Safety Tips : ನಿಮ್ಮ ವಾಹನ ಬೆನ್ನಟ್ಟಿ ಬರುವ ನಾಯಿಯನ್ನು ಹೀಗೆ ಎದುರಿಸಿ

By Suvarna NewsFirst Published Feb 1, 2022, 5:40 PM IST
Highlights

ಬೈಕ್ ಕಂಡ್ರೆ ಸಾಕು, ದಂಡು ನಾಯಿಗಳು ಬೆನ್ನಟ್ಟುತ್ವೆ, ಅಲ್ಲಿ ನಾನು ಬರಲ್ಲ ಅಂತಾ ನೀವೆ ಕೆಲವೊಮ್ಮೆ ಹೇಳಿರ್ತೀರಿ. ರಾತ್ರಿ ಆ ದಾರಿಯಲ್ಲಿ ಬರೋದು ಕಷ್ಟ, ನಾಯಿ ಕಾಟ ಜಾಸ್ತಿ ಎಂಬ ಮಾತನ್ನೂ ಕೇಳಿರ್ತೀರಿ, ಹೇಳಿರ್ತೀರಿ. ಈ ನಾಯಿಗಳು ಯಾಕೆ ನಿಮ್ಮ ವಾಹನದ ಹಿಂದೆ ಓಡಿ ಬರುತ್ವೆ ಗೊತ್ತಾ? ಅದಕ್ಕೆ ಏನು ಮಾಡ್ಬೇಕು?
 

ನಿಮಗೆ ಎಷ್ಟೇ ಧೈರ್ಯ(Bravery)ವಿರಲಿ. ದೊಡ್ಡ ದೊಡ್ಡ ಸಾಹಸ(Adventure )ಮಾಡಿ ಬಂದಿರಲಿ,ಆದ್ರೆ ಕೆಲವೊಂದು ಘಟನೆಗಳು ನಿಮ್ಮನ್ನು ಭಯ(Fear)ಗೊಳಿಸುತ್ತವೆ. ಅದ್ರಲ್ಲಿ ನಾಯಿ(Dog)ಓಡಿಸಿಕೊಂಡು ಬರುವುದು ಒಂದು. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಕೆಲ ನಾಯಿಗಳು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತವೆ. ಆಗ ಏನು ಮಾಡಬೇಕು ಎಂಬುದು ಗೊತ್ತಾಗುವುದಿಲ್ಲ. ಕೆಲವರು ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಅನಾಹುತ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರಿಗೆ ನಾಯಿ ಕಚ್ಚಿದ್ದೂ ಇದೆ. ಕಾರಿನಲ್ಲಿ ಹೋಗುವಾಗ ನಾಯಿ ಬೆನ್ನು ಹತ್ತಿದ್ರೆ ಸಮಸ್ಯೆ ಎನ್ನಿಸುವುದಿಲ್ಲ. ಬೈಕ್ ನಲ್ಲಿ ಹೋಗುವಾಗ ಸಮಸ್ಯೆಯಾಗುತ್ತದೆ. ವಿಶೇಷವಾಗಿ ರಾತ್ರಿ ಬೈಕ್ ಚಲಾಯಿಸುವಾಗ ನಾಯಿ ಓಡಿಸಿಕೊಂಡು ಬಂದಲ್ಲಿ ಏನು ಮಾಡ್ಬೇಕೆಂಬುದು ತಿಳಿಯುವುದಿಲ್ಲ. ಇಂದು ನಾಯಿ ನಿಮ್ಮ ವಾಹನದ ಹಿಂದೆ ಓಡಿ ಬರಲು ಕಾರಣವೇನು ಹಾಗೆ ನಾಯಿ ಓಡಿ ಬಂದ್ರೆ ಏನು ಮಾಡ್ಬೇಕೆಂದು ನಾವು ಹೇಳ್ತೆವೆ.

ಬೈಕ್ ಹಿಂದೆ ನಾಯಿ ಓಡಲು ಕಾರಣ : ನಮ್ಮ ಬೈಕ್ ಮುಂದೆಯೇ ಇನ್ನೊಂದು ಬೈಕ್ ಹೋಗ್ತಿರುತ್ತದೆ. ಆದ್ರೆ ಅದರ ಹಿಂದೆ ನಾಯಿ ಓಡಿ ಬರುವುದಿಲ್ಲ. ನಮ್ಮ ಬೈಕನ್ನು ಮಾತ್ರ ನಾಯಿ ಬೆನ್ನು ಹತ್ತಿರುತ್ತದೆ. ಇದು ನಾಯಿ ಸ್ವಭಾವವೆಂದು ನಾವು ಭಾವಿಸ್ತೇವೆ. ಆದ್ರೆ ಇದಕ್ಕೆ ವೈಜ್ಞಾನಿಕ ಕಾರಣವಿದೆ. ನಿಮಗೆಲ್ಲ ಗೊತ್ತಿರುವಂತೆ ನಾಯಿ ವಾಸನೆಯ ಮೂಲಕವೇ ವಸ್ತುವನ್ನು ಪತ್ತೆ ಮಾಡುತ್ತದೆ. ಬಹಳ ದೂರದಿಂದಲೇ ಅವು ವಾಸನೆಯನ್ನು ಪತ್ತೆ ಮಾಡುತ್ತವೆ. ಇನ್ನೊಂದು ನಾಯಿಯ ಸ್ವಭಾವವೆಂದ್ರೆ ಅದು ಬೇರೆ ನಾಯಿಗಳನ್ನು ತಮ್ಮ ಪ್ರದೇಶಕ್ಕೆ ಬರಲು ಬಿಡುವುದಿಲ್ಲ. ನಿಮ್ಮ ವಾಹನದ ಮೇಲೆ ಬೇರೆ ನಾಯಿ ಮೂತ್ರ ವಿಸರ್ಜನೆ ಮಾಡಿದ್ದರೆ ಅದರ ವಾಸನೆಯನ್ನು ಈ ನಾಯಿ ಪತ್ತೆ ಮಾಡುತ್ತದೆ. ಬೇರೆ ನಾಯಿಯೊಂದು ತನ್ನ ಪ್ರದೇಶಕ್ಕೆ ಬಂದಿದೆ ಎಂದು ಭಾವಿಸುವ ನಾಯಿ, ಅದನ್ನು ಓಡಿಸಲು ನಿಮ್ಮ ವಾಹನದ ಹಿಂದೆ ಓಡಿ ಬರುತ್ತದೆ.  ಅನೇಕ ಬಾರಿ ನಾಯಿಗಳು ವಾಹನದ ಅಡಿ ಸಿಕ್ಕು ಸಾವನ್ನಪ್ಪುತ್ತವೆ. ಆ ನಾಯಿಯ ತಂದೆ ಅಥವಾ ಸ್ನೇಹಿತರು ವಾಹನದ ಗುರುತಿಟ್ಟುಕೊಂಡಿರುತ್ತವೆ. ಆ ವಾಹನ ಕಣ್ಣಿಗೆ ಬಿದ್ದರೆ ಅದನ್ನು ಹಿಂಬಾಲಿಸುತ್ತವೆ.

ಇನ್ನೊಂದು ಕಾರಣವೆಂದ್ರೆ ನಾಯಿ ಭೇಟೆಯಾಡುವ ಪ್ರಾಣಿಗಳು. ಭೇಟೆಯಾಟ ಆಡುವುದು ಅವುಗಳಿಗೆ ಮನರಂಜನೆ ನೀಡುತ್ತದೆ. ನಿಮಗೆ ಹಾನಿ ಮಾಡದೆ ನಿಮ್ಮ ವಾಹನದ ಹಿಂದೆ ಓಡುವ ಮೂಲಕ ಮನರಂಜನೆ ಪಡೆಯುವುದು ಅವುಗಳ ಒಂದು ಅಭ್ಯಾಸವಾಗಿದೆ. 

Latest Videos

Frozen Shoulders: ಆರಂಭದಲ್ಲೇ ಎಚ್ಚರಿಕೆ ತೆಗೆದುಕೊಳ್ಳಿ

ಬೈಕ್ ವೇಗ ಹೆಚ್ಚಿಸಬೇಡಿ : ನಮ್ಮ ಪಾಡಿಗೆ ನಾವು ಬೈಕ್ ಚಲಾಯಿಸುತ್ತಿರುತ್ತೇವೆ. ಮೂಲೆಯಲ್ಲೆಲ್ಲೋ ಇದ್ದ ನಾಯಿ ನಮ್ಮ ವಾಹನ ಬೆನ್ನು ಹತ್ತುತ್ತದೆ. ಕೂಗುತ್ತ, ವಾಹನದ ಹಿಂದೆ, ಪಕ್ಕದಲ್ಲಿ ಓಡಿ ಬರ್ತಿದ್ದರೆ ಭಯವಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಆ್ಯಕ್ಸಿಲರೇಟರ್ ಜಾಸ್ತಿ ನೀಡ್ತೇವೆ. ಇದ್ರಿಂದ ವಾಹನದ ವೇಗ ಹೆಚ್ಚಾಗುತ್ತದೆ. ಗಮನ ಪೂರ್ತಿ ನಾಯಿ ಮೇಲಿರುವ ಕಾರಣ ಅಪಘಾತವಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಎಂದಿಗೂ ವೇಗವನ್ನು ಹೆಚ್ಚಿಸಬಾರದು. ನಾಯಿ ಬೊಗಳುತ್ತ ಓಡಿ ಬರ್ತಿದ್ದರೆ ವಾಹನದ ವೇಗವನ್ನು ಕಡಿಮೆ ಮಾಡಬೇಕು. ವೇಗ ಕಡಿಮೆಯಾಗ್ತಿದ್ದಂತೆ ಕೆಲ ನಾಯಿ ಬೊಗಳುವುದನ್ನು ನಿಲ್ಲಿಸುತ್ತದೆ. ಅದ್ರ ವೇಗವನ್ನೂ ಕಡಿಮೆ ಮಾಡಿ, ಹಿಂದಕ್ಕೆ ಹೋಗುತ್ತದೆ.

Stay Fit: ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್‌

ಬೈಕ್ ನಿಲ್ಲಿಸಿ : ಬೈಕ್ ವೇಗ ಕಡಿಮೆ ಮಾಡಿದಾಗ್ಲೂ ನಾಯಿ ನಿಮ್ಮನ್ನು ಬೆನ್ನು ಹತ್ತಿದ್ರೆ ಧೈರ್ಯ ಮಾಡಿ ನೀವು ಬೈಕ್ ನಿಲ್ಲಿಸಬಹುದು. ಬೈಕ್ ನಿಲ್ಲುತ್ತಿದ್ದಂತೆ ನಾಯಿ ಶಾಂತವಾಗುತ್ತದೆ. ಅದು ನಿಮ್ಮನ್ನು ಬಿಟ್ಟು ಹಿಂತಿರುಗಬಹುದು. ಕೆಲವೊಮ್ಮೆ ನಾಯಿ ನಿಮ್ಮ ಮೇಲೆ ದಾಳಿ ನಡೆಸುವ ಅಪಾಯವಿರುತ್ತದೆ. ಹಾಗಾಗಿ ವಾಹನವನ್ನು ನಿಲ್ಲಿಸುವಾಗ ಎಚ್ಚರಿಕೆ ವಹಿಸಬೇಕು. ನಾಯಿ ಶಾಂತವಾದ್ಮೇಲೆ ನೀವು ನಿಧಾನವಾಗಿ ವಾಹನವನ್ನು ಸ್ಟಾರ್ಟ್ ಮಾಡಿ ಸವಾರಿ ನಡೆಸಿ. 

click me!