
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ಒಬ್ಬ ವ್ಯಕ್ತಿ ನೋಡಲು ಸುಂದರವಾಗಿಲ್ಲದೆ ಹೋದ್ರು ಆತ ಎಲ್ಲರನ್ನು ಆಕರ್ಷಿಸುತ್ತಾನೆ. ತನ್ನ ವ್ಯಕ್ತಿತ್ವದಿಂದಲೇ ಸುಂದರವಾಗಿ ಕಾಣುತ್ತಾನೆ. ಎಲ್ಲರ ಮೆಚ್ಚುಗೆ ಗಳಿಸುತ್ತಾನೆ. ಅದೇ ಇನ್ನೊಬ್ಬ ವ್ಯಕ್ತಿ ನೋಡಲು ಸುಂದರವಾಗಿದ್ದರೂ ಆತನ ವ್ಯಕ್ತಿತ್ವ ಸೆಪ್ಪೆಯಾಗಿದ್ದರೆ ಆತ ಯಾರನ್ನೂ ಸೆಳೆಯಲಾರ. ಯಾರ ಮೆಚ್ಚುಗೆಯನ್ನೂ ಗಳಿಸಲಾರ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕವಾಗಿ ಸ್ಮಾರ್ಟ್ ಆಗೋದು ಮುಖ್ಯವಾಗುತ್ತದೆ. ನೀವೂ ಎಲ್ಲರ ಮುಂದೆ ಸ್ಮಾರ್ಟ್ ಆಗಿ ಕಾಣ್ಬೇಕು ಎಂದಾದ್ರೆ ಕೆಲ ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಹಾಗೆ ಐದೇ ಐದು ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ವ್ಯಕ್ತಿಯೊಬ್ಬ ಆಕರ್ಷಕವಾಗಿ ಕಾಣಲು ಆತನಲ್ಲಿರುವ ಯಾವ ಹವ್ಯಾಸ ಕಾರಣ ಎಂಬುದನ್ನು ನಾವಿಂದು ಹೇಳ್ತೇವೆ.
ಸ್ಮಾರ್ಟ್ (Smart) ವ್ಯಕ್ತಿಗಳಿಗಿರುತ್ತೆ ಈ ಹವ್ಯಾಸ (Habits) :
ಪ್ರಶ್ನೆಗಳನ್ನು ಕೇಳುವ ಅಭ್ಯಾಸ : ವ್ಯಕ್ತಿ ಒಂದು ವಿಷ್ಯದ ಬಗ್ಗೆ ಗೊಂದಲಗೊಂಡಾಗ ಅದನ್ನು ಬಗೆಹರಿಸುವ ಪ್ರಯತ್ನ ನಡೆಸದೆ ಹೋದ್ರೆ, ಎಲ್ಲರ ಮುಂದೆ ಪ್ರಶ್ನೆಗಳನ್ನು ಕೇಳಲು ಹಿಂಜರಿದ್ರೆ ಆತ ಬುದ್ಧಿವಂತನಾಗಲಾರ. ಸ್ಮಾರ್ಟ್ ವ್ಯಕ್ತಿ ಆಗ್ಬೇಕೆಂದ್ರೆ ಅದು ಯಾವುದೇ ಸಂದರ್ಭವಿರಲಿ, ಯಾರೇ ಇರಲಿ ಅವರ ಮುಂದೆ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕು. ಸರಿಯಾದ ಮಾಹಿತಿ ಪಡೆಯಲು ಪ್ರಯತ್ನಿಸಬೇಕು. ಬುದ್ಧಿವಂತ ವ್ಯಕ್ತಿ ಈ ಕೆಲಸವನ್ನು ಅವಶ್ಯಕವಾಗಿ ಮಾಡ್ತಾನೆ.
ಸಸ್ಯಾಹಾರಿಗಳಿಗೆ ಶಾಕಿಂಗ್ ನ್ಯೂಸ್: ಆಹಾರ ವೇಸ್ಟ್ ಮಾಡ್ಬೇಡಿ ಅನ್ನೋದು ಇದೇ ಕಾರಣಕ್ಕೆ!
ಕಲಿಕೆಗೆ ಹೆಚ್ಚು ಆದ್ಯತೆ : ವ್ಯಕ್ತಿಯೊಬ್ಬ ಪರಿಪೂರ್ಣನಾಗಲು ಸಾಧ್ಯವಿಲ್ಲ. ಆದ್ರೆ ಜೀವನ ಪರ್ಯಂತ ಕಲಿಕೆಗೆ ಅವಕಾಶವಿರುತ್ತದೆ. ಹೊಸ ಹೊಸ ವಿಷ್ಯಗಳನ್ನು ಕಲಿತಂತೆ ವ್ಯಕ್ತಿ ಮತ್ತಷ್ಟು ಬುದ್ಧಿವಂತನಾಗ್ತಾನೆ. ಆತನ ಜ್ಞಾನ (Knowledge) ವೃದ್ಧಿಯಾಗ್ತಿದ್ದಂತೆ ಮುಖದಲ್ಲೊಂದು ವಿಶೇಷ ಕಳೆ, ಆಕರ್ಷಣೆ ಬರುತ್ತದೆ. ಹೊಸದನ್ನು ಕಲಿಯುವ ಬಯಕೆ, ಹೊಸದನ್ನು ತಿಳಿದುಕೊಳ್ಳುವ ಆಸೆ ಒಬ್ಬ ವ್ಯಕ್ತಿಯನ್ನು ಬುದ್ಧಿವಂತನನ್ನಾಗಿ ಮಾಡುತ್ತದೆ. ನೀವೂ ಬುದ್ಧಿವಂತರಾಗಬೇಕೆಂದ್ರೆ ಪ್ರತಿ ದಿನ ಹೊಸದನ್ನು ಕಲಿಯಲು ಪ್ರಯತ್ನಿಸಿ.
ಹೊಗಳಿಕೆ – ಅಹಂಕಾರ ಶೋಭೆ ತರುವುದಿಲ್ಲ : ತುಂಬಿದ ಕೊಡ ಥುಳುಕುವುದಿಲ್ಲ ಎನ್ನುವ ಮಾತಿದೆ. ಯಾವುದೇ ವ್ಯಕ್ತಿ ಬುದ್ಧಿವಂತನಾಗಿದ್ದರೆ, ಜ್ಞಾನವನ್ನು ಹೊಂದಿದ್ದರೆ ಆತ ತನ್ನ ಬುದ್ಧಿವಂತಿಕೆ ಬಗ್ಗೆ ಅಹಂಕಾರ ಹೊಂದಿರುವುದಿಲ್ಲ. ತನಗೆ ಇಷ್ಟು ತಿಳಿದಿದೆ, ಅಷ್ಟು ತಿಳಿದಿದೆ ಎಂದು ಎಲ್ಲರ ಮುಂದೆ ತನ್ನನ್ನು ತಾನು ಹೊಗಳಿಕೊಳ್ಳುವುದಿಲ್ಲ. ಯಾವುದೇ ವ್ಯಕ್ತಿ ಈತನ ಮುಂದೆ ತಿಳಿದ ವಿಷ್ಯವನ್ನೇ ಹೇಳ್ತಿದ್ದರೂ ಆತ ಸುಮ್ಮನೆ ಕೇಳುತ್ತಾನೆಯೇ ವಿನಃ ನನಗೆ ಗೊತ್ತು ಎಂಬ ಅಹಂ ತೋರಿಸಲಾರ.
ಮಿಕ್ಕಿರೋ ಇಡ್ಲಿಯಿಂದ ನಟಿ ಅದಿತಿ ಮಾಡಿದ್ರು ಯಮ್ಮಿ ಬ್ರೇಕ್ಫಾಸ್ಟ್, ಸುಲಭದ ಟೊಮ್ಯಾಟೊ ಚಟ್ನಿ!
ಓದುವ ಅಭ್ಯಾಸ : ಪುಸ್ತಕ ಓದುವುದ್ರಿಂದ ಅನೇಕ ವಿಷ್ಯಗಳು ತಿಳಿಯುತ್ತವೆ. ಬುದ್ಧಿವಂತ ವ್ಯಕ್ತಿ ಅವಕಾಶ ಸಿಕ್ಕಾಗ ಪುಸ್ತಕ, ಪತ್ರಿಕೆ, ಬ್ಲಾಗ್ ಗಳನ್ನು ಓದುತ್ತಾನೆ. ಅನೇಕ ಕ್ಷೇತ್ರಗಳ ಬಗ್ಗೆ ಜ್ಞಾನ ಪಡೆಯುವ ಪ್ರಯತ್ನ ನಡೆಸುತ್ತಾನೆ. ಇತಿಹಾಸ, ವಿಜ್ಞಾನ, ವೈದ್ಯಕೀಯ ಕ್ಷೇತ್ರ ಮಾತ್ರವಲ್ಲ ಈಗಿನ ಯುವಜನರ ಆಲೋಚನೆ ಅವರ ಆಸಕ್ತಿ ಬಗ್ಗೆಯೂ ತಿಳಿಯುವ ಪ್ರಯತ್ನ ನಡೆಸ್ತಾನೆ. ಸಮಯವನ್ನು ಹಾಳು ಮಾಡದೆ ಪುಸ್ತಕಗಳನ್ನು ಓದಿ ನಿಮ್ಮ ಜ್ಞಾನವನ್ನೂ ಹೆಚ್ಚಿಸಿಕೊಳ್ಳಿ. ನೀವು ಓದಿದ ವಿಷ್ಯವನ್ನು ಇನ್ನಷ್ಟು ಮಂದಿಗೆ ತಿಳಿಸಿ. ನೀವು ವಿಷ್ಯವನ್ನು ಹಂಚಿಕೊಂಡಂತೆ ನಿಮ್ಮ ಜ್ಞಾನ ಹೆಚ್ಚಾಗುವ ಜೊತೆಗೆ ಓದಿದ ವಿಷ್ಯ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ.
ಏಕಾಂತದಲ್ಲೂ ಆನಂದ : ಕಡಿಮೆ ಜ್ಞಾನ ಹೊಂದಿರುವ ಜನರಲ್ಲಿ ಭಯ ಆವರಿಸಿರುತ್ತದೆ. ಅವರು ಗುಂಪಿನ ಜೊತೆ ಓಡಾಡಲು ಬಯಸ್ತಾರೆ. ಅದೇ ಬುದ್ಧಿವಂತ ಜನರು ಯಾವುದಕ್ಕೂ ಹೆದರುವುದಿಲ್ಲ. ಏಕಾಂಗಿಯಾಗಿದ್ದರೂ ಅವರು ಸಂತೋಷವನ್ನು ಅನುಭವಿಸುತ್ತಾರೆ. ಯಾರ ಕೆಲಸದಲ್ಲೂ ಹಸ್ತಕ್ಷೇಪ ಮಾಡಲು ಅವರು ಬಯಸುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.