ಚಳಿಗಾಲದಲ್ಲಿ ಕಾಡೋ ಕಾಮನ್ ಕಾಯಿಲಿಗೆ ಇಲ್ಲಿದೆ ಮದ್ದು...

By Web DeskFirst Published Jan 3, 2019, 12:09 PM IST
Highlights

ಅಬ್ಬಾ ಮೈ ಕೊರೆಯುವ ಚಳಿ. ಹಿಮ್ಮಡಿಯಲ್ಲಿ ಬಿರುಕು. ಮನಸ್ಸಿಗೋ ಏನೋ ಬಡಿದಿದೆ ದಾಡಿ. ಹಿಮ್ಮಡಿ ಒಡಕು ಚಳಿಗಾಲದಲ್ಲಿ ಕಾಡೋದು ಕಾಮನ್. ಇದಕ್ಕೆ ಇಲ್ಲಿವೆ ಸಿಂಪಲ್ ಮದ್ದು.

ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಒಂದು ಮುಖ್ಯವಾದ ಸಮಸ್ಯೆ ಎಂದರೆ ಅದು ಪಾದದ ಹಿಮ್ಮಡಿ ಒಡೆತ. ಕೆಲವೊಮ್ಮೆ ಹಿಮ್ಮಡಿ ಎಷ್ಟೊಂದು ಒಡೆಯುತ್ತದೆ ಎಂದರೆ ಅದರಿಂದ ರಕ್ತ ಕೂಡ ಬರುತ್ತದೆ. ಚಳಿಗಾಲದಲ್ಲಿರುವಂತಹ ಶುಷ್ಕ ವಾತಾವರಣದ ಪರಿಣಾಮ ಈ ಸಮಸ್ಯೆ ಕಾಡುತ್ತದೆ. 

ಹಿಮ್ಮಡಿ ಒಡೆತ ಸಮಸ್ಯೆ ನಿವಾರಿಸಿ, ಪದಗಳು ಸಾಫ್ಟ್ ಆಗಲು ಇಲ್ಲಿದೆ ಟಿಪ್ಸ್....


- ಮೊಟ್ಟೆಯ ಬಿಳಿ ಭಾಗ, ಲಿಂಬೆ ರಸ ಮತ್ತು ಅಕ್ಕಿ ಹಿಟ್ಟು ಮಿಕ್ಸ್ ಮಾಡಿ. ಮೊದಲಿಗೆ ಹದಿನೈದು ನಿಮಿಷ ಪಾದಗಳನ್ನು ಉಗುರು ಬಿಸಿ ನೀರಿನಲ್ಲಿ ನೆನೆಸಿಕೊಂಡು ಬಳಿಕ ಪಾದಕ್ಕೆ ಈ ಮಿಶ್ರಣವನ್ನು ಹಚ್ಚಬೇಕು. 20 ನಿಮಿಷಗಳ ನಂತರ ತೊಳೆದರೆ ಹಿಮ್ಮಡಿ ಮೃದುವಾಗುತ್ತದೆ. 

ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್‌ಗೆ ಇಲ್ಲಿದೆ ಟಿಪ್ಸ್
- ಬಾಳೆ ಹಣ್ಣನ್ನು ಕಿವುಚಿ, ಅದಕ್ಕೆ ಸ್ವಲ್ಪ ನಿಂಬೆ ರಸ ಬೆರೆಸಿ ಮಿಕ್ಸ್ ಮಾಡಿ. ಇದನ್ನು ಹಿಮ್ಮಡಿ ಒಡೆತದ ಜಾಗಕ್ಕೆ ಹಚ್ಚಿಕೊಂಡು 15 ನಿಮಿಷಗಳ ಬಳಿಕ ಬಿಸಿ ನೀರಿನಿಂದ ತೊಳೆಯಿರಿ. ಪ್ರತಿ ದಿನ ಹೀಗೆ ಮಾಡುವುದರಿಂದ ಬಿರುಕುಗಳ ಪ್ರಮಾಣ ಕಡಿಮೆಯಾಗುತ್ತದೆ. 
- ರಾತ್ರಿ ಮಲಗುವ ಮುನ್ನ ಪ್ರತಿದಿನ ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. 

ಚಳಿಗಾಲದ ಟ್ರಾವೆಲ್‌ಗಿದು ಹೇಳಿ ಮಾಡಿಸಿದ ಜಾಗ
- ಅಲೀವ್ ಎಣ್ಣೆಯನ್ನು ಹಿಮ್ಮಡಿಗೆ ಹಚ್ಚಿ ಮಸಾಜ್ ಮಾಜಿ, ಅರ್ಧ ಗಂಟೆ ಬಳಿಕ ಉಗುರು ಬಿಸಿ ನೀರಿನಲ್ಲಿ ತೊಳೆಯಬೇಕು. ಈ ರೀತಿ ದಿನ ನಿತ್ಯ ಮಾಡುವುದರಿಂದ ಪಾದಕ್ಕೆ ತೇವಾಂಶ ಸಿಕ್ಕಿ ಹಿಮ್ಮಡಿ ಮೃದುವಾಗುತ್ತದೆ.
- ಲಿಂಬೆ ರಸ, ಜೇನು ಹಾಗೂ ಒಂದು ಚಮಚ ಶುಂಠಿ ಎಣ್ಣೆಯನ್ನು ಸೇರಿಸಿ ಹಿಮ್ಮಡಿ ಒಡೆದ ಜಾಗಕ್ಕೆ ಹಚ್ಚಿ ಒಣಗಲು ಬಿಡಬೇಕು. 15 ನಿಮಿಷಗಳ ಬಳಿಕ ಫ್ಯೂಮಿಕ್ ಕಲ್ಲಿನಿಂದ ಉಜ್ಜಿದರೆ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ. ಇದರಿಂದ ಬಿರುಕುಗಳು ಕಡಿಮೆಯಾಗುತ್ತವೆ.
 

click me!