ಸಂಬಂಧ, ಮದುವೆಯಂಥ ವಿಷಯಗಳಲ್ಲಿ ಗಂಡು ಹೆಣ್ಣಿಗೆ ಬದ್ಧತೆ ಇರಬೇಕು. ಯಾರೊಬ್ಬರೂ ಈ ವಿಷಯದಲ್ಲಿ ಬದ್ಧರಾಗಿಲ್ಲವೆಂದರೆ ಅದು ಗಟ್ಟಿಯಾಗಿ ಉಳಿಯುವುದಿಲ್ಲ. ಹಾಗಾದ್ರೆ ಗಂಡಿನಲ್ಲಿರೋ ಬದ್ಧತೆಯನ್ನು ಗುರುತಿಸುವುದು ಹೇಗೆ?
ತುಂಬಾ ಸಮಯದಿಂದ ರಿಲೇಷನ್‌ಶಿಪ್‌ನಲ್ಲಿದ್ದು, ಹುಡುಗನಲ್ಲಿ ಕೊಂಚ ಬದಲಾವಣೆ ಆದರೆ ಯಾಕೋ ಭಯ ಆರಂಭವಾಗುತ್ತದೆ. ಆತನ ಗುಣ, ಸ್ವಭಾವ ನಿಧಾನವಾಗಿ ಬದಲಾಗುತ್ತ ಬಂದರೆ ನಿಜವಾಗಿಯೂ ಆತ ಪ್ರೀತಿಸಿದ್ದು ನಿಜವೇ? ಅಥವಾ ಎಮೋಷನ್ ಜೊತೆ ಆಟ ಅಡಿರಬಹುದೇ ಎಂದು ಯೋಚನೆ ಆರಂಭವಾಗುತ್ತದೆ. ಅವರು ನಿಮ್ಮನ್ನು ಪ್ರೀತಿಸಿತ್ತಾರೋ? ಇಲ್ಲವೋ ? ಎಂಬುದನ್ನು ತಿಳಿಯಲು ಈ ಸಲಹೆ...
undefined
ಭವಿಷ್ಯದ ಬಗ್ಗೆ ಮಾತನಾಡುವಾಗ ನಿಮ್ಮ ಬಗ್ಗೆ ಹೇಳೋಲ್ಲ: ಆತ ತನ್ನ ಭವಿಷ್ಯದ ಬಗ್ಗೆ ಮಾತನಾಡುವಾಗ, ಯೋಜನೆ ರೂಪಿಸುವಾಗ ಎಲ್ಲಿಯೂ ನಿಮ್ಮ ಬಗ್ಗೆ ಹೇಳುವುದೇ ಇಲ್ಲ ಎಂದಾದರೆ ಅವರ ಭವಿಷ್ಯದಲ್ಲಿ ನಿಮಗೆ ಸ್ಥಾನವಿಲ್ಲ. ಹೀಗಿದ್ದರೆ ನಿಮ್ಮನ್ನು ಅವರು ಮದುವೆಯಾಗುವುದಿಲ್ಲ.
ನಿಮ್ಮನ್ನು ಅವರ ಗೆಳತಿಯರಿಗೆ ಪರಿಚಯಿಸುವುದಿಲ್ಲ: ಅವರು ತಮ್ಮ ಮಹಿಳಾ ಗೆಳೆಯರೊಂದಿಗೆ ಇರುವಾಗ ಯಾವತ್ತೂ ನಿಮ್ಮ ಬಗ್ಗೆ ಮಾತನಾಡುವುದಿಲ್ಲ, ಜೊತೆಗೆ ನಿಮ್ಮನ್ನು ಅವರಿಗೆ ಪರಿಚಯಿಸುವುದೂ ಇಲ್ಲ.
ನಿಮ್ಮ ಫ್ಯಾಮಿಲಿಯನ್ನು ಭೇಟಿಯಾಗಲ್ಲ: ನೀವು ಅದೆಷ್ಟೇ ಟ್ರೈ ಮಾಡಿದರೂ ಅವರು ನಿಮ್ಮ ಕುಟುಂಬದವರನ್ನು ಭೇಟಿಯಾಗಲು ಇಷ್ಟಪಡುವುದಿಲ್ಲ. ಪ್ರತಿ ಬಾರಿ ಏನಾದರೂ ನೆಪ ಹೇಳಿ ತಪ್ಪಿಸುತ್ತಾರೆ.
ನಿಮ್ಮ ಸಮಸ್ಯೆ ಪರಿಹರಿಸುವುದಿಲ್ಲ: ಫ್ಲರ್ಟ್ ಮಾಡಲು, ಫಿಸಿಕಲ್ ಸಂಬಂಧ ಹೊಂದಲು ಮಾತ್ರ ಅವರು ನಿಮ್ಮ ಜೊತೆ ಇರುತ್ತಾರೆ. ಆದರೆ ನಿಮಗೆ ಸಮಸ್ಯೆ ಎಂದು ಬಂದಾಗ ಅವರು ಖಂಡಿತಾ ಅದನ್ನು ಬಗೆಹರಿಸುವುದಿಲ್ಲ. 'ನಿನ್ನ ಸಮಸ್ಯೆ ನೀನೆ ಬಗೆ ಹರಿಸಿಕೋ...' ಎನ್ನುವ ಉಚಿತ ಸಲಹೆ ಬೇರೆ ನೀಡುತ್ತಾರೆ.
ಕರೆಗಳನ್ನು ಅವಾಯ್ಡ್ ಮಾಡುತ್ತಾರೆ: ನೀವು ನೂರು ಸಲ, ಕರೆ ಮಾಡಿ, ಮೆಸೇಜ್ ಮಾಡಿದರೂ ಅವರು ರಿಪ್ಲೇ ಮಾಡುವುದಿಲ್ಲ. ಇಲ್ಲವಾದರೆ ಕೋಪದಿಂದಲೇ ಉತ್ತರಿಸುತ್ತಾರೆ.
ಒಟ್ಟಿನಲ್ಲಿ ಮನದಾಸೆ, ಭಾವನೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಸಂಬಂಧವನ್ನು ಸುಧಾರಿಸಿಕೊಳ್ಳಲು ಯತ್ನಿಸಬೇಕು. ಇಲ್ಲದಿದ್ದರೆ ಅದು ಹೆಚ್ಚು ದಿನ ಓಡುವ ಸಂಬಂಧವಲ್ಲವೆಂಬುದನ್ನು ಅರಿತು, ಬಾಂಧವ್ಯಕ್ಕೆ ಬ್ರೇಕ್ ಹಾಕುವುದು ಒಳಿತು. ಆದರೆ, ಯಾವ ಬಾಂಧವ್ಯವೂ ವೀಕ್ ಆಗದಿರಲಿ ಎಂಬುವುದು ನಮ್ಮ ಹಾರೈಕೆ.