ಆ ಹುಡುಗ ನಿಜವಾಗ್ಲೂ ಲವ್ ಮಾಡ್ತಾ ಇದ್ದಾನಾ?

Published : Dec 22, 2018, 03:27 PM ISTUpdated : Dec 22, 2018, 03:28 PM IST
ಆ ಹುಡುಗ ನಿಜವಾಗ್ಲೂ ಲವ್ ಮಾಡ್ತಾ ಇದ್ದಾನಾ?

ಸಾರಾಂಶ

  ಪ್ರೀತಿಯಲ್ಲಿ ಬಿದ್ದಿರ್ತಾರೆ. ಆದರೆ, ಏನೋ ಡೌಟ್ ಕಾಡಲಾರಂಭಿಸುತ್ತೆ ಈ ಹುಡುಗಿಯರಿಗೆ. ಏಕೋ ಅವೈಯ್ಡ್ ಮಾಡ್ತಿದ್ದಾನೆ, ದೂರುವಾಗುತ್ತಿದ್ದಾನೆ ಎನ್ನುವ ಅನುಮಾನ. ಅಷ್ಟಕ್ಕೂ ನೈಜ ಪ್ರೀತಿಯನ್ನು ಪತ್ತೆ ಹಚ್ಚೋದು ಹೇಗೆ?

ಪ್ರೀತಿಯಲ್ಲಿ ಬೀಳೋದು ತುಂಬಾನೇ ಸುಲಭ. ಅದಕ್ಕೆ ಹೊತ್ತು ಗೊತ್ತು ಇರೋಲ್ಲ. ಯಾವಾಗ ಬೇಕಾದರೂ ಲವ್ ಆಗತ್ತೆ. ಆದರೆ ಒಮ್ಮೆ ಪ್ರೀತಿಸಿದವರ ಜೊತೆ ಭವಿಷ್ಯ ಕಲ್ಪಿಸಿಕೊಂಡ ನಂತರ ಸಮಸ್ಯೆಗಳು ಆರಂಭವಾಗುತ್ತವೆ. ನಂತರ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಹುಡುಗರ ನೈಜ ಪ್ರೀತಿ ಪತ್ತೆ ಹಚ್ಚಬಹುದು. ಕೆಲವು ಗುಣಗಳು ಅವರಲ್ಲಿದ್ದರೆ, ಜೀವನ ಪರ್ಯಂತ ನಿಮ್ಮನ್ನು ಸುಖವಾಗಿಡುತ್ತಾನೆಂದೇ ಅರ್ಥ. ಅಷ್ಟಕ್ಕೂ ಅದ್ಯಾವ ಗುಣಗಳಿರಬೇಕು ಅವನಲ್ಲಿ?

ನಿಮಗಿಂತ ಚೆನ್ನಾಗಿ ನಿಮ್ಮನ್ನು ಅರ್ಥ ಮಾಡಿಕೊಂಡಿದ್ದರೆ: ಯಾವ ಸಂದರ್ಭದಲ್ಲಿ ತನ್ನ ಹುಡುಗಿ ಹೇಗೆ ವರ್ತಿಸುತ್ತಾಳೆ, ಆಕೆಗೆ ಏನು ಇಷ್ಟ, ಏನಿಷ್ಟವಿಲ್ಲ ಎಲ್ಲವೂ ಅವರಿಗೆ ತಿಳಿದಿರುತ್ತದೆ. ಸಹಾಯ ಕೇಳದೆಯೇ ಸಹಕರಿಸುತ್ತಾರೆ

ಸಮಸ್ಯೆಗಳ ಪರಿಹಾರ: ತಮ್ಮ ರಿಲೇಷನ್‌ಶಿಪ್‌ನಲ್ಲಿ ಯಾವುದೇ ಸಮಸ್ಯೆಗಳು ಬಂದರೂ ಇವರು ಹೆದರೋಲ್ಲ. ಆ ಸಮಸ್ಯೆ ತನ್ನ ಹುಡುಗಿ ಕರಿಯರ್‌ನದ್ದಾಗಲಿ ಅಥವಾ ಕುಟುಂಬದಲ್ಲೇ ಇರಲಿ, ಧೈರ್ಯವಾಗಿ ಬಂದ ಪರಿಸ್ಥಿತಿಯನ್ನು ಎದುರಿಸುತ್ತಾರೆ.

ಬದ್ಧರಾಗಿರುತ್ತಾರೆ: ಇವರು ತಮ್ಮ ಹುಡುಗಿ ಮತ್ತು ಪ್ರೀತಿಗೆ ಬದ್ಧರಾಗಿರುತ್ತಾರೆ. ತುಂಬಾ ನಂಬಿಕಸ್ಥನೂ ಆಗಿರುತ್ತಾರೆ. ಪ್ರೀತಿಗಾಗಿ, ತನ್ನ ಒಲುಮೆಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡುವ ತಾಕತ್ತು ಮತ್ತು ಧೈರ್ಯ ಇವರಿಗೆ ಇರುತ್ತದೆ.

ಭವಿಷ್ಯದ ಬಗ್ಗೆ ಮಾತನಾಡುತ್ತಾರೆ : ಪ್ರೀತಿಸುವ ಹುಡುಗ ತಮ್ಮ ಭವಿಷ್ಯದ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಮಾತನಾಡುತ್ತಾನೆ ಎಂದರೆ ಆತನನ್ನು ಯಾವತ್ತೂ ಕಡೆಗಣಿಸಬೇಡಿ. ಯಾಕೆಂದರೆ ಅವರ ಭವಿಷ್ಯದಲ್ಲಿ ನಿಮಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂದರ್ಥ.

ತಪ್ಪನ್ನು ಸರಿ ಪಡಿಸುತ್ತಾನೆ: ಇಬ್ಬರ ನಡುವೆ ಜಗಳವಾದ ಅಥವಾ ಹುಡುಗಿಯೇ ತಪ್ಪು ಮಾಡಿದ್ದರೆ ಆತ ಅದನ್ನೇ ದೊಡ್ಡ ವಿಷಯ ಮಾಡುವುದಿಲ್ಲ. ಬದಲಾಗಿ ಆ ತಪ್ಪನ್ನು ಸುಲಭವಾಗಿ ಸರಿ ಪಡಿಸುತ್ತಾನೆ. ಯಾವುದೇ ಕಾರಣಕ್ಕೂ ಸಂಬಂಧವನ್ನು ಮುರಿಯುವುದಿಲ್ಲ. ಸಂಬಂಧವನ್ನು ಗಟ್ಟಿಯಾಗಿಡುತ್ತಾರೆ.

ಸ್ಪೆಷಲ್ ಫೀಲ್ ಆಗುವಂತೆ ಮಾಡುತ್ತಾರೆ: ತನ್ನ ಹುಡುಗಿಯನ್ನು ಸಂತೋಷವಾಗಿಡಲು, ಆಕೆಯನ್ನು ರಾಣಿಯಂತೆ ನೋಡಿಕೊಳ್ಳಲು ಎಲ್ಲ ರೀತಿಯಲ್ಲೂ ಸಹಕರಿಸುತ್ತಾನೆ. ಆತ ಹುಡುಗಿ ಜೊತೆಗಿದ್ದರೆ ಹುಡುಗಿಗೆ ಯಾವತ್ತೂ ತಾನು ಒಂಟಿ ಎಂದು ಅನಿಸೋದೇ ಇಲ್ಲ.

ಇದ್ದಂತೆ ಸ್ವೀಕರಿಸುತ್ತಾನೆ: ಹುಡುಗಿ ಸ್ವಲ್ಪ ಸಿಡುಕಿಯಾಗಿದ್ದರು ಅಥವಾ ಹೆಚ್ಚು ಮಾತುಗಾರ್ತಿಯಾಗಿದ್ದರೂ ಬದಲಾಗು ಎಂದು ಈತ ಯಾವತ್ತೂ ಹೇಳುವುದಿಲ್ಲ. ಬದಲಾಗಿ ಇದ್ದಂತೆ ಆಕೆಯನ್ನು ಸ್ವೀಕರಿಸುತ್ತಾನೆ. ನೀವು ಆರಿಸಿಕೊಂಡಿರುವ ಹುಡುಗನಲ್ಲಿ ಇಂಥ ಗುಣಗಳಿದ್ದರೆ, ಯೋಚಿಸಲೇ ಬೇಡಿ. ಆತ ನಿಮಗಾಗಿ ಏನು ಬೇಕಾದರೂ ಮಾಡಲು ಸಿದ್ಧರೆಂದರ್ಥ. ಆಲ್ ದಿ ಬೆಸ್ಟ್ ಫಾರ್ ಯುವರ್ ರಿಲೇಷನ್‌ಶಿಪ್.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Chanakya Niti: ಈ ವಿಷ್ಯದಲ್ಲಿ ಮಹಿಳೆಯರು ಪುರುಷರಿಗಿಂತ ಉತ್ತಮರು, ಅವರಂತೆ ಯಾರೂ ಇಲ್ಲ
37ರ ಪತ್ನಿಯ ಜೊತೆ 92ರ ಹರೆಯದಲ್ಲಿ ಮಗುವಿಗೆ ತಂದೆಯಾದ ವೈದ್ಯ