ತರಕಾರಿ ಒಣಗಿ ಹೋಗಿದ್ಯಾ ಚಿಂತೆ ಬಿಡಿ..! ಬೆಸ್ಟ್ ಕಿಚನ್ ಟಿಪ್ಸ್ ಇಲ್ಲಿದೆ ನೋಡಿ..!

By Suvarna Web DeskFirst Published Feb 1, 2018, 4:30 PM IST
Highlights

ಅಡುಗೆ ಮಾಡುವಾಗ  ಎಲ್ಲವೂ ಫರ್ಫೆಕ್ಟ್ ಆಗಿ ತನ್ನ ಅಡುಗೆಯನ್ನು ಊಟ ಮಾಡಿದವರು ಮೆಚ್ಚಬೇಕು ಎನ್ನುವುದು ಪ್ರತೀ ಮಹಿಳೆಯರ ಬಯಕೆ ಆಗಿರುತ್ತದೆ. ಅದರಂತೆ ನಿಮ್ಮ ಅಡುಗೆಯ ಫರ್ಫೆಕ್ಟ್’ನೆಸ್’ಗೆ ಸಹಾಯ ಆಗುವಂತಹ ಕೆಲವು ಕಿಚನ್ ಟಿಪ್ಸ್’ಗಳನ್ನು ನಿಮಗೆ ನೀಡುತ್ತಿದ್ದೇವೆ.

ಬೆಂಗಳೂರು : ಅಡುಗೆ ಮಾಡುವಾಗ  ಎಲ್ಲವೂ ಫರ್ಫೆಕ್ಟ್ ಆಗಿ ತನ್ನ ಅಡುಗೆಯನ್ನು ಊಟ ಮಾಡಿದವರು ಮೆಚ್ಚಬೇಕು ಎನ್ನುವುದು ಪ್ರತೀ ಮಹಿಳೆಯರ ಬಯಕೆ ಆಗಿರುತ್ತದೆ. ಅದರಂತೆ ನಿಮ್ಮ ಅಡುಗೆಯ ಫರ್ಫೆಕ್ಟ್’ನೆಸ್’ಗೆ ಸಹಾಯ ಆಗುವಂತಹ ಕೆಲವು ಕಿಚನ್ ಟಿಪ್ಸ್’ಗಳನ್ನು ನಿಮಗೆ ನೀಡುತ್ತಿದ್ದೇವೆ.

-ಮನೆಯಲ್ಲಿ ತಂದಿಟ್ಟ ತರಕಾರಿ ಒಣಗಿ ಹೋಗಿದ್ಯಾ..? ಬೇಜಾರು ಮಾಡಿಕೊಳ್ಳಬೇಡಿ. ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ. ಅದಕ್ಕೆ ತರಕಾರಿಗಳನ್ನು ಹಾಕಿ ರಾತ್ರಿ ಪೂರಾ ನೆನೆಸಿದರೆ ಬೆಳಗ್ಗೆ ತರಕಾರಿ ತಾಜವಾಗಿ ಮಿನುಗುತ್ತದೆ.

-ಸೊಪ್ಪು ಮತ್ತು ಹಸಿರು ತರಕಾರಿಗಳನ್ನು ಬಾಡಿಸುವಾಗ ಬಣ್ಣ ಮಾಸಿಹೋಗುತ್ತದೆ. ಹಸಿರು ಬಣ್ಣ ಹಾಗೆ ಉಳಿಯಬೇಕೆಂದರೆ ಚಿಟಿಕೆ ಪುಡಿ ಉಪ್ಪು ಹಾಕಿ ಬಾಡಿಸಿ.

-ಒಂದು ಸಣ್ಣ ಬಾಟಲ್’ನಲ್ಲಿ 2 ಚಮಚ ವಿನಿಗರ್ ಹಾಕಿ ಮುಚ್ಚಳ ಮುಚ್ಚಿ ಅಡುಗೆ ಮನೆಯಲ್ಲಿ ಇಡಿ. ಹುಳುಗಳು ಅಡುಗೆ ಮನೆಗೆ ಬರುವುದಿಲ್ಲ.

-ಗ್ಯಾಸ್ ಸ್ಟವ್, ಮಿಕ್ಸರ್ ಗ್ರೈಂಡರ್ ಸ್ವಚ್ಛ ಮಾಡುವಾಗ ಸ್ಕ್ರಬ್ ಸ್ವಲ್ಪ ಅಡುಗೆ ಸೋಡ ಹಾಕಿ ಸ್ವಚ್ಛ ಮಾಡುವುದರಿಂದ ಹೊಳೆಯುತ್ತವೆ.

-ದೋಸೆ ಹಾಕುವ ಮುನ್ನ ದೋಸೆ ಹಿಟ್ಟಿಗೆ ಸ್ವಲ್ಪ ಸಕ್ಕರೆ ಸೇರಿಸಿ ದೋಸೆ ಮಾಡಿದರೆ ದೋಸೆ ಬಣ್ಣ ಚನ್ನಾಗಿ ಬರುತ್ತದೆ.

-ಎಲ್ಲಾ ತರಹದ ಆಹಾರ ಪದಾರ್ಥಗಳನ್ನು ಫ್ರಿಜ್ನಲ್ಲಿ ಇಡುವುದರಿಂದ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸಲು ಸಿಪ್ಪೆ ಸುಲಿದ ಹಸಿ ಆಲೂಗಡ್ಡೆಗೆ  ಉಪ್ಪು ಸವರಿ ಒಂದು ನೀರಿರುವ ಬಟ್ಟಲಿನಲ್ಲಿ ಹಾಕಿ ಇಡಿ.

-ಹಾಲನ್ನು ಕಾಯಿಸುವ ಮುನ್ನ ಹಾಲಿನ ಪಾತ್ರೆಯ ಒಳಭಾಗವನ್ನು ಸಂಪೂರ್ಣವಾಗಿ ಒದ್ದೆ ಮಾಡಿ ಕಾಯಿಸಿ ಇದರಿಂದ ಹಾಲಿನ ಕೆನೆ ಪಾತ್ರೆಗೆ ಅಂಟುವುದಿಲ್ಲ. ಪಾತ್ರೆಯನ್ನೂ ಕೂಡ ಸುಲಭವಾಗಿ ತೊಳೆಯಬಹುದಾಗಿದೆ.

-ಪುಳಿಯೊಗರೆ, ಚಿತ್ರಾನ್ನ, ವಾಂಗೀಬಾತ್ ಮಾಡಲು ಅನ್ನ ಉದುರಾಗಿರಲು  ಅನ್ನ ಮಾಡುವಾಗ ಸ್ವಲ್ಪ ಎಣ್ಣೆ ಅಥವಾ ನಿಂಬೆರಸ ಹಾಕಿದರೆ ಅನ್ನ ಬಿಡಿಬಿಡಿಯಾಗಿ ಹದವಾಗಿ ಆಗುತ್ತದೆ.

click me!