
ಬೆಂಗಳೂರು: ಸರ್ಜ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ ಕೆಲಸ ಮಾಡಬೇಕೆಂಬ ಕನಸು ಎಲ್ಲರಲ್ಲಿಯೂ ಸಹಜ. ಆದರೆ, ಸಿಗೋದು ಅಷ್ಟು ಸುಲಭವಲ್ಲವೆಂಬುವುಗು ಎಲ್ಲರಿಗೂ ಗೊತ್ತು. ವಿಶ್ವದ ಪ್ರತಿಷ್ಠಿತ ಕಂಪನಿಯಾದ ಗೂಗಲ್‌ನಲ್ಲಿ ತರಬೇತು ಪಡೆಯಲು, ಕೆಲಸ ಮಾಡಲು ಅವಕಾಶವೊಂದಿದೆ.
ಕಂಪನಿಯು ಸಾಫ್ಟ್‌ವೇರ್ ಎಂಜಿನೀಯರಿಂಗ್ ಇಂಟರ್ನ್‌ಶಿಪ್ 2018 ಯೋಜನೆಗೆ ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
ಅರ್ಹತೆ ಏನು?
ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಪದವಿ ಪಡೆದವರು ಈ ಹುದ್ದೆಗೆ ಅರ್ಹರಾಗಿರುತ್ತಾರೆ. ಕಡೆಯ ವರ್ಷದಲ್ಲಿದ್ದು, 2019ರಲ್ಲಿ ಪದವಿ ಪಡೆಯುವವರೂ ಅರ್ಜಿ ಸಲ್ಲಿಸಬಹುದಾಗಿದೆ.
ಪದವಿಯಲ್ಲದೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇತರೆ ಮಾನದಂಡಗಳ ಅಗತ್ಯವೂ ಇದ್ದು, ಕೆಳಗಿನ ಕೋರ್ಸ್‌ಗಳನ್ನು ಪೂರೈಸಿರಬೇಕು.
- ಸಿಸ್ಟಂ ಸಾಫ್ಟ್‌ವೇರ್ ಅಥವಾ ಅಲ್ಗರಿದಮ್‌ನಲ್ಲಿ ಅನುಭವ ಇರಬೇಕು.
- ಸಿ++, ಜಾವಾ, ಪೈಥಾನ್‌ನಂಥ ಪ್ರೋಗ್ರಾಮಿಂಗ್‌ಗಳನ್ನು ಬಳಸುವ ಜ್ಞಾನ ಇರಬೇಕು.
- ಯೂನಿಕ್ಸ್/ಲಿನಕ್ಸ್ ಅಥವಾ ವಿಂಡೋಸ್ ಎನ್ವಿರಾನ್ಮೆಂಟ್ಸ್ ಮತ್ತು ಎಪಿಐಗಳ ಬಗ್ಗೆ ಅರಿವಿರಬೇಕು.
- ಟಿಸಿಪಿ ಅಥವಾ ಐಪಿ ಮತ್ತು ನೆಟ್‌ವರ್ಕ್ ಪ್ರೋಗ್ರಾಮಿಂಗ್ ಗೊತ್ತಿರಬೇಕು.
ಇಂಟರ್ನ್‌ಶಿಪ್ ವೇದಿಕೆಯಾದ ಇಂಟರ್ನ್‌ಶಾಲಾ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಹಾಗೂ ತರಬೇತಿ ನೀಡಲು ಕಳೆದ ವರ್ಷ ಎಐಸಿಟಿಇ ಮತ್ತು ಎಪಿಎಸ್‌ಎಸ್‌ಡಿಸಿಯೊಂದಿಗೆ ಇಂಟರ್ನ್‌ಶಾಲಾ ಒಪ್ಪಂದ ಮಾಡಿಕೊಂಡಿದೆ.
ಇಂಟರ್ನ್‌ಶಿಪ್ ಹೇಗಿರುತ್ತೆ?
- ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿ ತಕ್ಕ ಶಿಷ್ಯ ವೇತನ ನೀಡುತ್ತದೆ.
- 8-12 ವಾರಗಳ ಕಾಲ ಇಂಟರ್ನ್‌ಶಿಪ್ ನಡೆಯುತ್ತದೆ.
- ಏಪ್ರಿಲ್‌ನಿಂದ ಜುಲೈ 2018ರವರೆಗೆ ಇಂಟರ್ನ್‌ಶಿಪ್ ಅವಧಿ.
ಗೂಗಲ್ ಕ್ಲಿಷ್ಟವಾದ ಪ್ರಶ್ನೆಗಳ ಮೂಲಕ ಅಭ್ಯರ್ಥಿಗಳನ್ನು ಆರಿಸುತ್ತದೆ. ಪುಸ್ತಕದ ಹುಳು ಆಗಿರದೇ, ಸಮಯಪ್ರಜ್ಞೆಯಿಂದ ಉತ್ತರಿಸುವಂಥ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.