬೇಕೆಂದಿಲ್ಲ. ಅದರಲ್ಲಿಯೂ ನಿಮ್ಮ ಬಹುಪಾಲು ಆಲೋಚನೆಗಳ ಕಡೆಗೆ ನೀವು ನಿಜವಾಗಿಯೂ ಹೆಚ್ಚು ಗಮನ ಕೊಟ್ಟಿರುವುದಿಲ್ಲ. ಅವು ಬರುತ್ತದೆ, ಹೋಗುತ್ತವೆ. ನೀವು ಎಂದಾದರೂ ಧ್ಯಾನವನ್ನು ಮಾಡಲು ಪ್ರಯತ್ನಿಸಿದರೆ ನಿಮ್ಮ ಆಲೋಚನೆಗಳನ್ನು ಗಮನಿಸುವ ಕ್ರಿಯೆಯನ್ನು ನೀವು ಬಹುಶಃ ತಿಳಿದಿರಬಹುದು.
ಒಳನುಗ್ಗುವ ಆಲೋಚನೆಗಳಿಗೆ ಉದಾಹರಣೆಗಳು (examples).
ಸಂಬಂಧಗಳು (Relationships)
ನಿಮ್ಮ ಸಂಬಂಧವು ಇತರರೊಂದಿಗೆ ಕಾರ್ಯ ನಿರ್ವಹಿಸುತ್ತಿದೆಯೆ ಎಂಬ ಬಗ್ಗೆ ಅನುಮಾನ ಉಂಟಾಗುವುದು. ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಯಾವ ರೀತಿ ಭಾವನೆ ಇರಬಹುದು, ಅವರು ನಿಮಗೆ ಮೋಸ ಮಾಡುತ್ತಿರಬಹುದೇ ಅಥವಾ ವಿಶ್ವಾಸದ್ರೋಹಿ ಆಗಿರಬಹುದೇ. ನೀವೇ ಯಾರಿಗಾದರೂ ಮೋಸ ಮಾಡುತ್ತಿದ್ದೀರಾ? ಎಂಬೆಲ್ಲ ಆಲೋಚನೆಗಳು ಬರುವುದು.
ಹಿಂಸಾತ್ಮಕ (Violent)
ನೀವೇನಾದರೂ ಹಲ್ಲೆ ಮಾಡಿ ಬಿಡಬಹುದೇನೋ ಎಂಬಂತಹ ಯೋಚನೆಗಳು, ಮುಗ್ಧ ವ್ಯಕ್ತಿಗಳನ್ನು ನೀವು ಗೊತ್ತಿಲ್ಲದೆಯೇ ಅಥವಾ ಗೊತ್ತಿದ್ದು ಕೊಂದುಬಿಡು ಬಿಡಬಹುದೇನೋ ಎಂಬ ಭಯ, ಕಾರು ಬಸ್ಸು ಅಥವಾ ರೈಲಿನ ಮುಂದೆ ಹಾರಿಬಿಡುವ ಅಂತಹ ಭಾವನೆ.
Junk Foodನಿಂದ ದೂರ ಇರೋಕೆ ಈ ಟಿಪ್ಸ್ ಫಾಲೋ ಮಾಡಿ..
ಆರೋಗ್ಯ ಸಂಬಂಧಿ (Health Related)
ದೇಹದ ಮೇಲಿರುವ ಮಚ್ಚೆಯನ್ನು ನೋಡಿ ಇದು ಕ್ಯಾನ್ಸರ್ನಿಂದ ಬಂದಿರಬಹುದೇ ಅಥವಾ ಬೇರೆ ಏನಾದರೂ ಆಗಿರಬಹುದು ಎಂದು ಆತಂಕಪಡುವುದು, ನಿಮಗೇನಾದರೂ ಮಾರಣಾಂತಿಕ ಕಾಯಿಲೆ ಬಂದಿರಬಹುದೇ, ನಿಮಗೆ ಯಾಕೆ ಯಾವಾಗಲೂ ಅನಾರೋಗ್ಯ ಎದುರಾಗುತ್ತದೆ ಎಂದು ಚಿಂತಿಸುವುದು.
ಈ ಎಲ್ಲ ಉದಾಹರಣೆಗಳು ನಮಗೆ ಅರಿವಿಲ್ಲದೆ ಒಳನುಗ್ಗುವ ಆಲೋಚನೆಗಳ ಸಂಕೇತ. ಹಾಗಾದರೆ ಇಂತಹ ಆಲೋಚನೆಗಳನ್ನು ತಡೆಗಟ್ಟುವುದು ಹೇಗೆ.
ಮೊದಲನೆಯದಾಗಿ ಯಾವ ವಿಷಯದ ಬಗ್ಗೆ ಆಲೋಚನೆಗಳು ಒಳ ನುಗ್ಗುತ್ತಿವೆ ಎಂಬುದನ್ನು ಗುರುತಿಸಿಕೊಳ್ಳಿ ಇದಕ್ಕೆ ಧ್ಯಾನ ಮಾಡುವುದು ಒಳ್ಳೆಯ ಉಪಾಯವಾಗಿದೆ. ಸಾಮಾನ್ಯವಾಗಿ ಧ್ಯಾನ ಮಾಡುವುದು ಉದ್ವೇಗ ಹಾಗೂ ಒತ್ತಡ ಕಡಿಮೆಮಾಡಿಕೊಳ್ಳಲು. ಆದರೆ ಇದರಿಂದ ಹಲವಾರು ಉಪಯೋಗಗಳಿವೆ (Uses). ಅದರಲ್ಲಿಯೂ ನಿಮ್ಮ ಮನಸ್ಸಿನಲ್ಲಿ ಯಾವ ಆಲೋಚನೆಗಳು ಓಡುತ್ತಿದೆ ಹಾಗೂ ಅದಕ್ಕೆ ಕಾರಣವೇನು ಎಂದು ಅರ್ಥಮಾಡಿಕೊಳ್ಳುವುದಕ್ಕೆ ಇದು ಉತ್ತಮ ಮಾರ್ಗ.
ನಿಮ್ಮ ಮನಸ್ಸಿನಲ್ಲಿ ಯಾವ ಆಲೋಚನೆಗಳು ಬರುತ್ತಿದೆ ಎಂಬುದು ಗುರುತಿಸಿಕೊಂಡ ಬಳಿಕ ಅದನ್ನು ಒಪ್ಪಿಕೊಳ್ಳಿ. ಅದನ್ನು ಕಡೆಗಣಿಸುವುದು ಅಥವಾ ಕೀಳಾಗಿ ನೋಡುವುದು ಇನ್ನೂ ಉತ್ಕೃಷ್ಟ ಮಟ್ಟದ ಆಲೋಚನೆಗಳಿಗೆ ದಾರಿ ಮಾಡಬಹುದು. ಹೀಗೆ ಬರುವ ಆಲೋಚನೆಗಳಿಂದ ನೀವು ಕೆಟ್ಟವರು ಎಂಬ ಅರ್ಥವಿಲ್ಲ ಇದು ಸ್ವಾಭಾವಿಕ (Normal) ಅದನ್ನು ಒಪ್ಪಿಕೊಳ್ಳಿ ನಿಮಗೆ ಮಾತ್ರವಲ್ಲ ಇದು ಹೆಚ್ಚಾಗಿ ಎಲ್ಲರಲ್ಲಿಯೂ ಕಂಡುಬರುವಂತಹ ವಿಷಯ.
Face Reading: ಮುಖ ನೋಡಿ ವ್ಯಕ್ತಿಯ ವ್ಯಕ್ತಿತ್ವ ಹೇಳಬಹುದು!
ಹಾದುಹೋಗಲು (Pass by) ಬಿಡಿ
ಆಲೋಚನೆಯ ಮೂಲಕ ತಿಳಿದು ಅದನ್ನು ಒಪ್ಪಿಕೊಂಡು ಬಿಟ್ಟಿದ್ದೀರಿ ಈಗ ಮಾಡಬೇಕಾಗಿರುವುದು ಆಲೋಚನೆಗಳನ್ನು ಹಾದುಹೋಗಲು ಬಿಟ್ಟುಬಿಡಿ. ಅಂದರೆ ನಿಮಗೆ ಅಂತಹ ಆಲೋಚನೆಗಳು ತಲೆಯಲ್ಲಿ ಬರುತ್ತಿವೆ ಎಂದಾದಾಗ ಬೇರೆ ಯಾವುದಾದರೂ ವಿಷಯದ ಬಗ್ಗೆ ಯೋಚಿಸಲು ಪ್ರಯತ್ನಿಸಿ. ಬೇರೆ ಕೆಲಸದಲ್ಲಿ ತೊಡಗಿಕೊಳ್ಳಿ. ಒಮ್ಮೆ ನಿಮ್ಮ ತಲೆಯಲ್ಲಿ ಹಾದುಹೋದ ಆಲೋಚನೆಯ ಬಗ್ಗೆ ಗುರುತಿಸಿಕೊಂಡ ಬಳಿಕ ನಿಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸಿ. ಇಲ್ಲವಾದರೆ ಇಂತಹ ಆಲೋಚನೆಗಳು ನಿಮ್ಮ ಇಡೀ ದಿನವನ್ನು (day) ತಿಂದು ಹಾಕಿಬಿಡಬಹುದು.
ಇನ್ನು ಮೇಲಿನ ಮೂರು ಮಾತುಗಳಿಂದ ಇಂತಹ ಮನಸ್ಸಿನೊಳಗೆ ನುಗ್ಗಿಬರುವ ಆಲೋಚನೆಗಳಿಂದ ಮುಕ್ತಿ ಹೊಂದಬಹುದು. ಇನ್ನು ಕೊನೆಯದಾಗಿ ನಿಮ್ಮ ಜೀವನವನ್ನು ನೀವೇ ಜೀವಿಸಿ. ಈಗಾಗಲೇ ಇಂತಹ ಆಲೋಚನೆಗಳು ಎಲ್ಲರಲ್ಲಿಯೂ ಸಾಮಾನ್ಯ ಎಂಬುದನ್ನು ನೀವು ಅರಿತುಕೊಂಡಿದ್ದೀರಿ. ಆದ್ದರಿಂದ ಅದರ ಬಗ್ಗೆ ಜಾಸ್ತಿ ಯೋಚನೆ ಮಾಡದೆ ಇರುವ ಜೀವನವನ್ನು ಖುಷಿಯಿಂದ ಕಳೆಯಲು ಪ್ರಯತ್ನಿಸಿ.