2000 ವರ್ಷ ಹಳೆಯ ಕೊಂಬುಚಾ ಟೀ ಇದೀಗ ಆರೋಗ್ಯ ಕಾಳಜಿ ಹೊಂದಿರುವ ಯುವಜನರ ಫೇವರೇಟ್ ಡ್ರಿಂಕ್ ಆಗಿದೆ.
ವರ್ಷ 221 ಬಿಸಿಇ. ಚೀನಾದ ಮೊದಲ ಚಕ್ರವರ್ತಿ ಕ್ವಿನ್ ಶಿ ಹಾಂಗ್ ಅತಿಯಾದ ಸಾವಿನ ಭಯದಿಂದ ನರಳತೊಡಗಿದ. ಆಗಲೇ ಬದುಕಿಸುವ ಅಮೃತಕ್ಕಾಗಿ ವಿಪರೀತ ಹಂಬಲಿಸತೊಡಗಿದ. ಆಸ್ಥಾನದ ಪಂಡಿತರೆಲ್ಲ ಸೇರಿ ಇರೋ ಬರೋ ಆಯುರ್ವೇದಿಕ್ ವಿದ್ಯೆಯನ್ನೆಲ್ಲ ಜಾಲಾಡಿ, ಒಂದು ಅಮೃತವನ್ನು ಶೋಧಿಸಿದರು. ಆ ಹುದುಗು ಬರಿಸಿದ ಚಹಾವೇ ಕೊಂಬುಚ ಟೀ. ಅದು ಆತನನ್ನು ಬದುಕಿಸುವಲ್ಲಿ ಸಫಲವಾಯಿತು. ಸುಮಾರು 2000 ವರ್ಷಗಳು ಕಳೆದಿವೆ. ಇದೀಗ ಈ ಕೊಂಬುಚಾ ಟೀ ತನ್ನ ಆರೋಗ್ಯಕಾರಿ ಅಂಶಗಳಿಗಾಗಿ ಯುವ ಭಾರತೀಯರನ್ನು ಸೆಳೆಯುತ್ತಿದೆ. ಕೊಂಬುಚಾ ಇದೀಗ ಹೊಸ ಟ್ರೆಂಡೀ ಹೆಲ್ತ್ ಡ್ರಿಂಕ್ ಆಗಿದೆ.
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
ಪ್ರೀತಿಯಿಂದ ಹುದುಗು ಬರಿಸಿದ್ದು ಜಪಾನಿನ ಚಕ್ರವರ್ತಿ ಇನ್ಯೋಕೋಗೆ 414 ಬಿಸಿಯಲ್ಲಿ ಮೊದಲ ಬಾರಿಗೆ ಕೊರಿಯನ್ ವೈದ್ಯ ಡಾ. ಕೊಂಬು ಈ ಟೀಯನ್ನು ಪರಿಚಯಿಸಿದ್ದರು. ಅವರಿಂಲೇ ಈ ಚಹಾಕ್ಕೆ ಕೊಂಬುಚಾ ಎಂಬ ಹೆಸರು ಬಂದಿದೆ. ಆಗಿನಿಂದಲೂ ಕೊಂಬುಚಾವನ್ನು ಜಪಾನ್, ಪೂರ್ವ ಯೂರೋಪ್ ಹಾಗೂ ರಷ್ಯಾಗಳಲ್ಲಿ ಹಲವು ಶತಮಾನಗಳಿಂದ ಸೇವಿಸಲಾಗುತ್ತಿದೆ. ವಿಶ್ವಯುದ್ಧ 2ರ ಬಳಿಕ ಜರ್ಮನ್ ವೈದ್ಯ ರುಡಾಲ್ಫ್ ಸ್ಕ್ಲೀನರ್ ಎಂಬಾತ ಇದನ್ನೂ ಪಾಶ್ಚಾತ್ಯ ದೇಶಗಳಿಗೂ ಪರಿಚಯಿಸಿದ. ಆ ಬಳಿಕ ವಿದೇಶಗಳಲ್ಲಿದ್ದು ದೇಶಕ್ಕೆ ಮರಳಿದ ಭಾರತೀಯರು ಈ ಚಹಾದ ಆರೋಗ್ಯ ಲಾಭಗಳಿಗೆ ಮಾರುಹೋಗಿ ಸ್ವದೇಶಕ್ಕೂ ಇದನ್ನು ಹೊತ್ತು ತಂದರು. ತದನಂತರ ಕಳೆದೆರಡು ವರ್ಷಗಳಿಂದ ಗೋವಾ ಹಾಗೂ ಮುಂಬಯಿಗಳಲ್ಲಿ ಕೊಂಬುಚಾ ಟ್ರೆಂಡೀ ಚಹಾವಾಗಿದೆ. ಇದೀಗ ಹಲವಾರು ಬ್ರ್ಯಾಂಡ್‌ಗಳು ಕೊಂಬುಚಾ ಟೀಯನ್ನು ಹೊತ್ತು ತಂದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿವೆ.
ಬ್ಲ್ಯಾಕ್ ಅಲ್ಲ, ಆರೋಗ್ಯಕ್ಕೆ ಬ್ಲೂ ಟೀ
undefined
ಭಾರತದಲ್ಲಿ ಇಂಥ ಒಂದು ಪ್ರಥಮ ಬ್ರ್ಯಾಂಡ್ ಮುಂಬೈ ಮೂಲದ ಬೊಂಬುಚಾ. ನಿತಿನ್ ಗಾಂಧಿ ಹಾಗೂ ಮೋನಿಕಾ ಪೌಲೋಸ್ಕಾ ದಂಪತಿ ಇದನ್ನು ಆರಂಭಿಸಿದ್ದಾರೆ. ಇಂಡೋನೇಶ್ಯಾದಲ್ಲಿದ್ದಾಗ ಪ್ಯಾರಾಸಿಸ್ಟಿಕ್ ಇನ್ಫೆಕ್ಷನ್‌ಗಾಗಿ ಪೌಲೋಸ್ಕಾ ಇದನ್ನು ಸೇವಿಸಿ, ಅದರ ಲಾಭಗಳಿಂದ ಮರುಳಾಗಿದ್ದರು. ಇದರಿಂದ ಪ್ರೇರೇಪಿತರಾದ ಅಲರು ಕೊಂಬುಚಾವನ್ನು ಭಾರತೀಯರಿಗೂ ಪರಿಚಯಿಸುವ ನಿರ್ಧಾರದೊಂದಿಗೆ ಬೊಂಬುಚಾವನ್ನು ಆರಂಭಿಸಿದರು. ಇದೀಗ ಈ ಕೊಂಬುಚಾ ದೇಶಾದ್ಯಂತ ಕೆಫೆಗಳಲ್ಲಿ, ಸೂಪರ್‌ಮಾರ್ಕೆಟ್‌ಗಳಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಲಭ್ಯ. ಅಟ್ಮಾಸ್ಪಿಯರ್, ಖುಕ್ರೇನ್ಸ್ ಕೊಂಬುಚಾ ಬ್ರ್ಯಾಂಡ್‌ಗಳೂ ಪ್ರಸಿದ್ಧಿ ಪಡೆದಿವೆ.
ಆರೋಗ್ಯದ ರುಚಿ
ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....
ಕೊಂಬುಚಾ ಟೀ ರೆಸಿಪಿ ಬಹಳ ಸುಲಭ. ಟೀ ಪೌಡರ್, ಸಕ್ಕರೆ, ನೀರು ಹಾಗೂ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಮಿಕ್ಸ್ಚರ್(ಸಿಂಬಾಯೋಟಿಕ್ ಕಲ್ಚರ್ ಆಫ್ ಬ್ಯಾಕ್ಟೀರಿಯಾ ಆ್ಯಂಡ್ ಯೀಸ್ಟ್, ಸ್ಕೋಬಿ) ಸೇರಿಸಿ ಕುದಿಸಿದರಾಯ್ತು. ಇದನ್ನು ವಾರಗಳ ಕಾಲ ಹಾಗೆಯೇ ಇಡಬೇಕು. ಈ ಸ್ಕೋಬಿಯು ಟೀಯಲ್ಲಿರುವ ಸಕ್ಕರೆ ಜೊತೆ ಬೆರೆತು ಅದನ್ನು ಅಲ್ಕೋಹಾಲ್ ಆಗಿ ಪರಿವರ್ತಿಸುತ್ತದೆ. ಚಹಾದ ಮೇಲೆ ಅಣಬೆಯಂತೆ ಒಂದು ತೆರೆ ಬಂದು ನಿಲ್ಲುತ್ತದೆ. ಅದು ಅಸಿಟಿಕ್ ಆ್ಯಸಿಡ್ ಆಗಿ ಟೀಗೆ ನೊರೆ ಹಾಗೂ ಹುಳಿ ಫ್ಲೇವರ್ ನೀಡುತ್ತದೆ. ಈ ವಿಧಾನದಿಂದ ಹುದುಗು ಬಂದ ಟೀಯಲ್ಲಿ ಪೋಷಕಾಂಶಗಳು, ಆ್ಯಂಟಿಆಕ್ಸಿಡೆಂಟ್ಸ್, ಪ್ರೋಬಯೋಟಿಕ್ಸ್ ಹಾಗೂ ಎಂಜೈಮ್ಸ್ ಹೇರಳವಾಗಿ ಸೇರಿಕೊಂಡು ನಿಮ್ಮ ದೇಹದ ಮೇಲೆ ಮ್ಯಾಜಿಕ್ ಮಾಡುತ್ತವೆ.
ಲಿವರನ್ನು ರಕ್ಷಿಸಿ, ಉರಿಯೂತ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಕೊಂಬುಚಾ ಟೀ. ಇದರಲ್ಲಿರುವ ಪ್ರೋಬಯೋಟಿಕ್ಸ್ ಉತ್ತಮ ಗಟ್ ಸಪೋರ್ಟ್ ನೀಡುತ್ತವೆ. ಆದರೆ, ಇದು ಆಲ್ಕೋಹಾಲ್ ಆಗಿ ಪರಿವರ್ತನೆ ಆಗುವುದರಿಂದ ಗರ್ಭಿಣಿಯರು, ಮಗುವಿಗೆ ಹಾಲುಣಿಸುವ ತಾಯಂದಿರು ಹಾಗೂ ಡಯಾಬಿಟೀಸ್ ಇರುವವರು ಈ ಚಹಾದಿಂದ ದೂರ ಉಳಿಯುವುದು ಒಳಿತು ಎಂದು ಎಚ್ಚರಿಸುತ್ತಾರೆ ವೆಲ್‌ನೆಸ್ ಕನ್ಸಲ್ಟೆಂಟ್ ಜಿಯಾ ಸಿಂಗ್.