ಶೀತ ನೆಗಡಿಯಿಂದ ಮುಕ್ತಿ ಪಡೆಯಲು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮನೆಯಲ್ಲಿಯೇ ತಯಾರಿಸಬಹುದಾದ ಮದ್ದುಗಳು ಇಲ್ಲಿವೆ ನೋಡಿ.
ಬದಲಾಗುತ್ತಿರುವ ಹವಾಮಾನದಿಂದಾಗಿ ಬಹಳಷ್ಟು ಜನರಿಗೆ ಅನಾರೋಗ್ಯ ಉಂಟಾಗುವುದು ಸಹಜ. ಶೀತ ನೆಗಡಿಯಿಂದಾಗಿ ಬಹಳ ದಣಿದು ಬಿಡುತ್ತೇವೆ. ಈ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಿ ಮಾತ್ರೆ ಸ್ವೀಕರಿಸುವುದು ಒಳ್ಳೆಯದೆ. ಆದರೆ ಶೀತ ನೆಗಡಿಯಿಂದ ಮುಕ್ತಿ ಪಡೆಯಲು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮನೆಯಲ್ಲಿಯೇ ತಯಾರಿಸಬಹುದಾದ ಮದ್ದುಗಳು ಇಲ್ಲಿವೆ ನೋಡಿ.
ಶೀತವಾದಾಗ ಗಂಟಲು ಮೂಗು ಕಟ್ಟಿದಂತಾಗುತ್ತದೆ ಆ ಸಮಯದಲ್ಲಿ ಶುಂಠಿ ಮತ್ತು ಜೇನು ಬಹಳ ಉತ್ತಮವಾದದ್ದು. ಶುಂಠಿಯನ್ನು ಸಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಸಮಪ್ರಮಾಣದ ಜೇನು ಬೆರೆಸಿ ಸೇವಿಸಿ. ಇದನ್ನು ಹಾಲಿನ ಜೊತೆ ಮಿಶ್ರಮಾಡಿ ಬೇಕಾದರೂ ಸೇವಿಸ ಬಹುದು. ಇದರಿಂದ ಮೂಗು ಕಟ್ಟುವಿಕೆ ದೂರಾಗುತ್ತದೆ ಮತ್ತು ಗಂಟಲು ಒಣಗುವುದು ತಪ್ಪುತ್ತದೆ.
ಅರಿಶಿಣವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವಿಸುವುದರಿಂದ ಶೀತ ನೆಗಡಿಯಿಂದ ಮುಕ್ತಿ ಸಿಗುತ್ತದೆ.
ಬೆಲ್ಲ ಕೂಡಾ ಶೀತ ನೆಗಡಿಗೆ ಉತ್ತಮ ರಾಮಬಾಣ.ಬಿಸಿ ನೀರಿಗೆ ಕರಿಮೆಣಸು ಜೀರಿಗೆ ಬೆಲ್ಲ ಸೇರಿಸಿ ಕುದಿಸಿ. ಅದನ್ನು ಕುಡಿಯುವುದರಿಂದ ನೆಗಡಿ ದೂರವಾಗುತ್ತದೆ.
ಚಹಾ ಮಾಡುವಾಗ ನೀರನ್ನು ಕುದಿಸಿ ಅದಕ್ಕೆ ಚಹಾ ಪುಡಿಯ ಜೊತೆ ಲವಂಗ, ದಾಲ್ಚಿನ್ನಿ, ಸುಂಠಿ, ಮತ್ತು ಕರಿಮೆಣಸು ಸೇರಿಸಿ ಕುದಿಸಿ ಕುಡಿಯುವುದರಿಂದಲೂ ಶೀತ ನಿವಾರಣೆಯಾಗುತ್ತದೆ.