ಗ್ರೀನ್ ಟೀಯಿಂದ ವೀರ್ಯೋತ್ಪತ್ತಿ ವ್ಯತ್ಯಯ

Published : Oct 24, 2016, 12:56 PM ISTUpdated : Apr 11, 2018, 12:39 PM IST
ಗ್ರೀನ್ ಟೀಯಿಂದ ವೀರ್ಯೋತ್ಪತ್ತಿ ವ್ಯತ್ಯಯ

ಸಾರಾಂಶ

ಯಾವುದನ್ನೇ ಆಗಲಿ, ಯೋಗ್ಯ ಪ್ರಮಾಣದಲ್ಲಿ ಸೇವಿಸಿದರೆ ಅವು ಆರೋಗ್ಯ­ಕಾರಿ. ಆದರೆ ಅದೇ ಪ್ರಮಾಣ ಅತಿಯಾದರೆ ಅವು ಅಹಿತಕಾರಿಯಾ­ಗುತ್ತವೆ.

ನನಗೆ 26 ವರ್ಷ. ದಿನದಲ್ಲಿ ಮೂರು ಸಲ ಗ್ರೀನ್‌ ಟೀ ಕುಡಿಯುತ್ತೇನೆ. ಇದರಿಂದ ಮುಖದಲ್ಲಿ ಮೊಡವೆಗಳು ಜಾಸ್ತಿ ಆಗಿವೆ. ಇದು ಉಷ್ಣ ಪೇಯವೇ? ಗ್ರೀನ್‌ ಟೀ ಸೇವನೆಯಿಂದ ವೀರ್ಯೋತ್ಪತ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ. ಇದು ನಿಜವೇ?
ಶಿವರಾಜ್‌ ಎನ್‌ಕೆ ಬೆಂಗಳೂರು


-ಕೆಮೆಲೀಯ ಜಾತಿಯ ಈ ಸಸ್ಯದಲ್ಲಿ ಪಾಲಿಫಿನೊಲ್ಸ್‌  ಮತ್ತು ಫ್ಲೇವ್ನಾಡ್ಸ್‌  ಅಧಿಕ ಪ್ರಮಾಣದಲ್ಲಿವೆ. ಕಾರಣ ಇದರ ನಿಯಮಿತ ಹಾಗೂ ಸರಿಯಾದ ಸೇವನೆಯಿಂದ ಕೆಟ್ಟಕೊಲೆಸ್ಟೆರಾಲ್‌  ಕಡಿಮೆಮಾಡಿ ಹೃದಯದ ಸಂರಕ್ಷಣೆ ಮಾಡುತ್ತದೆ. ಅಲ್ಲದೆ ಅಂಡಾಶಯದ ಕ್ಯಾನ್ಸರ್‌, ಗರ್ಭಾಶಯದ ಕ್ಯಾನ್ಸರ್‌ನಂಥ ಹಲವಾರು ಕ್ಯಾನ್ಸರ್‌ಗಳನ್ನು ತಡೆಗಟ್ಟುವಲ್ಲಿಯೂ ಇದು ಸಹಾಯಕಾರಿ ಇಂದು ಸಂಶೋಧನೆಗಳು ಹೇಳುತ್ತವೆ. ನಿಮ್ಮ ಮೊಡವೆಗಳ ಕಾರಣ ಗ್ರೀನ್‌ ಟೀ ಆಗಲಾರದು. ಕಾರಣ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌ ದೇಹದ ಕಲ್ಮಶ ತೆಗೆದುಹಾಕಿ ಮೊಡವೆ­ ಯನ್ನು ಗುಣಪಡಿಸುತ್ತವೆ. ನೀವು ಬೇರೆ ಯಾವುದಾ­ದರೂ ಔಷಧಿಗಳನ್ನು ಸೇವಿಸುತ್ತಿದ್ದರೆ, ಅದರೊಟ್ಟಿಗೆ ಗ್ರೀನ್‌ ಟೀ ಬೆರೆತು ಹೀಗಾಗುವ ಸಾಧ್ಯತೆಯಿದೆ. ನೆನಪಿಟ್ಟು ಕೊಳ್ಳಿ; ಯಾವುದನ್ನೇ ಆಗಲಿ, ಯೋಗ್ಯ ಪ್ರಮಾಣದಲ್ಲಿ ಸೇವಿಸಿದರೆ ಅವು ಆರೋಗ್ಯ­ಕಾರಿ. ಆದರೆ ಅದೇ ಪ್ರಮಾಣ ಅತಿಯಾದರೆ ಅವು ಅಹಿತಕಾರಿಯಾ­ಗುತ್ತವೆ. ಹಾಗೆಯೇ ಗ್ರೀನ್‌ ಟೀಯನ್ನೂ ದಿನಕ್ಕೆ 2- 3 ಕಪ್‌ಗಿಂತ ಹೆಚ್ಚು ಸೇವಿಸಿದರೆ ಇದು ವ್ಯತರಿಕ್ತ ಪರಿಣಾಮ ಬೀರುತ್ತದೆ. ಇದು ಒಗರು (ಕಷಾಯ) ರಸಾತ್ಮಕ ದ್ರವ್ಯ, ಒಗರು ರಸದ ಅತಿಸೇವನೆ ವೀರ್ಯ ಉತ್ಪತ್ತಿ ಯಲ್ಲಿ ವ್ಯತ್ಯಯವಾಗುವುದೆಂದು ಆಯುರ್ವೇದ ಹೇಳಿದೆ. ಹಾಗೆಯೇ ಕಷಾಯ ಶೀತ, ಹಾಗಾಗಿ ಗ್ರೀನ್‌ ಟೀ ಉಷ್ಣ ಅಲ್ಲ. ಆದರೂ ಗ್ರೀನ್‌ ಟೀ ಸೇವನೆ­ ಯನ್ನು 2 ಕಪ್‌ಗೆ ಇಳಿಸಿ. ಅದರ ಬದಲು ಜೀರಿಗೆ, ಕೊತ್ತಂಬರಿ ಬೀಜ, ಯಷ್ಟಮದು, ಲವಂಗ, ಅರಿಶಿನ ಸೇರಿಸಿ ಕಷಾಯ ಮಾಡಿ ಸೇವಿಸದರೆ ಇದು ಗ್ರೀನ್‌ ಟೀಗಿಂತ ಹೆಚ್ಚು ಆರೋಗ್ಯ ಲಾಭ ನೀಡುತ್ತದೆ.

(ಡಾ. ಪೂರ್ಣಿಮ ರವಿ, ಆಯುರ್ವೇದ ತಜ್ಞೆ, (ಕನ್ನಡ ಪ್ರಭ)

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ