ಲೈಂಗಿಕ ಹಗರಣದ ಆರೋಪಿಯನ್ನು ಭೇಟಿ ಮಾಡಿದರಾ ಸ್ಮೃತಿ ಇರಾನಿ!

Published : Dec 26, 2017, 06:43 PM ISTUpdated : Apr 11, 2018, 01:06 PM IST
ಲೈಂಗಿಕ ಹಗರಣದ ಆರೋಪಿಯನ್ನು ಭೇಟಿ ಮಾಡಿದರಾ ಸ್ಮೃತಿ ಇರಾನಿ!

ಸಾರಾಂಶ

ಹಾಗಾದರೆ ನಿಜಕ್ಕೂ ಸ್ಮೃತಿ ಇರಾನಿ ಲೈಂಗಿಕ ಹಗರಣದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಭೇಟಿ ಮಾಡಿದ್ದರೇ ಎಂದು  ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಬಯಲಾದ ಸತ್ಯವೇ ಬೇರೆ.

ಮಾನವ ಸಂಪನ್ಮೂಲ ಸಚಿವೆ, ಸ್ಮೃತಿ ಇರಾನಿ ವಿರೇಂದ್ರ ದೇವ್ ದೀಕ್ಷಿತ್ ಎಂಬುವವರನ್ನು ಭೇಟಿ ಮಾಡಿದ್ದಾರೆ. ವೀರೇಂದ್ರ ದೇವ್ ದೀಕ್ಷಿತ್ ಇತ್ತೀಚೆಗೆ ಆಶ್ರಮದಲ್ಲಿ ಲೈಂಗಿಕ ಹಗರಣ ನಡೆಸಿದ ಆಪಾದನೆಯ ಮೇಲೆ ಸೆರೆಯಾಗಿದ್ದಾರೆ. ಈ ಮೊದಲು ಇವರು ದೆಹಲಿಯ ರೋಹಿಣಿ ಆಶ್ರಮದ ಮುಖ್ಯಸ್ಥರಾಗಿದ್ದು, ಪ್ರಾಣಿಗಳ ರೀತಿಯಲ್ಲಿ ಅಮಾಯಕ ಹುಡುಗಿರನ್ನು ಕೂಡಿ ಹಾಕಿದ್ದ ಆರೋಪ ಎದುರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ. ಇದೀಗ ವೈರಲ್ ಆಗಿದೆ.

ಹಾಗಾದರೆ ನಿಜಕ್ಕೂ ಸ್ಮೃತಿ ಇರಾನಿ ಲೈಂಗಿಕ ಹಗರಣದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಭೇಟಿ ಮಾಡಿದ್ದರೇ ಎಂದು  ಇದರ ಸತ್ಯಾಸತ್ಯತೆಯನ್ನು ತಿಳಿಯ ಹೊರಟಾಗ ಬಯಲಾದ ಸತ್ಯವೇ ಬೇರೆ. ಏಕೆಂದರೆ ಟ್ವೀಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ಫೋಟೋ ಈಗಿನದ್ದೇ ಅಲ್ಲ. ಅದು ಮೂರು ವರ್ಷ ಹಿಂದಿನ ಫೋಟೋ. ನವೆಂಬರ್ 2014ರಂದು ಸ್ಮತಿ ಇರಾನಿಯವರು ಜ್ಯೋತಿಷ್ಯ ಶಾಸ್ತ್ರಜ್ಞರೊಬ್ಬರನ್ನು ಭೇಟಿ ಮಾಡಿದ್ದ ಫೋಟೋವಿದು. ಸಚಿವೆ ಸ್ಮತಿ ಇರಾನಿ ರಾಜಸ್ತಾನ ಮೂಲದ ಬಿಲ್ವಾರ್‌ನ ನಾತುಲಾಲ್ ವ್ಯಾಸ್ ಎಂಬ ಜ್ಯೋತಿಷ್ಯ ಶಾಸ್ತ್ರಜ್ಞರೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ಪೋಟೋವನ್ನು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ ಈ ರೀತಿ ಬಿಂಬಿಸಲಾಗಿದೆ.

ಅವರು ಭೇಟಿಯಾದ ಸಂದರ್ಭದಲ್ಲಿ ಆ ಜ್ಯೋತಿಷ್ಯಿ ‘ಒಂದು ದಿನ ನೀವು ಭಾರತದ ಪ್ರಧಾನಿಯಾಗಲಿದ್ದೀರಿ’ ಎಂದು ಭವಿಷ್ಯ ನುಡಿದಿದ್ದರು. ಹಾಗೂ ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಭವಿಷ್ಯವಾಣಿ ನುಡಿದಿದ್ದರು. ಹಾಗಾಗಿ ಸ್ಮತಿ ಇರಾನಿಯವರು ಭೇಟಿ ಮಾಡಿರುವುದು ವೀರೇಂದ್ರ ದೇವ್ ದೀಕ್ಷಿತ್ ಅವರನ್ನಲ್ಲ, ಬದಲಿಗೆ ನಾತು ಲಾಲ್ ವ್ಯಾಸ್ ಎಂಬ ಜ್ಯೋತಿಷಿಯನ್ನು ಎಂಬಂತಾಯಿತು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಕ್ಕಳು ಮಲಗಿದ ನಂತ್ರ ಅದೇ ರೂಂನಲ್ಲಿ ಪೋಷಕರು ರೋಮ್ಯಾನ್ಸ್ ಮಾಡ್ತೀರಾ?, ಹಾಗಿದ್ರೆ ಈ ವಿಷ್ಯ ಗೊತ್ತಿರ್ಲಿ
ಇದು ಕೇವಲ ಸಂಪ್ರದಾಯವಲ್ಲ, ಜಡೆ ಹೆಣೆಯುವುದೆಂದರೆ ನಿಮ್ಮೊಡನೆ 'ಗುರಾಣಿ' ಇದ್ದಂತೆ