
ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕೇ? ಹಾಗಾದರೆ ಈ ಆಹಾರಗಳನ್ನು ಸೇವಿಸಿ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಿಲ್ಲ. ಹುಡುಕಾಡಬೇಕಿಲ್ಲ. ಸುಲಭವಾಗಿ ಸಿಗುವ ಈ ಆಹಾರಗಳನ್ನು ನಿರಂತರವಾಗಿ ಸೇವಿಸಿ. ನಿಮ್ಮ ವೀರ್ಯಾಣುಗಳ ಸಂಖ್ಯೆ ಅಭಿವೃದ್ಧಿಯಾಗುತ್ತದೆ. ಸಂಗಾತಿಯ ಜೊತೆಗೆ ಆರೋಗ್ಯಯುತ ಲೈಂಗಿಕ ಕ್ರಿಯೆ ನಡೆಸಬಹುದು.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಬ್ರೋಮೇಲೈನ್ ಪ್ರಮಾಣ ಅಧಿಕವಾಗಿರುತ್ತದೆ. ಇದು ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸಲು ಸಹಾಯಕವಾಗಲಿದೆ.
ಡಾರ್ಕ್ ಚಾಕಲೇಟ್
ನಿಮಗೆ ಆಶ್ಚರ್ಯವಾಗಬಹುದು. ಚಾಕಲೇಟಾ ಅಂತ. ಆದರೆ ಇದು ಸತ್ಯ. ಡಾರ್ಕ್ ಚಾಕಲೇಟ್ ಎಂಡೋರ್ಪಿನ್ಸ್ ಬಿಡುಗಡೆಯನ್ನು ಹೆಚ್ಚಿಸುತ್ತದೆ.
ದಾಳಿಂಬೆ
ದಾಳಿಂಬೆ ಹಣ್ಣುಗಳಲ್ಲಿ ಆ್ಯಂಟಿಯಾಕ್ಸಿಡೆಂಟ್ ಗಳು ವೀರ್ಯಾಣುಗಳ ಸಂಖ್ಯೆಗಳನ್ನು ಕಡಿಮೆ ಮಾಡುವ ಅಂಶಗಳ ವಿರುದ್ಧ ಹೋರಾಡುತ್ತವೆ.
ವಾಲ್ನಟ್ಸ್
ಇದರಲ್ಲಿ ಒಮೆಗಾ-3 ಅಧಿಕವಾಗಿದ್ದು ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸಲು ಸಹಾಯಕವಾಗಲಿದೆ.
ಟೊಮ್ಯಾಟೋ
ಊಟದಲ್ಲಿ ಟೊಮ್ಯಾಟೋ ಸಿಕ್ಕಾಗಿ ಬದಿಗಿಡಬೇಡಿ. ಟೋಮ್ಯಾಟೊವನ್ನು ನಿರಂತರವಾಗಿ ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.