
ಆರೋಗ್ಯಕ್ಕಾಗಿ ಕಾಲ ಕಾಲದಲ್ಲಿ ಸಿಗೋ ಹಣ್ಣು ಸೇವಿಸಿ
ಕಾಲ ಕಾಲಕ್ಕೆ ಸಿಗೋ ಎಲ್ಲ ಹಣ್ಣುಗಳಲ್ಲಿಯೂ ಸಾಕಷ್ಟು ಪೋಷಕಾಂಶಗಳು, ಅಗತ್ಯ ಜೀವಸತ್ವಗಳಿರುತ್ತವೆ. ಇವಗಳನ್ನು ಸಿಕ್ಕಾಗಲೆಲ್ಲ ಸೇವಿಸಬೇಕು. ಇದರಿಂದ ದೈನಂದಿನ ಆಹಾರದಲ್ಲಿ ಮಿಸ್ ಆದ, ದೇಹಕ್ಕೆ ಅಗತ್ಯವಾದ ಪ್ರೋಟೀನ್ ಹಾಗೂ ವಿಟಮಿನ್‌ಗಳು ಸಿಗುತ್ತವೆ. ಇದರಿಂದ ಸಮತೋಲನ ಆಹಾರ ಸೇವಿಸಿದಂತಾಗಿ, ಬೆಳವಣಿಗೆಗೆ ಸಹಕಾರಿಯಾಗುತ್ತದೆ. ತ್ವಚಾ ಆರೋಗ್ಯ, ರೋಗ-ನಿರೋಧಕ ಶಕ್ತಿ ವೃದ್ದಿ ಹಾಗೂ ಶಕ್ತಿ ಹೆಚ್ಚಲು ಇಂಥ ಹಣ್ಣುಗಳನ್ನು ಸೇವಿಸಲೇಬೇಕು.
ಒಂದೆರಡು ಹಣ್ಣು ಸೇವಿಸಿದರೆ ಅಥವಾ ಕೆಲವು ದಿನಗಳ ಕಾಲ ನಿರಂತರವಾಗಿ ಈ ಎಲ್ಲ ಹಣ್ಣುಗಳನ್ನು ಸೇವಿಸುವುದರಿಂದ ಯಾವುದೇ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಿಲ್ಲ. ಆದರೆ, ಕಾಲ ಕಾಲಕ್ಕೆ ಸೇವಿಸುತ್ತಿದ್ದರೆ ದೇಹದ ಕೊಲೆಸ್ಟರಾಲ್ ಅಂಶ ಕಡಿಮೆಯಾಗಿ, ದೇಹದೊಳಗಿನ ವಿಷಕಾರಿ ಅಂಶಗಳನ್ನು ಇವು ಹೊರ ಹಾಕುವಲ್ಲಿ ಯಾವುದೇ ಸಂಶಯಗಳಿಲ್ಲ. ಇಂಥ ಕೆಲವು ಹಣ್ಣುಗಳ ವಿವರಗಳು ನಿಮಗಾಗಿ...
ರಸ್ಬೆರ್ರಿ
ಥೇಟ್ ದ್ರಾಕ್ಷಿಯಂತೆ ಕಾಣಿಸುವ ಈ ಹಣ್ಣನ್ನು ಒಂದೈದು 15 ನಿಮಿಷಗಳ ಕಾಲ ಸಕ್ಕರೆಯಲ್ಲಿ ನೆನಸಿಟ್ಟು, ಕೇಕ್ ಅಥವಾ ಐಸ್ ಕ್ರೀಂ ಮೇಲೆ ಹಾಕಿ ಸೇವಿಸಬಹುದು. ಕಡಿಮೆ ಬೆಲೆಯಲ್ಲಿ ಸಿಕ್ಕಿದಾಗ ಜಾಮ್ ಮಾಡಿಟ್ಟುಕೊಂಡು ಸಂಗ್ರಹಿಸಿಡಬಹುದು. ಈ ಹಣ್ಣನ್ನು ಸಕ್ಕರೆಯೊಂದಿಗೆ 325 ಡಿಗ್ರಿ ಉಷ್ಣತೆಯಲ್ಲಿ 20 ನಿಮಿಷಗಳ ಕಾಲ ಬೇಯಿಸಿದರೆ, ಜಾಮ್ ಸಿದ್ಧವಾಗುತ್ತದೆ.
- ದೇಹದ ತೂಕವನ್ನು ಕಡಿಮೆ ಮಾಡುವ ಈ ಹಣ್ಣು ಮುಖ ಸುಕ್ಕುಗಟ್ಟುವುದನ್ನು ತಡೆಯುತ್ತದೆ. 1 ಕಪ್ ಮೊಸರು ಮತ್ತು ರಸ್ಬೆರ್ರಿ ಹಣ್ಣುಗಳನ್ನು ಸೇರಿಸಿ ಮುಖಕ್ಕೆ ಹಚ್ಚಿ, 15 ನಿಮಿಗಳು ಬಿಟ್ಟು ತೊಳೆದರೆ, ಮುಖದ ತ್ವಚೆಯ ಕಾಂತಿ ಹೆಚ್ಚುತ್ತದೆ.
-ಕ್ಯಾನ್ಸರ್ ಕೋಶಗಳನ್ನು ತಡೆಯುವಲ್ಲಿ ಈ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತದೆ.
ಪೀಚ್
-ಬಿಳಿ, ಹಳದಿ ಅಥವಾ ಕಿತ್ತಳೆ ಮಿಶ್ರಿತ ಈ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ. ವಿಟಮಿನ್ ಸಿ ಅಧಿಕವಾಗಿರುವ ಈ ಹಣ್ಣು ಚರ್ಮ ರೋಗವನ್ನು ತಡೆಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
- ಸ್ತನ ಕ್ಯಾನ್ಸರ್‌ಗಂತೂ ಇದು ರಾಮಬಾಣ.
- ನೇರಲೆ ಹಣ್ಣು
- ಬರೀ ಬಾಯಲ್ಲೂ ಸೇವಿಸಬಹುದಾದ ಈ ಹಣ್ಣು ಹಳ್ಳಿಗಳಲ್ಲಿ ಹೇರಳವಾಗಿ ಸಿಕ್ಕರೂ, ನಗರಗಳಲ್ಲಿ ಕೊಳ್ಳುವಾಗ ಭಾರಿ ಬೆಲೆ ತೆತ್ತಬೇಕು. ಬರೀ ಬಾಯಲ್ಲೂ ಸೇವಿಸಬಹುದಾದ ಈ ಹಣ್ಣು, ಮಧುಮೇಹಿಗಳಿಗೆ ಅಮೃತ.
- ಆಂಥೋಸಯಾನಿಸ್ ಅಂಶವಿರುವುದರಿಂದ ನೀಲಿ ಬಣ್ಣವಿರುವ ಈ ಹಣ್ಣಿನಲ್ಲಿ ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ, ಮೆಗ್ನೀಷಿಯಮ್, ಮ್ಯಾಂಗನೀಸ್ ಮತ್ತು ವಿಟಮಿನ್ ಕೆ ಧಾರಳವಾಗಿವೆ. ಮೂಳೆ ಶಕ್ತಿ ಹೆಚ್ಚಿಸಲು ಸಹಕರಿಸಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ಜ್ಞಾಪಕ ಶಕ್ತಿ ಹೆಚ್ಚಳಕ್ಕೂ ಇದು ಅಗತ್ಯ.
ಚೆರ್ರಿ
- ಸಾಮಾನ್ಯವಾಗಿ ಎಲ್ಲರಿಗೂ, ಎಲ್ಲೆಡೆ ಸಿಗೋ ಹಣ್ಣಿದು. ಬಹು ಮುಖ್ಯವಾಗಿ ತ್ವಚೆ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆಗಳನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.
-ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿದ್ದು, ಮೊಡವೆಗಳನ್ನು ಹೋಗಲಾಡಿಸುತ್ತದೆ. ತ್ವಚೆಯ ತೇವಾಂಶ ಕಾಯ್ದುಕೊಳ್ಳುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹಾನಿಗೊಳಗಾದ ಚರ್ಮವನ್ನು ಸರಿ ಪಡಿಸುವಲ್ಲಿ ಈ ಕೆಂಪು ಹಣ್ಣು ಮುಖ್ಯ ಪಾತ್ರವಹಿಸುತ್ತದೆ.
- ಅಷ್ಟೇ ಅಲ್ಲ ಈ ಹಣ್ಣಿನ ನಿರಂತರ ಸೇವನೆಯಿಂದ ಮೈಗ್ರೇನ್ ತಲೆನೋವು ಮತ್ತು ನಿದ್ರಾಹೀನತೆಯಂಥ ಸಮಸ್ಯೆಗಳೂ ದೂರವಾಗುವುವು.
ಕಲ್ಲಂಗಡಿ
- ಜ್ಯೂಸ್ ಅಥವಾ ನೇರವಾಗಿಯೇ ಸೇವಿಸಬಹುದಾದ ಈ ಹಣ್ಣಿನ ಬಗ್ಗೆ ಎಲ್ಲಿರಗೂ ಗೊತ್ತು.
-ದಾಹವನ್ನು ತೀರಿಸಿ, ರೋಗಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಇದು ಹೆಚ್ಚಿಸಬಲ್ಲದು.
-ವಿಟಮಿನ್ ಸಿ ಅಧಿಕವಾಗಿರುವ ಈ ಹಣ್ಣು ದೇಹಕ್ಕೆ ಅದಮ್ಯ ಚೇತನವನ್ನು ನೀಡುತ್ತದೆ.
- ವಿಟಮಿನ್ ಎ, ಬಿ6 ಮತ್ತು ಸಿಗಳು ಕಲ್ಲಂಗಡಿಯಲ್ಲಿ ಅಧಿಕವಾಗಿವೆ.
- ಕೊಲೆಸ್ಟರಾಲ್ ಇಲ್ಲದ ಈ ಹಣ್ಣು ದೇಹಕ್ಕೆ ಅಧಿಕ ಶಕ್ತಿಯನ್ನು ಒದಗಿಸುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.