ಈ ಖಾರದ ಕಡ್ಡಿ ಎಂಬುದು ಭಾರತದಾದ್ಯಂತ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಜನಪ್ರಿಯತೆ ಪಡೆದೇ ಇದೆ. ಟೀ ಟೈಂ ಸ್ನ್ಯಾಕ್ ಅಷ್ಟೇ ಅಲ್ಲದೆ, ಸಾರು ಸಾಂಬಾರನ್ನದ ಜೊತೆಗೆ, ಚಾಟ್ಸ್ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅವುಗಳಲ್ಲೊಂದು ವಿಧವಾದ ಟೊಮ್ಯಾಟೋ ಸೇವ್ ಮಾಡುವುದು ಹೇಗೆ ಗೊತ್ತಾ?
ಸಾಂಪ್ರದಾಯಿಕ ಕಡಲೆಹಿಟ್ಟಿನ ಸೇವ್‌ಗೆ ಹೋಲಿಸಿದರೆ ಟೊಮ್ಯಾಟೋ ಸೇವ್ ಹೆಚ್ಚು ರುಚಿಕರ. ಏಕೆಂದರೆ ಇದರಲ್ಲಿ ಟೊಮ್ಯಾಟೋ ಫ್ಲೇವರ್ ಇರುತ್ತದೆ. ಟೊಮ್ಯಾಟೋ ಸೇರಿಸುವುದರಿಂದ ಇದು ಉತ್ತಮ ಅರೋಮಾವನ್ನು ಹೊಂದಿರುತ್ತದೆ, ಜೊತೆಗೆ ಸ್ವಲ್ಪ ಹುಳಿ ರುಚಿಯೂ ನಾಲಿಗೆಯ ಮೇಲೆ ನಳನಳಿಸುತ್ತದೆ.
ತೆಳ್ಳಗಿನ ಶೇಪರ್ ಬಳಸಿದರೆ ಚಾಟ್‌ಗಳ ಮೇಲೆ ಉದುರಿಸಲು ಚೆನ್ನಾಗಾಗುತ್ತದೆ. ಆದರೆ, ನೀವು ದಪ್ಪನೆಯ ಸೇವನ್ನು ಕೂಡಾ ಟ್ರೈ ಮಾಡಿ ನೋಡಬಹುದು. ಇದು ಹಾಗೇ ತಿನ್ನಲು ಮಾತ್ರವಲ್ಲದೆ ಪಾನಿಪುರಿ, ಮಸಾಲೆಪುರಿ, ದಹಿ ಪುರಿ, ಮಂಡಕ್ಕಿ ಸೇರಿದಂತೆ ಹಲವು ಚಾಟ್‌ಗಳಿಗೆ ಕೂಡಾ ಬಳಸಬಹುದು.
ತಯಾರಿ ಸಮಯ: 10 ನಿಮಿಷಗಳು
ಕುಕಿಂಗ್ ಟೈಂ: 30 ನಿಮಿಷಗಳು
ಅಳತೆ: 2 ಬಾಕ್ಸ್
ಬೇಕಾಗುವ ಸಾಮಗ್ರಿಗಳು:
- 1 ಟೊಮ್ಯಾಟೋ ಸಣ್ಣದಾಗಿ ಹೆಚ್ಚಿದ್ದು
- 2 ಕಪ್ ಕಡಲೆ ಹಿಟ್ಟು
- 1/2 ಅಕ್ಕಿ ಹಿಟ್ಟು
- 1/2 ಚಮಚ ಅರಿಶಿನ
- 1 ಚಮಚ ಕೆಂಪು ಮೆಣಸಿನ ಪುಡಿ
- ಇಂಗು ಚಿಟಿಕೆ
- 1 ಚಮಚ ಉಪ್ಪು
- 2 ಚಮಚ ಬೆಣ್ಣೆ
- 1/2 ಚಮಚ ಅಜ್ವಾನ್
- ನಾದಲು ನೀರು
- ಕರಿಯಲು ಎಣ್ಣೆ
ಮಾಡುವ ವಿಧಾನ:
ಮಾಮೂಲಿ ಇಡ್ಲಿ ತಿಂದು ಬೇಜಾರಾದ್ರೆ ಇಲ್ಲಿದೆ ಟೊಮೆಟೋ ಇಡ್ಲಿ
ಮೊದಲಿಗೆ 1 ಟೊಮ್ಯಾಟೋವನ್ನು ನೀರೇನೂ ಸೇರಿಸಿಕೊಳ್ಳದೆ ಬ್ಲೆಂಡ್ ಮಾಡಿಕೊಳ್ಳಿ. ಇದರಿಂದ ಸಿಪ್ಪೆ ಹಾಗೂ ಬೀಜಗಳನ್ನು ತೆಗೆಯಿರಿ. ನಿಮಗೆ ಸ್ವಲ್ಪ ಹುಳಿ ಹುಳಿ ಇದ್ದರೆ ಇಷ್ಟವಾಗುತ್ತದೆಂದರೆ ಹೆಚ್ಚು ಟೊಮ್ಯಾಟೋ ಹಾಕಬಹುದು. ಜೊತೆಗೆ ಮೊಸರನ್ನೂ ಸೇರಿಸಬಹುದು.
ಬಾಣಲೆಯೊಂದಕ್ಕೆ 2 ಕಪ್ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಕೆಂಪು ಮೆಣಸಿನ ಪುಡಿ, ಇಂಗು ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಅಕ್ಕಿ ಹಿಟ್ಟು ಹಾಕುವುದರಿಂದ ಹೆಚ್ಚು ಗರಿಗರಿಯಾಗಿ ಬರುತ್ತದೆ. ಇದ್ಕೆ ಬೆಣ್ಣೆ ಹಾಗೂ ಅಜ್ವಾನ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಟೊಮ್ಯಾಟೋ ಪೇಸ್ಟ್ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಳ್ಳುತ್ತಾ ಕಲೆಸಿ. ಚೆನ್ನಾಗಿ ನಾದುತ್ತಾ ಚಪಾತಿ ಹಿಟ್ಟಿನ ಹದಕ್ಕೆ ತನ್ನಿ.
ಅರ್ಧ ಗಂಟೆ ಹಿಟ್ಟನ್ನು ಹಾಗೇ ಇಟ್ಟ ಬಳಿಕ ತೆಳ್ಳಗಿನ ಶೇಪರ್‌ನ್ನು ಚಕ್ಲಿ ಮೇಕರ್‌ಗೆ ಹಾಕಿಕೊಂಡು ಇದಕ್ಕೆ ಸಣ್ಣ ಸಣ್ಣ ಹಿಟ್ಟಿನ ಉಂಡೆಗಳನ್ನು ಹಾಕಿ.
ಶೇಂಗಾ ಟೊಮ್ಯಾಟೊ ಚಟ್ನಿ ಸವಿದಿದ್ದೀರಾ?
ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು, ಕಾದ ಬಳಿಕ, ಅದರ ಮೇಲೆ ಶೇಪರ್‌ನಲ್ಲಿ ಸೇವನ್ನು ಬಿಡುತ್ತಾ ಹೋಗಿ. ಬಾಣಲೆಗೆ ಅತಿಯಾಗುವಷ್ಟು ತುಂಬಬೇಡಿ. ಸ್ವಲ್ಪ ಸ್ವಲ್ಪವೇ ಸೇವನ್ನು ಸಣ್ಣ ಉರಿಯಲ್ಲಿ ಬೇಯಿಸಿದಷ್ಟೂ ಹದ ಸರಿಯಾಗಿ ಬರುತ್ತದೆ. ಇದು ಕೆಂಪಗಾಗುವರೆಗೆ ಕರಿದು, ಮೇಲಿನಿಂದ ಕರಿಬೇವಿನ ಎಲೆಗಳನ್ನು ಹಾಕಿ. ಕರಿಬೇವು ಚಟರ್ಪಟರ್ ಎಂದ ಮೇಲೆ ಸೇವನ್ನು ಎಣ್ಣೆಯಿಂದ ತೆಗೆದು ಕಿಚನ್ ಪೇಪರ್ ಮೇಲೆ ಹರಡಿ. ಎಣ್ಣೆಯನ್ನು ಪೇಪರ್ ಹೀರಿಕೊಂಡ ಬಳಿಕ ಟೊಮ್ಯಾಟೋ ಸೇವನ್ನು ಸಣ್ಣಸಣ್ಣದಾಗಿ ತುಂಡು ಮಾಡಿ ಬಾಕ್ಸ್‌ಗೆ ಹಾಕಿ ತೆಗೆದಿಡಿ. ಏರ್‌ಟೈಟ್ ಕಂಟೇನರ್‌ನಲ್ಲಿಟ್ಟರೆ 1 ತಿಂಗಳ ಕಾಲ ಕೆಡದೆ ತಾಜಾ ಆಗೇ ಇರುತ್ತದೆ.