ಎರಡೇ ಎರಡು ಪದಾರ್ಥಗಳಿಂದ ಬಿಳಿಗೂದಲಿಗೆ ಶಾಶ್ವತ ಮುಕ್ತಿ: ಗುರೂಜಿ ಹೇಳಿಕೊಟ್ಟ ಟಿಪ್ಸ್​ ಕೇಳಿ

Published : Sep 17, 2026, 05:53 PM IST
White Hair Remedy

ಸಾರಾಂಶ

ರಾಸಾಯನಿಕ ಹೇರ್ ಡೈಗಳಿಂದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದರೆ, ಸಂತ ಇಂದ್ರದೇವಜಿ ಮಹಾರಾಜ್ ಅವರು ಸೂಚಿಸಿರುವಂತೆ ಅಡುಗೆಮನೆಯಲ್ಲಿರುವ ಚಹಾ ಮತ್ತು ಕಾಫಿ ಪುಡಿಯನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಈ ವಿಧಾನದಿಂದ ಕನಿಷ್ಠ ಆರು ತಿಂಗಳವರೆಗೆ ಕೂದಲು ಬೆಳ್ಳಗಾಗುವುದಿಲ್ಲ.

ಬಿಳಿಯ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಲಕ್ಷಾಂತರ ಮಂದಿ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲು ಆಗುವುದು ಮಾಮೂಲು. ಅದಕ್ಕಾಗಿಯೇ ಹೇರ್‌ ಡೈ ಎನ್ನುವುದು ಬಲು ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಹೇರ್​ ಕಲರ್​ನಿಂದ ಕ್ಯಾನ್ಸರ್​ ಬರುತ್ತಿವೆ. ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ.

ಫೇಕ್​ ವಿಡಿಯೋಸ್​

ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

ಅದೇನೇ ಇದ್ದರೂ, ಬಿಳಿಗೂದಲು ಕಾಣಿಸುವುದು ಬಹುತೇಕ ಯಾರಿಗೂ ಇಷ್ಟವಾಗುವುದಿಲ್ಲ. ಇದು ಸಾಮಾನ್ಯ ಜನರ ಮಾತಾದರೆ, ಇನ್ನು ಸೆಲೆಬ್ರಿಟಿಗಳಿಗೆ ಅಂತೂ ಕಪ್ಪು ಕೂದಲು ಮಸ್ಟ್‌. ಒಂದೇ ಒಂದು ಬಿಳಿ ಕೂದಲು ಕಂಡರೂ, ಅವರ ಘನತೆಗೇ ಕುಂದು ಬರುತ್ತದೆ, ಬಣ್ಣದ ಲೋಕದಲ್ಲಿ ಬೇಡಿಕೆ ಕುಸಿಯುತ್ತದೆ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಮುಖಕ್ಕೆ ಬಣ್ಣ ಬಳಿದುಕೊಳ್ಳಲು, ಮುಖವನ್ನು ಅಂದಗೊಳಿಸಲು ಹೇಗೆ ಕೆಜಿಗಟ್ಟಲೆ ಮೇಕಪ್‌ ಮೊರೆ ಹೋಗುತ್ತಾರೆಯೋ, ಅದೇ ರೀತಿ ಕೂದಲನ್ನು ಸುಂದರಗೊಳಿಸಲೂ ಅಷ್ಟೇ ಸರ್ಕಸ್‌ ಮಾಡುತ್ತಾರೆ.

ನೀವು ಮಾಡಬೇಕಿರುವುದು ಇಷ್ಟು...

ಇದೀಗ ಅಡುಗೆ ಮನೆಯಲ್ಲಿಯೇ ಸಿಗುವ ಎರಡೇ ಎರಡು ಪದಾರ್ಥಗಳನ್ನು ಬಳಸಿ, ಕನಿಷ್ಠ ಆರು ತಿಂಗಳು ಕೂದಲು ಬೆಳ್ಳಗಾಗದೇ ಇರುವಂಥ ಟಿಪ್ಸ್​ ಒಂದನ್ನು ಸಂತ ಇಂದ್ರದೇವಜಿ ಮಹಾರಾಜ್​ ಅವರು ತಮ್ಮ santindradevjimaharaj ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ಅವರ ಪ್ರಕಾರ, ಕೆಫೆನ್​ ಅಂಶ ಹೆಚ್ಚಿಗೆ ಇದ್ದು ಕೂದಲನ್ನು ಬುಡಸಹಿತ ಸ್ಟ್ರಾಂಗ್​ ಮಾಡುವ ಚಹಾದ ಪುಡಿ ಹಾಗೂ ಕಾಫಿ ಪೌಡರ್​. ಎರಡೇ ಇದಕ್ಕೆ ಸಾಕು. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟು. ಎರಡು ಚಮಚ ಟೀ ಪೌಡರ್​ ತೆಗೆದುಕೊಂಡು ಅದನ್ನು ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದ ಉರಿಯಲ್ಲಿ ತುಂಬಾ ಹೊತ್ತು ಬೇಯಿಸಬೇಕು. ಅದು ಎಷ್ಟು ಎಂದರೆ, ನೀರು ಅರ್ಧಕ್ಕಿಂತ ಕಡಿಮೆ ಮಟ್ಟಕ್ಕೆ ಬರಬೇಕು. ಇದಾದ ಬಳಿಕ ಅದಕ್ಕೆ ಅರ್ಧ ಚಮಚ ಕಾಫಿ ಪೌಡರ್​ ಸೇರಿಸಬೇಕು. ಬಳಿಕ ಒಂದು ಹತ್ತಿಯ ಉಂಡೆಯ ಸಹಾಯದಿಂದ ಎಲ್ಲೆಲ್ಲಿ ಬಿಳಿಗೂದಲು ಇವೆಯೋ ಅಲ್ಲಿ ಹಚ್ಚಬೇಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲವ್ ಮಾಡಲಿಲ್ಲ, ಬ್ರೇಕಪ್ ಕೂಡ ಆಗಲಿಲ್ಲ.. ಆದರೂ ಮರೆಯೋಕೆ ಆಗ್ತಿಲ್ವಾ? ಯಾಕೆ ಹೀಗೆ?
ಬೆಂಡೇಕಾಯಿ ಬೀಜದಿಂದ ಫಳಫಳ ಹೊಳೆದ ತ್ಚಚೆ: ಕೋರಿಯನ್​ ಬ್ಯೂಟಿಷಿಯನ್​ ಹೇಳಿಕೊಟ್ಟ ಟಿಪ್ಸ್​