
ಮಳೆಗಾಲ ಶುರುವಾಯಿತು. ಸುರಿಯುವ ಜಿಟಿಜಿಟಿ ಮಳೆಗೆ ಏನಾದರೂ ಬಿಸಿ ಬಿಸಿ ತಿನ್ನುವ ಆಸೆ ಮೂಡುವುದು ಸಹಜ. ಬಗೆ ಬಗೆಯ ಕರಿದ ತಿಂಡಿಗಳು, ಖಾದ್ಯಗಳು ಮಳೆಗಾಲದಲ್ಲಿ ಉತ್ತಮ ಸಂಗಾತಿಗಳು. ಆದರೆ ನಾವಿಲ್ಲಿ ನಿಮಗೆ ಕರಿದ ತಿಂಡಿಗಳ ಬಗ್ಗೆ ತಿಳಿಸುತ್ತಿಲ್ಲ ಬದಲಾಗಿ. ದಿನನಿತ್ಯ ಒಂದೇ ಬಗೆಯ ಅನ್ನ ಸಾಂಬಾರಿನಿಂದ ಬೇಸತ್ತ ನಿಮ್ಮ ನಾಲಿಗೆಗೆ ಹೊಸ ರುಚಿಯ- ಹೊಸ ಬಗೆಯ ಚಟ್ನಿಗಳನ್ನು ಪರಿಚಯಿಸುತ್ತಿದ್ದೇವೆ. ಉಪ್ಪಿನಕಾಯಿಯಂತೆ ಚಟ್ನಿಯೂ ಕೂಡ ಊಟಕ್ಕೆ ಅತ್ಯುತ್ತಮ ಜೊತೆಗಾರ. ಮಳೆಗಾಲದ ವಾತಾವರಣದಲ್ಲಿ ಬಿಡುವಿನ ಸಮಯದಲ್ಲಿ ನೀವು ಈ ಚಟ್ನಿಯನ್ನು ಟ್ರೈ ಮಾಡಬಹುದು.
ಬಾದಾಮಿ ಚಟ್ನಿ
ಬೇಕಾಗುವ ಪದಾರ್ಥಗಳು
1 ಹಿಡಿ ಬಾದಾಮಿ, 2 ಹಸಿ ಮೆಣಸಿನ ಕಾಯಿ, ಎಣ್ಣೆ, ಕೊತ್ತಂಬರಿ ಸೊಪ್ಪು, ಉಪ್ಪು, ನಿಂಬೆ, ಒಗ್ಗರಣೆ ಸಾಮಗ್ರಿ.
ತಯಾರಿಸುವ ವಿಧಾನ
ಬಾದಾಮಿ ಸಿಪ್ಪೆ ತೆಗೆದಿಡಿ. ಹಸಿ ಮೆಣಸಿನ ಕಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ಇಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ. ಒಗ್ಗರಣೆಗೆ ಸಾಸಿವೆ, ಕರಿಬೇವು ಹಾಕಿದರೆ ರುಚಿಯಾದ ಬಾದಾಮಿ ಚಟ್ನಿ ಸಿದ್ಧ. ಇಡ್ಲಿ ದೋಸೆಯೊಂದಿಗೆ ನೆಚ್ಚಿಕೊಳ್ಳಲು ಬಾದಾಮಿ ಚಟ್ನಿ ಉತ್ತಮ. ಸ್ವಲ್ಪ ಸಿಹಿಯಾಗಿಯೂ ಇರುವುದರಿಂದ ಮಕ್ಕಳಿಗೆ, ಅಶಕ್ತರಿಗೆ ಹೇಳಿ ಮಾಡಿಸಿದ್ದು. ಸುಲಭವಾಗಿ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.