ಚಳಿಯಲೇಕೆ ವಿಟಮಿನ್ C ಬೇಕು? ಹೇಳಿ ಪ್ರಕೃತಿಗೊಂದು Thanks

By Web DeskFirst Published Jan 18, 2019, 4:13 PM IST
Highlights

ಪ್ರಕೃತಿಯೇ ಹಾಗೆ, ಮನುಷ್ಯನ ದೇಹಕ್ಕೆ ಯಾವ ಕಾಲದಲ್ಲಿ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡು, ಆಯಾಯ ಕಾಲಕ್ಕೆ ಅಗತ್ಯ ಪೋಷಕಾಂಶಗಳು ಸಿಗುವಂಥ ಹಣ್ಣುಗಳನ್ನು ಸೃಷ್ಟಿಸಿದೆ. ಅದಕ್ಕೆ ಕಿತ್ತಳೆಯಂಥ ಹಣ್ಣುಗಳು ಚಳಿಗೆ ಬೇಕು....

ವಿಟಮಿನ್ ಸಿ ಮನುಷ್ಯರಿಗೆ ಅಗತ್ಯವಾದ ವಿಟಮಿನ್. ಕೆಲವು ಜೀವಿಗಳು ವಿಟಮಿನ್ ಸಿಯನ್ನು ಉತ್ಪಾದಿಸುತ್ತದೆ. ಆದರೆ ಮನುಷ್ಯನಿಗೆ ಭೋಜನ ಮತ್ತು ಇತರ ಆಹಾರಗಳಿಂದ ಇದು ದಕ್ಕುತ್ತದೆ. ಅಲ್ಲದೇ ಕೆಲವೊಂದು ಫ್ರೆಶ್ ಹಣ್ಣು-ತರಕಾರಿಗಳಿಂದಲೂ ಇದು ಸಿಗುತ್ತದೆ.

  • ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಬಹು ದಿನಗಳಿಂದರೋ ಹಲವಾರು ಖಾಯಿಲೆಗಳನ್ನು ನಿವಾರಿಸುತ್ತವೆ.
  • ಹೆಚ್ಚಿದ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸಲು ಸಹಕರಿಸುತ್ತದೆ. - ಹೃದಯಾಘಾತ ಸಮಸ್ಯೆಯನ್ನೂ ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಹೃದ್ರೋಗವನ್ನೂ ನಿವಾರಿಸಲು ಸಹಕರಿಸುತ್ತದೆ.
  • ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ, ಇದು ನೆರವಾಗುತ್ತದೆ.
  • ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ಇಮ್ಯುನಿಟಿ ಪವರ್ ಹೆಚ್ಚಿಸಲು ವಿಟಮಿನ್ ಸಿ ಸಹಕಾರಿ.
  • ಪ್ರತಿದಿನ ವಿಟಮಿನ್ ಸಿ ಹೊಂದಿದ ಆಹಾರ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುವುದರೊಂದಿಗೆ, ವೃದ್ಧಾಪ್ಯವನ್ನು ತಡೆಯುತ್ತದೆ.
  • ವಿಟಮಿನ್ ಸಿ ಶೀತವನ್ನು ನಿವಾರಿಸುತ್ತದೆ. ಮಕ್ಕಳಲ್ಲಿ ಶೀತ ಸಮಸ್ಯೆ ಕಾಡಿದರೆ ಇದನ್ನು ನೀಡಿ. ಇದರಿಂದ ಬೇಗನೆ ಶೀತ ಗುಣವಾಗುತ್ತದೆ.
  • ಕೆಲವೊಂದು ಅಧ್ಯಯನಗಳ ಪ್ರಕಾರ ವಿಟಮಿನ್ ಸಿ ಕ್ಯಾನ್ಸರ್ ನಿವಾರಿಸುತ್ತದೆ.
  • ಕಣ್ಣಿನ ಸಮಸ್ಯೆ ನಿವಾರಣೆಗೂ ವಿಟಾಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ.

    ವಿಟಮಿನ್ ಡಿ ಏಕೆ ಬೇಕು ದೇಹಕ್ಕೆ?
     
  • ವಿಟಾಮಿನ್ ಸಿ ಹೊಂದಿರುವ ಆಹಾರ ಪದಾರ್ಥಗಳು : ಪೇರಲೆ ಹಣ್ಣು, ಬೆಲ್ ಪೆಪ್ಪರ್, ಪಾರ್ಸ್ಲೇ, ಕಿವಿ ಹಣ್ಣು, ಪಪ್ಪಾಯಿ, ಕಿತ್ತಳೆ ಹಣ್ಣು, ಸ್ಟ್ರಾಬೆರ್ರಿ, ಇತರ ಬೆರ್ರಿ ಹಣ್ಣುಗಳು, ನೆಲ್ಲಿಕಾಯಿ.
click me!