ಆ ಸುಖಕ್ಕೆ ಇಲ್ಲಿವೆ ಶತಮಾನದ ಶತಾವರಿ ಟಿಪ್ಸ್!

Published : Jan 13, 2019, 02:33 PM IST
ಆ ಸುಖಕ್ಕೆ ಇಲ್ಲಿವೆ ಶತಮಾನದ ಶತಾವರಿ ಟಿಪ್ಸ್!

ಸಾರಾಂಶ

 ಮನಸ್ಸು ಮನಸ್ಸುಗಳು ಒಂದಾದಾಗ ಮಾತ್ರ ಲೈಂಗಿಕ ಸುಖ ಸಿಗುತ್ತದೆ. ಆದರೆ, ಕೆಲವೊಮ್ಮೆ ಕೆಲವು ದೈಹಿಕ ಹಾಗೂ ಮಾನಸಿಕ ಸಮಸ್ಯೆಯೂ ಅತೃಪ್ತಿಗೆ ಕಾರಣವಾಗಬಲ್ಲದು. ಅದಕ್ಕೆ ಶತಮಾನದ ಹಿಂದೆ ಮಾಡುತ್ತಿದ್ದ ಮದ್ದಿದು...

ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಲೈಂಗಿಕ ಜೀವನ ಸುಖಮಯವಾಗಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿರುತ್ತೆ. ಸೆಕ್ಸ್ ಲೈಫ್ ಚೆನ್ನಾಗಿರಲು ಹಿಂದಿನ ಕಾಲದಿಂದಲೂ ಜನರು ಬೇರೆ ಬೇರೆ ರೀತಿಯ ಆರೋಗ್ಯಕರ ಆಯುರ್ವೇದ ಔಷಧಿಗಳನ್ನು ಬಳಸುತ್ತಿದ್ದರು. ಇವತ್ತಿಗೂ ಈ ಔಷಧಿಗಳು ಪ್ರಸ್ತುತ. ಏನವು...?

ಅಶ್ವಗಂಧ: ಸೆಕ್ಸುಯಲ್‌ ಸಮಸ್ಯೆ ನಿವಾರಿಸಲು ಅಶ್ವಗಂಧ ಬೆಸ್ಟ್‌ ಔಷಧಿ. ಇದರ ರಸವನ್ನು ಪುರುಷರಿಗೆ ನೀಡಿದರೆ ದೇಹದ ನೈಟ್ರಿಕ್‌ ಆಕ್ಸೈಡ್‌ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದರಿಂದ ರಕ್ತನಾಳಗಳು ತೆರೆದುಕೊಂಡು ರಕ್ತ ಎಲ್ಲಾ ಭಾಗಗಳಿಗೂ ಸರಿಯಾಗಿ ಪರಿಚಲನೆಯಾಗುತ್ತದೆ. ಇದರಿಂದ ಸೆಕ್ಸ್‌‌ ಪವರ್‌ ಹೆಚ್ಚುತ್ತದೆ.  

ಶತಾವರಿ: ಶತಾವರಿ ಇದು ಸೆಕ್ಸ್ ಪವರ್ ಹೆಚ್ಚಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದೊಂದು ಉತ್ತಮ ಕಾಮೋತ್ತೇಜಕವಾಗಿದೆ. ಇದನ್ನು ಹೆಚ್ಚಾಗಿ ಮಹಿಳೆಯರು ಸೇವಿಸುತ್ತಾರೆ. ಇದು ಫಿಮೇಲ್‌ ಹಾರ್ಮೋನ್‌ ಲೆವೆಲ್ ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಪುರುಷರ ಸ್ಪರ್ಮ್ ಕೌಂಟ್ ಹೆಚ್ಚಲೂ ಸಹಕರಿಸುತ್ತದೆ. 

ತಾಲ್‌ಮಖಾನ: ಇದು ಪುರುಷರಿಗೆ ಉತ್ತಮ. ಪುರುಷರು ಇದನ್ನು ಸೇವಿಸುವುದರೆ ವೀರ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಗುಪ್ತಾಂಗದ ಕಡೆಗೆ ಹೆಚ್ಚಿನ ರಕ್ತ ಪರಿಚಲನೆಯಾಗುವಂತೆ ಮಾಡುತ್ತದೆ. ಸರಿಯಾಗಿ ರಕ್ತ ಪರಿಚಲನೆಯಾದರೆ ಲೈಂಗಿಕ ಜೀವನವೂ ಉತ್ತಮವಾಗಿರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?