
ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವ ಸ್ಥಿತಿಯನ್ನೇ ಹೈ ಕೊಲೆಸ್ಟ್ರಾಲ್ (high cholesterol) ಅಂತಾರೆ. ಕೊಲೆಸ್ಟ್ರಾಲ್ ಅನ್ನೋದು ನಾವು ತಿನ್ನುವ ಆಹಾರದಲ್ಲಿ ಕಂಡುಬರುವ ಒಂದು ರೀತಿಯ ಕೊಬ್ಬು. ಇದು ನಮ್ಮ ಲಿವರ್‌ನಲ್ಲೂ ಉತ್ಪತ್ತಿಯಾಗುತ್ತೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಜಾಸ್ತಿಯಾದ್ರೆ ಹೃದ್ರೋಗ, ಪಾರ್ಶ್ವವಾಯು ಮತ್ತು ರಕ್ತನಾಳಗಳು ಗಟ್ಟಿಯಾಗುವ (ಅಥೆರೋಸ್ಕ್ಲೆರೋಸಿಸ್) ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು.
ಹೈ ಕೊಲೆಸ್ಟ್ರಾಲ್ ಅನ್ನು ಮೊದಲೇ ಪತ್ತೆ ಹಚ್ಚಿ, ಬೇರೆ ಆರೋಗ್ಯ ಸಮಸ್ಯೆಗಳು ಬರುವುದಕ್ಕೂ ಮುನ್ನವೇ ಅದನ್ನು ನಿಯಂತ್ರಿಸಲು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ವೈದ್ಯರು ಮತ್ತು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ: ಎಲ್‌ಡಿಎಲ್ (ಲೋ-ಡೆನ್ಸಿಟಿ ಲಿಪೊಪ್ರೋಟೀನ್) ಮತ್ತು ಎಚ್‌ಡಿಎಲ್ (ಹೈ-ಡೆನ್ಸಿಟಿ ಲಿಪೊಪ್ರೋಟೀನ್).
ಎಲ್‌ಡಿಎಲ್ ಅನ್ನು ಸಾಮಾನ್ಯವಾಗಿ 'ಕೆಟ್ಟ ಕೊಲೆಸ್ಟ್ರಾಲ್' ಅಂತ ಕರೆಯುತ್ತಾರೆ. ಯಾಕಂದ್ರೆ ಇದು ರಕ್ತನಾಳಗಳ ಗೋಡೆಗಳ ಮೇಲೆ ಶೇಖರಣೆಯಾಗಿ, ಅವುಗಳನ್ನು ಗಟ್ಟಿ ಮತ್ತು ಕಿರಿದಾಗುವಂತೆ ಮಾಡುತ್ತೆ. ಇನ್ನೊಂದೆಡೆ, ಎಚ್‌ಡಿಎಲ್ ಅನ್ನು 'ಒಳ್ಳೆಯ ಕೊಲೆಸ್ಟ್ರಾಲ್' ಅಂತಾರೆ. ಯಾಕಂದ್ರೆ ಇದು ರಕ್ತನಾಳಗಳಿಂದ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತೆ.
ಚರ್ಮದ ಮೇಲೆ ಕೊಬ್ಬು ಶೇಖರಣೆಯಾಗುವುದು.
ಕಣ್ಣುಗಳ ಬಿಳಿ ಭಾಗದಲ್ಲಿ ಹಳದಿ ಬಣ್ಣದ ಕಲೆಗಳು.
ಹೊಟ್ಟೆ ನೋವು.
ಕಿಡ್ನಿ ಸಮಸ್ಯೆಗಳು.
ನಿಮಗೆ ಹೈ ಕೊಲೆಸ್ಟ್ರಾಲ್ ಇದೆ ಅಂತ ಅನುಮಾನ ಬಂದ್ರೆ, ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮದಂತಹ ಜೀವನಶೈಲಿ ಬದಲಾವಣೆಗಳು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಜಡ ಜೀವನಶೈಲಿ, ಅತಿಯಾದ ಕೊಬ್ಬಿನಾಂಶವಿರುವ ಆಹಾರ ಸೇವನೆ, ವ್ಯಾಯಾಮ ಮಾಡದಿರುವುದು, ಮದ್ಯಪಾನ ಅಥವಾ ಧೂಮಪಾನ ಮಾಡುವುದು ಹೈ ಕೊಲೆಸ್ಟ್ರಾಲ್‌ಗೆ ಕಾರಣವಾಗಬಹುದು. ರಕ್ತದಲ್ಲಿ ಕೊಲೆಸ್ಟ್ರಾಲ್ ಎಂಬ ಕೊಬ್ಬಿನ ಪದಾರ್ಥ ಹೆಚ್ಚಾಗಿರುವುದೇ ಹೈ ಕೊಲೆಸ್ಟ್ರಾಲ್.
ಕೊಬ್ಬಿನಾಂಶ ಹೆಚ್ಚಿರುವ ಆಹಾರ ಸೇವನೆ, ಸರಿಯಾಗಿ ವ್ಯಾಯಾಮ ಮಾಡದಿರುವುದು, ಅಧಿಕ ತೂಕ (over weight), ಧೂಮಪಾನ (Smoking) ಮತ್ತು ಮದ್ಯಪಾನದಿಂದ ಇದು ಮುಖ್ಯವಾಗಿ ಉಂಟಾಗುತ್ತದೆ. ಹೈ ಕೊಲೆಸ್ಟ್ರಾಲ್ ರಕ್ತ ಸಂಚಾರವನ್ನು ಮಿತಿಗೊಳಿಸಿ, ಹೃದಯಾಘಾತ ಅಥವಾ ಪಾರ್ಶ್ವವಾಯು (stroke) ಅಪಾಯವನ್ನು ಹೆಚ್ಚಿಸುತ್ತದೆ.
ನಿಮಗೆ ಹೈ ಕೊಲೆಸ್ಟ್ರಾಲ್ ಇದ್ದರೆ, ಹೃದ್ರೋಗ ಬರುವ ಸಾಧ್ಯತೆ ಹೆಚ್ಚು ಅಂತ ತಜ್ಞರು ಹೇಳುತ್ತಾರೆ. ಲಿಪಿಡ್ ಪ್ಯಾನೆಲ್ ಅಥವಾ ಲಿಪಿಡ್ ಪ್ರೊಫೈಲ್ ಎಂಬ ರಕ್ತ ಪರೀಕ್ಷೆಯ ಮೂಲಕ ಹೈ ಕೊಲೆಸ್ಟ್ರಾಲ್ ಅನ್ನು ಪತ್ತೆ ಹಚ್ಚಲಾಗುತ್ತದೆ. ಈ ಪರೀಕ್ಷೆಯು ನಿಮ್ಮ ರಕ್ತದಲ್ಲಿನ ಒಟ್ಟು ಕೊಲೆಸ್ಟ್ರಾಲ್, ಎಲ್‌ಡಿಎಲ್, ಎಚ್‌ಡಿಎಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಅಳೆಯುತ್ತದೆ.
ಜೀವನಶೈಲಿ ಬದಲಾವಣೆ ಮತ್ತು ಅಗತ್ಯವಿದ್ದರೆ ಔಷಧಿಗಳ ಮೂಲಕ ಹೈ ಕೊಲೆಸ್ಟ್ರಾಲ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ನಿಮ್ಮ ಎಲ್‌ಡಿಎಲ್ ('ಕೆಟ್ಟ') ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮತ್ತು ಎಚ್‌ಡಿಎಲ್ ('ಒಳ್ಳೆಯ') ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದು ಚಿಕಿತ್ಸೆಯ ಮುಖ್ಯ ಗುರಿಯಾಗಿದೆ.
ಹೈ ಕೊಲೆಸ್ಟ್ರಾಲ್ ಅನ್ನು ಖಂಡಿತವಾಗಿಯೂ ತಡೆಯಬಹುದು. ಇದಕ್ಕಾಗಿ ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಮೊದಲನೆಯದಾಗಿ, ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಕಡಿಮೆ ಇರುವ ಆರೋಗ್ಯಕರ ಆಹಾರವನ್ನು ಸೇವಿಸಿ. ಎರಡನೆಯದಾಗಿ, ನಿಯಮಿತವಾಗಿ ವ್ಯಾಯಾಮ ಮಾಡಿ. ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಧೂಮಪಾನವನ್ನು ತ್ಯಜಿಸುವುದು. ಒಂದು ವೇಳೆ ನಿಮಗೆ ಹೈ ಕೊಲೆಸ್ಟ್ರಾಲ್ ಇದ್ದರೆ, ಅದನ್ನು ಕಡಿಮೆ ಮಾಡಲು ಸಹಾಯ ಮಾಡುವ ಔಷಧಿಗಳೂ ಲಭ್ಯವಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅಧಿಕ ರಕ್ತದೊತ್ತಡ, ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿರುವ ಜನರಿಗೆ ಹೈ ಕೊಲೆಸ್ಟ್ರಾಲ್ ಬರುವ ಅಪಾಯ ಹೆಚ್ಚು. ಪಾದಗಳು ಮತ್ತು ಕಾಲ್ಬೆರಳುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುವುದು ಹೈ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಹೈ ಕೊಲೆಸ್ಟ್ರಾಲ್ ಇರುವ ಹೆಚ್ಚಿನ ಜನರಲ್ಲಿ ಈ ಲಕ್ಷಣ ಕಂಡುಬರುತ್ತದೆ. ತೊಡೆ ಮತ್ತು ಕಾಲಿನ ಇತರ ಭಾಗಗಳಲ್ಲಿ ನಿರಂತರ ನೋವು ಅನುಭವಿಸುವುದು ಕೂಡ ಹೈ ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.