ನವದೆಹಲಿ (ಏ. 15): ಸಾಮಾನ್ಯ ವೃದ್ಧರು ಮತ್ತು ವಿವಿಧ ರೋಗಗಳಿಗೆ ತುತ್ತಾಗಿರುವ ವೃದ್ಧರು ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುವ ಕಾರಣ, ಮೊದಲಿನಿಂದಲೂ ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ.
ಇದರ ಮುಂದುವರೆದ ಭಾಗವಾಗಿ ವೃದ್ಧರು ತಮ್ಮನ್ನು ತಾವು ಹೇಗೆ ಸೋಂಕು ಹರಡುವುದರಿಂದ ಕಾಪಾಡಿಕೊಳ್ಳಬೇಕು ಮತ್ತು ವೃದ್ಧ ಪೋಷಕರನ್ನು ಮಕ್ಕಳು ಮತ್ತು ಸಂಬಂಧಿಗಳು ಹೇಗೆ ಕಾಪಾಡಿಕೊಳ್ಳಬೇಕು, ಸರ್ಕಾರಗಳು ಹೇಗೆ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಂಗಳವಾರ ಮತ್ತಷ್ಟುಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವುಗಳ ಪ್ರಮುಖಾಂಶ ಹೀಗಿದೆ.
ಈಶಾನ್ಯ ರಾಜ್ಯಗಳ ಜನರಿಗೆ ಸುಲಭಕ್ಕೆ ಕೊರೋನಾ ಬರೋದಿಲ್ಲ!
ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ
ವಯೋಮಾನ ಜನಸಂಖ್ಯೆ
60-69 8.8 ಕೋಟಿ
undefined
70-79 6.4 ಕೋಟಿ
80+ 2.8 ಕೋಟಿ
ನಿರ್ಗತಿಕ ವೃದ್ಧರು 18 ಲಕ್ಷ
ಯಾರಿಗೆಲ್ಲಾ ಈ ಆರೋಗ್ಯ ಸೂಚಿ?
ದೀರ್ಘಕಾಲಿನ ಅಸ್ತಮಾ, ಶ್ವಾಸಕೋಸದ ತೊಂದರೆ, ಟಿಬಿ, ಹೃದಯ ತೊಂದರೆ, ಕಿಡ್ನಿ ಕಾಯಿಲೆ, ಲಿವರ್ ತೊಂದರೆ, ಪಾಶ್ರ್ವವಾಯು, ಮಧುಮೇಹ, ರಕ್ತದೊತ್ತಡ ಹಾಗೂ ಕ್ಯಾನ್ಸರ್ ಇರುವ 60 ವರ್ಷ ಮೇಲ್ಪಟ್ಟಎಲ್ಲರಿಗೂ ಈ ಸೂಚಿ ಅನ್ವಯ.