ರಾಗಿ ಬಲ್ಲವನಿಗೆ ರೋಗವಿಲ್ಲ

Published : Sep 22, 2018, 02:17 PM IST
ರಾಗಿ ಬಲ್ಲವನಿಗೆ ರೋಗವಿಲ್ಲ

ಸಾರಾಂಶ

ರಾಗಿಯಿಂದ ರೊಟ್ಟಿ, ಗಂಜಿ, ಮುದ್ದೆ, ದೋಸೆ ಮತ್ತು ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇದರಲ್ಲಿ ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶ ದೊರೆಯುತ್ತದೆ.

ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ರಾಗಿ ಒಂದು ಪೂರ್ಣ ಆಹಾರ. ಉಳಿದೆಲ್ಲ ಧಾನ್ಯಗಳಿಗಿಂತ ಹೆಚ್ಚಿನ ಫೈಬರ್ ಹೊಂದಿರುವುದರಿಂದ ಹಾಗೂ ಅಮೈನೋ ಆ್ಯಸಿಡ್ ಟ್ರಿಪ್ಟೋಫಾನ್ ಇರುವುದರಿಂದ ತೂಕ ಇಳಿಸಬೇಕೆನ್ನುವವರಿಗೆ ರಾಗಿ ಹೇಳಿ ಮಾಡಿಸಿದ ಆಹಾರ ಪದಾರ್ಥ.

ಕ್ಯಾಲ್ಸಿಯಂ ವಿಚಾರಕ್ಕೆ ಬಂದರೆ ಇನ್ನಾವುದೇ ಧಾನ್ಯಗಳು ರಾಗಿಯ ಹತ್ತಿರಕ್ಕೂ ಬಂದು ನಿಲ್ಲಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಕ್ಯಾಲ್ಶಿಯಂ ಹಾಗೂ ವಿಟಮಿನ್ ಡಿ ರಾಗಿಯಲ್ಲಿದೆ. ಹೀಗಾಗಿ ಹಲ್ಲು, ಮೂಳೆಗಳ ಬಲವರ್ಧನೆಗೆ ಸಹಕಾರಿ.  ಫೈಬರ್ ಹೆಚ್ಚಿರುವುದರಿಂದ ಡಯಾಬಿಟೀಸ್ ನಿಯಂತ್ರಣಕ್ಕೆ ತರುತ್ತದೆ. ಕೊಲೆಸ್ಟೆರಾಲನ್ನು ಕಡಿಮೆಗೊಳಿಸುವುದಲ್ಲದೆ, ಸ್ಟ್ರೆಸ್ ಹಾರ್ಮೋನ್‌ಗಳನ್ನು ನಿಷ್ಕ್ರಿಯಗೊಳಿಸಿ ಮಾನಸಿಕ ಸಮತೋಲನವನ್ನು ಕಾಪಾಡುತ್ತದೆ.  ಅಧಿಕ ಕಬ್ಬಿಣವನ್ನು ಹೊಂದಿರುವುದರಿಂದ ಅನೀಮಿಯಾ ನಿಯಂತ್ರಿಸಿ, ಮನೋಲ್ಲಾಸ ನೀಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಚೆನ್ನಾಗಿ ನಿದ್ರೆ ಬರಲು ಇಲ್ಲಿವೆ 6 ಸೂಪರ್ ಫುಡ್ಸ್!
ಫ್ರಿಡ್ಜ್‌ನಲ್ಲಿಟ್ಟ ಮೊಟ್ಟೆಗಳು ಕೊಳೆಯುತ್ತವೆಯೇ? ಗೃಹಿಣಿಯರು ತಿಳಿದುಕೊಳ್ಳಬೇಕಾದ ವಿಷಯವಿದು!