ಯಾವ್ಯಾವ ವಯಸ್ಸಿನವರಿಗೆ ಎಷ್ಟೆಷ್ಟು ನಿದ್ರೆ ಬೇಕು? ಇಲ್ಲಿದೆ ಪಟ್ಟಿ

By Suvarna Web DeskFirst Published Apr 3, 2017, 11:01 AM IST
Highlights

ಸರಿಯಾದ ನಿದ್ರೆ ಸಿಕ್ಕಲಿಲ್ಲವೆಂದರೆ ಬೊಜ್ಜು, ಹೃದಯ ಕಾಯಿಲೆ, ಮಧುಮೇಹ ಇತ್ಯಾದಿ ತೊಂದರೆಗಳು ಬಾಧಿಸಬಹುದು.

ಬೆಂಗಳೂರು(ಏ. 03): ನಿದ್ರೆ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆಯ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಇಂದಿನ ಒತ್ತಡದ ಜೀವನದಲ್ಲಿ ನಿದ್ರೆ ಎಂಬುದು ಹಲವು ಮಂದಿಗೆ ಅಪರೂಪದ ನೆಂಟನಂತಾಗಿಬಿಟ್ಟಿದೆ. ಕೆಲಸದೊತ್ತಡ, ಟಿವಿ ಇತ್ಯಾದಿಗಳು ಜನರ ನಿದ್ರೆಗೆ ಸಂಚಕಾರ ತಂದಿವೆ.

ದಿನಕ್ಕೆ ಎಷ್ಟು ನಿದ್ರೆ ಮಾಡಬೇಕು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದ್ದೇ ಇದೆ. ಇಂತಿಷ್ಟೇ ನಿದ್ರಿಸಬೇಕು ಎಂದು ಎಲ್ಲಿಯೂ ಹೇಳಲಾಗಿಲ್ಲ. ತಜ್ಞರ ಪ್ರಕಾರ, ಒಂದೊಂದು ವಯೋಮಾನದ ವರ್ಗಕ್ಕೆ ಬೇರೆ ಬೇರೆ ಪ್ರಮಾಣದ ನಿದ್ರೆಯ ಅಗತ್ಯವಿರುತ್ತದೆ.

ದಿನಕ್ಕೆ ಎಷ್ಟು ನಿದ್ರೆ ಬೇಕು?

ನವಜಾತ ಶಿಶು(0-3 ತಿಂಗಳು): 14-17 ಗಂಟೆ

ಹಸುಳೆ(4-11 ತಿಂಗಳು): 14-15 ಗಂಟೆ

ಎಳೆಮಗು(12-35 ತಿಂಗಳು): 12-14 ಗಂಟೆ

ಶಾಲಾಪೂರ್ವ ಮಕ್ಕಳು(3-6 ವರ್ಷ): 11-13 ಗಂಟೆ

ಶಾಲಾ ಮಕ್ಕಳು(6-10 ವರ್ಷ): 10-11 ಗಂಟೆ

ಹದಿಹರೆಯದ ಮಕ್ಕಳು(11-18 ವರ್ಷ): 9.25 ಗಂಟೆ

ವಯಸ್ಕರು(18 ವರ್ಷ ಮೇಲ್ಪಟ್ಟು): 8 ಗಂಟೆ

ಆದರೆ, 65 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ವೃದ್ಧರಿಗೆ ದಿನಕ್ಕೆ 8ಗಂಟೆಗಿಂತ ಕಡಿಮೆ ನಿದ್ರೆ ಸಿಕ್ಕರೆ ಸಾಕು. ಆದರೆ, ಅವರು ಸ್ವಲ್ಪ ಹೊತ್ತು ಮಲಗಿದರೂ ನಿರ್ವಿಘ್ನವಾಗಿ ನಿದ್ರಿಸಿದರೆ ಅದೇ ಸಾಕಾಗುತ್ತದೆ. ವೃದ್ಧರಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಕೂಡ ಸುಖಕರ ನಿದ್ರೆಯ ಅಗತ್ಯವಿರುತ್ತದೆ. ಸರಿಯಾದ ನಿದ್ರೆ ಸಿಕ್ಕಲಿಲ್ಲವೆಂದರೆ ಬೊಜ್ಜು, ಹೃದಯ ಕಾಯಿಲೆ, ಮಧುಮೇಹ ಇತ್ಯಾದಿ ತೊಂದರೆಗಳು ಬಾಧಿಸಬಹುದು.

(ಮಾಹಿತಿ: ಝೀ ಮೀಡಿಯಾ ಬ್ಯೂರೋ)

click me!