ಕ್ಯಾನ್ಸರ್ ತಡೆಯುವಲ್ಲಿ ಕಿಮೋಥೆರಪಿಯಷ್ಟೇ ಶುಂಠಿ ಎಫೆಕ್ಟಿವ್ ..!

By Suvarna Web DeskFirst Published Feb 2, 2018, 12:47 PM IST
Highlights

ಪ್ರಾಚೀನ ಕಾಲದ ಸಾಂಬಾರ ಪದಾರ್ಥಗಳನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅನೇಕ ರೀತಿಯಾದ ರೋಗಗಳನ್ನು ತಡೆಯಬಹುದಾಗಿದೆ. ಅದರಂತೆ ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ  ಕ್ಯಾನ್ಸರ್ ಎಂಬ ಮಹಾಮಾರಿಗೆ ಶುಂಠಿಯು ಅತ್ಯಂತ ಪರಿಣಾಮಕಾರಿ ಔಷಧ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.

ಬೆಂಗಳೂರು : ಪ್ರಾಚೀನ ಕಾಲದ ಸಾಂಬಾರ ಪದಾರ್ಥಗಳನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅನೇಕ ರೀತಿಯಾದ ರೋಗಗಳನ್ನು ತಡೆಯಬಹುದಾಗಿದೆ. ಅದರಂತೆ ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ  ಕ್ಯಾನ್ಸರ್ ಎಂಬ ಮಹಾಮಾರಿಗೆ ಶುಂಠಿಯು ಅತ್ಯಂತ ಪರಿಣಾಮಕಾರಿ ಔಷಧ ಎನ್ನುವ ವಿಚಾರವೊಂದು ಬೆಳಕಿಗೆ ಬಂದಿದೆ.

ಕಿಮೋಥೆರಪಿಗಿಂತಲೂ ಶುಂಠಿಯ ಬಳಕೆ ಕ್ಯಾನ್ಸರ್ ಗುಣಪಡಿಸುವಲ್ಲಿ ಹೆಚ್ಚು ಉಪಯೋಗಕಾರಿ ಎಂದರೆ ಅಚ್ಚರಿಯಾದರೂ ಕೂಡ ಸತ್ಯ. ವಿಶ್ವ ಕ್ಯಾನ್ಸರ್ ದಿನದ  ಈ ಸಂದರ್ಭದಲ್ಲಿ ಕ್ಯಾನ್ಸರ್ ಗುಣಪಡಿಸುವ ಶಕ್ತಿಶಾಲಿ ಮದ್ದಾಗಿರುವ ಶುಂಠಿಯ ಬಗ್ಗೆ ನಿಮಗಿಂದು ತಿಳಿಸುತ್ತೇವೆ.

ಇಷ್ಟೇ ಅಲ್ಲದೇ ಇನ್ನೂ ಅನೇಕ ರೀತಿಯಾದ ಆರೋಗ್ಯಕಾರಿ ಗುಣಗಳೂ ಈ ಶುಂಠಿಯಲ್ಲಿವೆ. ಅಲ್ಲದೇ ಒಣ ಶುಂಠಿಯೇ ಹೆಚ್ಚು ಉಪಯೋಗಕಾರಿ ಎನ್ನುವುದು ನೀವು ತಿಳಿಯಲೇಬೇಕಾದಂತಹ ಸಂಗತಿಯಾಗಿದೆ.  ಕ್ಯಾನ್ಸರ್ ಕಾರಕ ಸೆಲ್’ಗಳನ್ನು ಕೊಲ್ಲುವಲ್ಲಿ ಕಿಮೋಥೆರಪಿಗಿಂತ 10,000 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಹೇಗೆ ಕ್ಯಾನ್ಸರ್ ಕಾರಕ ಸೆಲ್’ಗಳನ್ನು ಕೊಲ್ಲುತ್ತದೆ : ಮಹಿಳೆಯರನ್ನು ಕಾಡುವ ಮಹಾಮಾರಿ ಬ್ರೆಸ್ಟ್ ಕ್ಯಾನ್ಸರ್ ಸೆಲ್’ಗಳನ್ನು ಕೊಲ್ಲುತ್ತದೆ.  ದೇಹದ ಇತರೆ ಭಾಗಗಳಿಗೆ ಅದರ ಸೆಲ್’ಗಳು ಹರಡದಂತೆ ತಡೆಯುತ್ತದೆ. ಒಂದು ಬಾರಿ ದೇಹದೊಳಗೆ ಕ್ಯಾನ್ಸರ್ ಕಾರಕ ಸೆಲ್’ಗಳು ನುಸುಳಿದರೆ ದೇಹದ ಇತರೆ ಭಾಗಗಳಿಗೆ ಹರಡುತ್ತದೆ.

ಆದರೆ ಶುಂಠಿಯಲ್ಲಿರುವ ಶೋಗೋಲ್ ಎನ್ನುವ  ಅಂಶವೊಂದು ಕ್ಯಾನ್ಸರ್’ಗೆ ವಿಷಕಾರಿಯಾಗಿರುತ್ತದೆ. ಆದ್ದರಿಂದ ಕ್ಯಾನ್ಸರ್ ಕೋಶಗಳು ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ. ಆರೋಗ್ಯಕರ ಜೀವಕೋಶಗಳಿಗೆ ಯಾವುದೇ ರೀತಿಯಾದ ಹಾನಿ ಮಾಡದೇ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಕೊಲ್ಲುತ್ತದೆ. ಪ್ರಮುಖವಾಗಿ ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ವೃಷಣ, ಲಿವರ್ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ತಡೆಯಲು ಶುಂಠಿ ಹೆಚ್ಚು ಪರಿಣಾಮಕಾರಿ.

click me!