
1) ನನಗೆ 23 ವರ್ಷ. ವಿವಾಹಿತೆ. 5 ತಿಂಗಳ ಕೆಳಗೆ ನನಗೆ ಸಿಸೇರಿಯನ್ ಆಗಿ ಮಗು ಹುಟ್ಟಿದೆ. ಈಗ ನನಗೆ ಮೇಲುಹೊಟ್ಟೆನಿಂತುಕೊಂಡಿದೆ. ಇದನ್ನು ಕರಗಿಸಲು ಏನು ಮಾಡಬೇಕು? ಯಾವ ರೀತಿಯ ದೈಹಿಕ ಕಸರತ್ತು, ವ್ಯಾಯಾಮ ಮಾರ್ಗಗಳನ್ನು ಅನುಸರಿಸಬೇಕು?
-ಸಂಜನಾ ರಮೇಶ್ ಬೆಂಗಳೂರು
ಉತ್ತರ: ಸಹಜ ಹೆರಿಗೆ ಆಗಿದ್ದರೆ 6 ತಿಂಗಳ ನಂತರ ವ್ಯಾಯಾಮ, ಸಿಸೇರಿಯನ್ ಆಗಿದ್ದರೆ 8 ತಿಂಗಳ ನಂತರ ಲಘು ವ್ಯಾಯಾಮವನ್ನು ಕೈಗೊಳ್ಳಬಹುದು. ಈ ಸ್ಥಿತಿಯಲ್ಲಿ ವಾಕಿಂಗ್ ಅತ್ಯುತ್ತಮ ವ್ಯಾಯಾಮ. ಒಂದು ವರ್ಷದ ತನಕ ಕಠಿಣ ಕಸರತ್ತುಗಳಿಗೆ ಮುಂದಾಗಲೇಬಾರದು. ದೇಹ ಸಹಜ ಸ್ಥಿತಿಗೆ ಮರಳಲು ಕನಿಷ್ಠ 10-12 ತಿಂಗಳನ್ನಾದರೂ ಬಯಸುತ್ತದೆ. ಸಾಮಾನ್ಯವಾಗಿ ನವಜಾತ ಶಿಶುವಿನ ತಾಯಿಯಂದಿರಿಗೆ ಬಿಡುವು ಇರುವುದಿಲ್ಲ. ಪ್ರತಿಸಲ ಮಗು ಮಲಗಿದಾಗ ಕನಿಷ್ಠ 10 ನಿಮಿಷವನ್ನಾದರೂ ವ್ಯಾಯಾಮಕ್ಕೆ ಮೀಸಲಿಡಬೇಕು. 6 ನ್ಯೂಟ್ರಿಷಿಯನ್ಸ್ ಡಯೆಟ್ ಅನುಸರಿಸಬೇಕು. ಮೀಟ್ ಪ್ರೊಟೀನ್ಸ್ (ಮೀನು, ಕೋಳಿ, ಮೊಟ್ಟೆ), ಸಸ್ಯಾಹಾರಿಗಳಾಗಿದ್ದರೆ ಸೋಯಾ, ದಾಲ್‌ಗಳನ್ನು ಸೇವಿಸಬೇಕು. ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್, ವಿಟಮಿನ್ಸ್, ಮಿನರಲ್ಸ್ ತರಕಾರಿ, ಹಾಲು- ಮೊಸರನ್ನು ಹೆಚ್ಚು ಸೇವಿಸಬೇಕು. ನಿತ್ಯ 40 ನಿಮಿಷ ನಡಿಗೆಯನ್ನು ಕಡ್ಡಾಯವಾಗಿ ರೂಢಿಸಿಕೊಳ್ಳಬೇಕು. ಇದು ಒಂದೇ ಸಲ ಅಲ್ಲದಿದ್ದರೂ ಬೇರೆ ಬೇರೆ ಅವಧಿಯಲ್ಲಿ ನಡಿಗೆಯನ್ನು ಪೂರೈಸಬೇಕು. ವ್ಯಾಯಾಮ ಮಾಡದೇ ಹೋದರೆ, ಹೊಟ್ಟೆಯ ಭಾಗದಲ್ಲಿ ನಿಂತು ಕೊಳ್ಳುವ ಕೊಬ್ಬು ಹೆಚ್ಚುತ್ತಾ ಹೋಗಿ, ಹಾಗೆಯೇ ಉಳಿದುಕೊಳ್ಳುತ್ತದೆ. ಅದನ್ನು ಆರಂಭದಲ್ಲೇ ಲಘು ವ್ಯಾಯಾಮದ ಮೂಲಕ ಕರಗಿಸಿಕೊಳ್ಳಬೇಕು. ಆದಷ್ಟುಮನೆಯ ಕೆಲಸಗಳನ್ನು ನಿರ್ವಹಿಸಿದರೂ ದೇಹಕ್ಕೆ ಅಗತ್ಯ ವ್ಯಾಯಾಮ ಸಿಗುತ್ತದೆ. ಹಿಂದಿನ ಕಾಲದ ಮಹಿಳೆಯರಿಗೆ ಹೆರಿಗೆಯ ನಂತರ ಯಾಕೆ ಹೊಟ್ಟೆನಿಲ್ಲುತ್ತಿರಲಿಲ್ಲವೆಂದರೆ ಇದೇ ಕಾರಣಕ್ಕೆ. ಅದನ್ನು ಈಗಿನ ಪೀಳಿಗೆಯವರು ಅನುಸರಿಸಿದರೆ ಸಮಸ್ಯೆಗೆ ಪರಿಹಾರ ಸಾಧ್ಯ.
ವನಿತಾ ಅಶೋಕ್, ಫಿಟ್ನೆಸ್ ತಜ್ಞೆ(ಕನ್ನಡ ಪ್ರಭ)
Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.