Night Bath: ಜಪಾನಿಯರು ರಾತ್ರಿ ಯಾಕೆ ಸ್ನಾನ ಮಾಡ್ತಾರೆ? ಕಾರಣ ಗೊತ್ತಾದ್ರೆ ನೀವೂ ಇದನ್ನೇ ಫಾಲೋ ಮಾಡ್ತೀರಾ!

Published : Jul 21, 2026, 10:37 PM IST
Why Japanese People Bathe at Night for Better Health and Sleep

ಸಾರಾಂಶ

ರಾತ್ರಿ ಸ್ನಾನ ಮಾಡೋದ್ರಿಂದ ನಿಜವಾಗ್ಲೂ ಆರೋಗ್ಯಕ್ಕೆ ಒಳ್ಳೇದಾ? ಜಪಾನಿಯರ ಜೀವನಶೈಲಿಯ ಈ ಸೀಕ್ರೆಟ್ ಬಗ್ಗೆ ತಿಳಿಯಿರಿ. ಉಗುರುಬೆಚ್ಚಗಿನ ನೀರಿನ ಸ್ನಾನದಿಂದ ಸಿಗುವ ಲಾಭಗಳು, ಉತ್ತಮ ನಿದ್ದೆ, ಒತ್ತಡ ಕಡಿಮೆ, ಚರ್ಮದ ಸ್ವಚ್ಛತೆ ಮತ್ತು ಆರೋಗ್ಯಕರ ದಿನಚರಿಯ ಬಗ್ಗೆ ಇಲ್ಲಿದೆ ಮಾಹಿತಿ.

ಜಪಾನ್ ಅಂದ್ರೆನೇ ದೀರ್ಘಾಯುಷ್ಯ, ಶಿಸ್ತಿನ ದಿನಚರಿ, ಆರೋಗ್ಯಕರ ಜೀವನಶೈಲಿಗೆ ಇಡೀ ಜಗತ್ತಿನಲ್ಲಿ ಫೇಮಸ್. ಅಲ್ಲಿನ ಜನರ ಅನೇಕ ಅಭ್ಯಾಸಗಳಿಗೆ ವೈಜ್ಞಾನಿಕ ಪುರಾವೆಗಳೂ ಇವೆ. ಅವುಗಳಲ್ಲಿ ಒಂದು, ರಾತ್ರಿ ಹೊತ್ತು ಸ್ನಾನ ಮಾಡುವ ಅಭ್ಯಾಸ. ಜಪಾನಿಯರು ರಾತ್ರಿ ಸ್ನಾನ ಮಾಡೋದು ಬರೀ ಮೈ ಕ್ಲೀನ್ ಮಾಡಿಕೊಳ್ಳೋಕೆ ಅಲ್ಲ, ಬದಲಿಗೆ ದಿನವಿಡೀ ಆದ ಸುಸ್ತು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು, ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಕಂಡುಕೊಂಡ ಕ್ರಮ.

ತಜ್ಞರ ಪ್ರಕಾರ, ಮಲಗುವುದಕ್ಕೆ ಸುಮಾರು ಒಂದೆರಡು ಗಂಟೆ ಮುಂಚೆ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಹಲವರಿಗೆ ಉತ್ತಮ ನಿದ್ದೆ ಮತ್ತು ರಿಲ್ಯಾಕ್ಸ್ ಆಗುತ್ತಾರೆ. ಆದರೆ ಇದು ಯಾವುದೇ ಮ್ಯಾಜಿಕ್ ಅಲ್ಲ. ಇದರ ಪ್ರಯೋಜನಗಳು ವ್ಯಕ್ತಿಯ ಆರೋಗ್ಯ, ದಿನಚರಿ ಮತ್ತು ಸ್ನಾನ ಮಾಡುವ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಹಿಂದೂಗಳು ಬೆಳಗಿನ ಜಾವ ಸ್ನಾನ ಮಾಡುತ್ತಾರೆ. ರಾತ್ರಿ ಸ್ನಾನ ಮಾಡುವ ಅಭ್ಯಾಸ ಇಲ್ಲ. ಇನ್ನು ಆಂಧ್ರಪ್ರದೇಶ ತೆಲುಗಿನವರು ಅದರಲ್ಲೂ ರೈತಾಪಿ ಸಮುದಾಯ ಹೆಚ್ಚಾಗಿ ಸಂಜೆ ಸ್ನಾನ ಮಾಡುವ ಅಭ್ಯಾಸವಿದೆ. ಆದ್ರೆ ರಾತ್ರಿ ಮಾಡುವುದಿಲ್ಲ. ಜಪಾನೀಯರು ಮಾತ್ರ ರಾತ್ರಿ ಸ್ನಾನ ಮಾಡುತ್ತಾರೆ.

ರಾತ್ರಿ ಸ್ನಾನದಿಂದ ದೇಹ, ಮನಸ್ಸಿಗೆ ಸಿಗುತ್ತೆ ಆರಾಮ

 

ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಸ್ನಾಯುಗಳ ಒತ್ತಡ ಕಡಿಮೆಯಾಗಿ, ದಿನವಿಡೀ ಆದ ಸುಸ್ತು ಮಾಯವಾಗುತ್ತದೆ. ಇದರಿಂದ ದೇಹಕ್ಕೆ ಆರಾಮ ಸಿಗುವುದಲ್ಲದೆ, ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಜಪಾನಿನ ಸಂಸ್ಕೃತಿಯಲ್ಲಿ ರಾತ್ರಿ ಸ್ನಾನವನ್ನು ದಿನದ ಶಾಂತಿಯುತ ಮತ್ತು ನೆಮ್ಮದಿಯ ಅಂತ್ಯವೆಂದು ಪರಿಗಣಿಸಲಾಗುತ್ತದೆ.

ಉತ್ತಮ ನಿದ್ದೆಗೆ ಇದು ಪ್ರಯೋಜನಕಾರಿ

ನೀವು ಮಲಗುವುದಕ್ಕೆ 1-2 ಗಂಟೆ ಮುಂಚೆ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ, ದೇಹದ ಉಷ್ಣಾಂಶ ಮೊದಲು ಸ್ವಲ್ಪ ಹೆಚ್ಚಾಗಿ, ನಂತರ ನಿಧಾನವಾಗಿ ಕಡಿಮೆಯಾಗಲು ಶುರುವಾಗುತ್ತದೆ. ಉಷ್ಣಾಂಶದಲ್ಲಿನ ಈ ನೈಸರ್ಗಿಕ ಬದಲಾವಣೆ, ದೇಹಕ್ಕೆ ನಿದ್ದೆ ಮಾಡಲು ಸಿದ್ಧವಾಗುವಂತೆ ಸಂಕೇತ ನೀಡುತ್ತದೆ. ಇದರಿಂದಾಗಿ ಅನೇಕರಿಗೆ ಬೇಗ ಮತ್ತು ಗಾಢವಾಗಿ ನಿದ್ದೆ ಬರುವ ಸಾಧ್ಯತೆ ಹೆಚ್ಚುತ್ತದೆ. ಒಳ್ಳೆಯ ನಿದ್ದೆ ಮರುದಿನದ ಚೈತನ್ಯ, ಮೂಡ್ ಮತ್ತು ಏಕಾಗ್ರತೆ ಮೇಲೂ ಪಾಸಿಟಿವ್ ಪರಿಣಾಮ ಬೀರುತ್ತದೆ.

ಚರ್ಮದ ಸ್ವಚ್ಛತೆ ಮತ್ತು ಉತ್ತಮ ಹೈಜೀನ್‌ಗೆ ಸಹಾಯ

ದಿನವಿಡೀ ಧೂಳು, ಬೆವರು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಂಡ ನಂತರ ರಾತ್ರಿ ಸ್ನಾನ ಮಾಡುವುದರಿಂದ ಚರ್ಮದ ಮೇಲಿರುವ ಕೊಳೆ, ಹೆಚ್ಚುವರಿ ಎಣ್ಣೆ ಮತ್ತು ಬೆವರು ಕ್ಲೀನ್ ಆಗುತ್ತದೆ. ಇದರಿಂದ ನಾವು ಮಲಗುವ ಹಾಸಿಗೆಯೂ ಸ್ವಚ್ಛವಾಗಿರುತ್ತದೆ ಮತ್ತು ಸ್ಕಿನ್‌ಕೇರ್ ಉತ್ತಮಗೊಳಿಸಲು ಕೂಡ ಇದು ಸಹಾಯ ಮಾಡುತ್ತದೆ.

ರಾತ್ರಿ ಸ್ನಾನ ಮಾಡಿದರೆ ಜಪಾನಿಯರ ಹಾಗೆ ಆರೋಗ್ಯ ಸಿಗುತ್ತಾ?

ಇದಕ್ಕೆ ಉತ್ತರ 'ಇಲ್ಲ'. ಜಪಾನಿಯರ ಉತ್ತಮ ಆರೋಗ್ಯದ ರಹಸ್ಯ ಕೇವಲ ರಾತ್ರಿ ಸ್ನಾನ ಮಾಡುವುದರಲ್ಲಿ ಇಲ್ಲ. ಇದರ ಹಿಂದೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆ, ಒತ್ತಡ ರಹಿತ ಕೆಲಸ ಜೀವನಶೈಲಿಯಂತಹ ಅನೇಕ ಉತ್ತಮ ಅಭ್ಯಾಸಗಳು ಸೇರಿವೆ. ಹಾಗಾಗಿ, ನೀವು ರಾತ್ರಿ ಸ್ನಾನದ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಬಯಸಿದರೆ, ಅದನ್ನು ಒಂದು ಸಮತೋಲನ, ಆರೋಗ್ಯಕರ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳಿ. ಆಗ ಮಾತ್ರ ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Relationship tips: ಸಂಗಾತಿಯೊಂದಿಗೆ ಜಗಳವಾದಾಗ ಮರೆತೂ ಈ 5 ತಪ್ಪು ಮಾಡ್ಬೇಡಿ
ಚಿಕನ್ ತಿಂದರೆ ಬ್ಯಾಡ್ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ..? ಯಾವ ರೀತಿಯ ಚಿಕನ್ ಖಾದ್ಯ ಬೆಸ್ಟ್‌?