ವರದಕ್ಷಿಣೆಯಾಗಿ ಏರ್‌ ಕಂಡೀಷನರ್ ಕೊಡದ್ದಕ್ಕೆ ಸಿಟ್ಟು, ವಧುವನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ ವರ!

By Vinutha Perla  |  First Published May 15, 2023, 12:26 PM IST

ಭಾರತದಲ್ಲಿ ವರದಕ್ಷಿಣೆ ನಿಷೇಧಿಸಲಾಗಿದ್ದರೂ ಇವತ್ತಿಗೂ ಹಲವು ಕಡೆ ವರದಕ್ಷಿಣೆ ಕೊಡುವುದು ಮತ್ತು ಪಡೆದುಕೊಳ್ಳುವ ಅನಿಷ್ಟ ಪದ್ಧತಿ ಚಾಲ್ತಿಯಲ್ಲಿದೆ. ಧನದಾಹಿಗಳು ಬಂಗಲೆ, ಕಾರು ಅಂತ ವರದಕ್ಷಿಣೆ ಹೆಸರಲ್ಲಿ ನಾನಾ ಬೇಡಿಕೆ ಇಡುತ್ತಾರೆ. ಇಲ್ಲೊಬ್ಬ ವರ ವಧುವಿನ ಕಡೆಯವರು ಕೇಳಿದ ವರದಕ್ಷಿಣೆ ಕೊಟ್ಟಿಲ್ಲಾಂತ ಆಕೆಯನ್ನು ಮಂಟಪದಿಂದಲೇ ತಳ್ಳಿದ್ದಾನೆ.


ಮದುವೆ ಅನ್ನೋದು ಒಂದು ಪವಿತ್ರವಾದ ಸಂಬಂಧ. ಹೀಗಾಗಿ ಗುರು-ಹಿರಿಯರು ಎಲ್ಲರೂ ನೋಡಿ ಪರಸ್ಪರ ಒಪ್ಪಿಗೆ ಸೂಚಿಸಿ ಒಳ್ಳೆಯ ಮುಹೂರ್ತ ನೋಡಿ ಮದುವೆ ಮಾಡಿಸುತ್ತಾರೆ. ಜೋಡಿ ನೂರ್ಕಾಲ ಸುಖವಾಗಿರಲಿ ಎಂದು ಹಾರೈಸುತ್ತಾರೆ. ಆದ್ರೆ ಈ ಕಾಲದಲ್ಲಿ ಎಲ್ಲಾ ವಸ್ತುಗಳ ವ್ಯಾಲಿಡಿಟಿ ಕಮ್ಮಿಯಾಗಿರೋ ಹಾಗೆಯೇ ಮದುವೆಯ ವ್ಯಾಲಿಡಿಟಿಯೂ ಕಡಿಮೆಯಾಗಿದೆ. ಮದುವೆಯಾಗಿ ತಿಂಗಳಾಗೋ ಒಳಗೇ ಡೈವೋರ್ಸ್‌ಗೆ ಅಪ್ಲೈ ಮಾಡುವ ದಂಪತಿಯಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ನಂತರವೂ ಮದುವೆ ಕ್ಯಾನ್ಸಲ್ ಮಾಡಿಕೊಳ್ಳುವುದು ಅತಿ ಸಾಮಾನ್ಯವಾಗಿದೆ. ಅಷ್ಟೇ ಯಾಕೆ, ಮದುವೆ ಮಂಟಪದಲ್ಲಿ ತಾಳಿ ಕಟ್ಟಿದ ನಂತರವೂ ಮದುವೆ ಮುರಿದು ಬೀಳುತ್ತದೆ.

ಹಾಗೆಯೇ ಉತ್ತರಪ್ರದೇಶದಲ್ಲೊಂದು ಮದುವೆ (Marriage), ವರನ (Groom) ವಿಚಿತ್ರ ವರ್ತನೆಯಿಂದ ಮುರಿದುಬಿದ್ದಿದೆ. ಉತ್ತರ ಪ್ರದೇಶದ ಕನೂಜ್ ಜಿಲ್ಲೆಯಲ್ಲಿ ಜಯಮಾಲಾ ಸಮಾರಂಭದ ನಂತರ ಮದುವೆಯ ವೇದಿಕೆಯಲ್ಲಿ ವರ, ವಧು (Bride)ವಿಗೆ ಹೊಡೆದಿದ್ದಾನೆ. ಮಾತ್ರವಲ್ಲ ಆಕೆಯನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ್ದಾನೆ. ವರದಿಯ ಪ್ರಕಾರ, ವಧುವಿನ ಕುಟುಂಬವು (Family) ವರದಕ್ಷಿಣೆಯಲ್ಲಿ ಏರ್ ಕಂಡಿಷನರ್ ನೀಡಲು ಒಪ್ಪದ ಕಾರಣ ವರನು ತುಂಬಾ ಅಸಮಾಧಾನಗೊಂಡಿದ್ದನು. ಕೋಪದ ಭರದಲ್ಲಿ, ಅವರು ಜಯಮಾಲಾ ಸಮಾರಂಭದಲ್ಲಿ ವಧುವನ್ನು ಮದುವೆಯ ವೇದಿಕೆಯಿಂದ ತಳ್ಳಿದನು ಎಂದು ಹೇಳಲಾಗ್ತಿದೆ.

Tap to resize

Latest Videos

ವರದಕ್ಷಿಣೆಗಾಗಿ ಮದ್ವೆ ಮನೆಯಾಯ್ತು ರಣಾಂಗಣ, ಚೇರ್, ಪಾತ್ರೆಯಲ್ಲಿ ಹೊಡೆದಾಟ

ವರದಕ್ಷಿಣೆ ವಿಚಾರಕ್ಕೆ ವರ-ವಧುವಿನ ಕುಟುಂಬದ ಮಧ್ಯೆ ಜಗಳ
ಘಟನೆಯ ನಂತರ ವರ ಹಾಗೂ ವಧುವಿನ ಕಡೆಯವರು ಇಬ್ಬರ ಮಧ್ಯೆಯೂ ಜಗಳ ನಡೆಯಿತು. ಎರಡೂ ತಂಡದವರು ಪರಸ್ಪರ ಹೊಡೆದಾಡಿಕೊಂಡರು. ಎರಡೂ ಕಡೆಯ ಅನೇಕ ಮದುವೆ ಅತಿಥಿಗಳು (Guest) ಘಟನೆಯಲ್ಲಿ ಗಾಯಗೊಂಡರು. ವರನಿಂದ ತಪ್ಪಾಯಿತೆಂದು ವರನ ಕಡೆಯವರು ವಧುವಿನ ಮನೆಯವರನ್ನು ಸಮಾಧಾನಿಸಲು ಯತ್ನಿಸಿದರು. ಆದ್ರೆ ವಧುವಿನ ಮನೆಯವರು ಸಮಾಧಾನಗೊಳ್ಳದೆ ಮದುವೆ ಕ್ಯಾನ್ಸಲ್ ಮಾಡಿದರು.

ನಂತರ ಎರಡೂ ಕಡೆಯವರು ಪಂಚಾಯಿತಿಗೆ ತೆರಳಿ ಮದುವೆಯನ್ನು ಮಾಡದಿರಲು ತೀರ್ಮಾನಿಸಿದರು. ವರ ಮತ್ತು ಅವನ ಸಂಬಂಧಿಕರು ವಧು ಇಲ್ಲದೆ ವಾಪಾಸ್‌ ಮರಳಿದರು. ವರದಿಯ ಪ್ರಕಾರ, ಯುವತಿಯ ಮದುವೆಯನ್ನು ಮೇ 11ರಂದು ಇಟಾವಾದಿಂದ ಯುವಕನೊಂದಿಗೆ ನಿಗದಿಪಡಿಸಲಾಗಿದೆ.ವಧುವಿನ ಮನೆಯವರು ವರದಕ್ಷಿಣೆಯಲ್ಲಿ ಏರ್ ಕಂಡಿಷನರ್ ನೀಡಲು ನಿರಾಕರಿಸಿದ ವಿಷಯ ವರನಿಗೆ ತಿಳಿದಿರಲ್ಲಿಲ್ಲ. ಅಲ್ಲಿಯ ವರೆಗೆ ಮದುವೆ ಸುಸೂತ್ರವಾಗಿ ನಡೆಯುತ್ತಿತ್ತು. ವರದಕ್ಷಿಣೆಯಾಗಿ ಏರ್‌ ಕಂಡೀನಷರ್‌ ನೀಡುತ್ತಿಲ್ಲ ಎಂಬುದನ್ನು ತಿಳಿದು ವರ ಕೋಪಗೊಂಡನು. ಕೋಪದ ಭರದಲ್ಲಿ ವಧುವನ್ನು ವೇದಿಕೆಯಿಂದ ತಳ್ಳಿದನು. ವೇದಿಕೆಯಿಂದ ಬಿದ್ದ ವಧು ಪ್ರಜ್ಞೆ ತಪ್ಪಿದಳು ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಮತ್ತು ಎರಡೂ ಕುಟುಂಬಗಳು ಪರಸ್ಪರ ಒಪ್ಪಂದಕ್ಕೆ ಬಂದು ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ತಂಗಿ ಅದ್ಧೂರಿ ಮದುವೆ, ವೇದಿಕೆಯಲ್ಲೇ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ ಸಹದೋರರು!

ವರದಕ್ಷಿಣೆ ಕೇಳಿದ ವರನನ್ನು ಕೂಡಿ ಹಾಕಿದ ವಧು!
ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಈ ಘಟನೆ ನಡೆದಿತ್ತು. ಮದುವೆಯ ಸಮಯದಲ್ಲಿ ವರನ ಕುಟುಂಬವು ವಧುವಿನ ಕುಟುಂಬದಿಂದ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪಡೆಯುವುದು ಸಾಮಾನ್ಯವಾಗಿದೆ. ಹಾಗೆಯೇ ವರ ವಾಸಿಂ ಅಹ್ಮದ್​ ಎಂಬಾತ ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ನೀಡುವಂತೆ ವಧುವಿನ ಕುಟುಂಬವನ್ನು ಕೇಳಿದ್ದ. ಬಳಿಕ ತಮ್ಮ ಸಂಬಂಧಿಕರೊಂದಿಗೆ ಮದುವೆ ಮಂಟಪ್ಪಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ವಧುವಿನ ಕಡೆಯವರು ಆತನಿಗೆ ಟ್ರ್ಯಾಕರ್ ಕೊಡದೆ, ವಾಸಿಂ ಹಾಗೂ ಅವರ ಕುಟುಂಬವನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು.

click me!