
ಮಳೆಗಾಲದಲ್ಲಿ ಕಾಡೋ ರೋಗಕ್ಕೆ ಶುಂಠಿ ಟೀ ಎಂಬ ಸಿಂಪಲ್ ಮದ್ದು
ಹೊರಗಡೆ ತಣ್ಣನೆ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ. ಆಗ ಬಾಲ್ಕಿನಿಯಲ್ಲಿ ಕೂತು ಬಿಸಿ ಬಿಸಿ ಟೀ ಕುಡಿಯೋ ಮಜಾನೇ ಬೇರೆ. ಅದು ಶುಂಠಿ ಹಾಕಿರುವ ಮಸಾಲೆ ಟೀ ಆದರಂತೂ ಹೇಳುವುದೇ ಬೇಡ. ಈ ಸುಖಕ್ಕಿಂತ ಮನುಷ್ಯನಿಗೆ ಬೇರೇನು ಬೇಕು?
ತೂಕ ಕಡಿಮೆ ಮಾಡಲ್ಲೊಂದು, ತಾಜಾತನ ನೀಡಲು ಮತ್ತೊಂದು....ಹೀಗೆ ಗ್ರೀನ್, ಹರ್ಬಲ್, ಬ್ಲ್ಯಾಕ್...ವಿವಿಧ ನಮೂನೆಯ ಟೀಗಳು ಮಾರುಕಟ್ಟೆಯಲ್ಲಿ ಲಭ್ಯ. ಜನರನ್ನು ಆಕರ್ಷಿಸಲ್ಲೊಂದು ನೆಪವಷ್ಟೇ. ಆದರೆ, ಸಾಧಾರಣ ಟೀ ಪುಟಿಗೆ ಶುಂಠಿ ಜಜ್ಜಿ ಹಾಕಿ, ಕುದಿಸಿದರೆ ಮಸಾಲೆ ಟೀ ಸಿದ್ಧ. ಇದರ ರುಚಿಯೂ ಹೆಚ್ಚು, ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಸಿಂಪಲ್ ಮನೆ ಮದ್ದೂ ಆಗಬಲ್ಲದು. ಶುಂಠಿ ಟೀಯಿಂದೇನು ಲಾಭ?
- ಶುಂಠಿ ಟೀಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಳೆಗಾಲದಲ್ಲಿ ಕಾಡುವ ಅನೇಕ ಸಮಸ್ಯೆಗಳು ದೂರವಾಗುತ್ತದೆ. ಕೆಮ್ಮು, ಕಫ, ಗಂಟಲಲ್ಲಿ ಕಿರಿಕಿರಿ ಮುಂತಾದ ಸಾಮಾನ್ಯವಾಗಿ ಕಾಡೋ ಸಮಸ್ಯೆಗಳಿಗೆ ಈ ಟೀ ಅತ್ಯುತ್ತಮ ಪರಿಹಾರ.
- ಒಂದು ಲೋಟ ಬಿಸಿ ಬಿಸಿ ಶುಂಠಿ ಟೇಯಲ್ಲಿ ವಿಟಮಿನ್ ಸಿ, ಮೆಗ್ನೀಷಿಯಂ ಮತ್ತು ಖನಿಜಾಂಶಗಳಿರುತ್ತವೆ.
- ತುಂಬಿದ ಹೊಟ್ಟೆಗೆ ಒಂದು ಕಪ್ ಶುಂಠಿ ಟೀ ಕುಡಿದರೆ, ಜೀರ್ಣಕಾರಿ. ದೇಹ ಹೆಚ್ಚು ಆಹಾರವನ್ನು ಹೀರಿ ಕೊಳ್ಳಲು ಇದು ಸಹಕರಿಸುತ್ತದೆ.
- ಆ್ಯಂಟಿ ಆ್ಯಕ್ಸಿಡೆಂಟ್ ಅಂಶವಿರುವ ಶುಂಠಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಖನಿಜ, ಆಮೈನೋ ಅಮ್ಲ ಆಂಶ ಹೆಚ್ಚಾಗಿರುವ ಶುಂಠಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಇದರಿಂದ ಹೃದಯ ರಕ್ತನಾಳ ಸಮಸ್ಯೆ, ಪಾರ್ಶ್ವವಾಯುವಿನಂಥ ಸಮಸ್ಯೆಯನ್ನು ದೂರು ಮಾಡುತ್ತದೆ.
- ಉಸಿರಾಟ ಸಮಸ್ಯೆ ಹಾಗೂ ಅಲರ್ಜಿಗೂ ಒಂದು ಲೋಟ ಟೀ ಮದ್ದಾಗಬಲ್ಲದು.
- ಒತ್ತಡ ನಿವಾರಣೆಗೆ ಬೆಸ್ಟ್ ಮದ್ದಿದು.
-ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯ ನೋವಿಗೂ ಶುಂಠಿ ಟೀ ಉಪಶಮನಕಾರಿ.
- ಜೇನುತುಪ್ಪವನ್ನು ಶುಂಠಿ ಚಹಾದೊಂದಿಗೆ ಬೆರೆಸಿ ಕುಡಿದರೆ, ಸ್ನಾಯು ಸೆಳೆತ ಕಡಿಮೆಯಾಗಿ, ದೇಹಕ್ಕೆ ಅಗತ್ಯದಷ್ಟು ವಿಶ್ರಾಂತಿ ಪಡೆಯುವಂತೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.