ಐ ಲವ್ ಯೂ ಹೇಳುವ ಮೊದಲೇ ಮದುವೆ ಆಗಿಬಿಡಿ, ಸಖತ್ ಟಿಪ್ಸ್ ಕೊಟ್ಟು ಲವ್ ಗುರುವಾದ ಸಂಸದ ಒವೈಸಿ

Published : Oct 14, 2026, 02:56 PM IST
Asaduddin Owaisi Relationship Advice

ಸಾರಾಂಶ

ಐ ಲವ್ ಯೂ ಎಂದು ಹೇಳುವ ಮೊದಲೇ ಮದುವೆ ಆಗಿಬಿಡಿ. ಇದು ಅಸಾದುದ್ದೀನ್ ಒವೈಸಿ ಯುವ ಸಮೂಹಕ್ಕೆ ನೀಡಿದ ಸಲಹೆ. ಈ ಸಲಹೆ ವೇಳೆ ಮೋದಿ ಹೆಸರು ಹೇಳದೆ ಕಾಲೆಳೆದಿದ್ದಾರೆ. ಅಷ್ಟಕ್ಕೂ ಒವೈಸಿ ಕೊಟ್ಟ ರಿಲೇಶನ್‌ಶಿಪ್ ಸಲಹೆ ಏನು?

ಪ್ರೀತಿ ಪ್ರೇಮ ಕುರಿತು ಹಲವು ಗುರುಗಳಿದ್ದಾರೆ. ರಾಜಕೀಯ ನಾಯಕರು ರಿಲೇಶನ್‌ಶಿಪ್ ಕುರಿತು ಸಲಹೆ ನೀಡುವುದು ಕಡಿಮೆ. ಸಂಬಂಧದಲ್ಲಿ ಪೊಲೀಸ್, ಕೋರ್ಟ್ , ಕಚೇರಿ ಎಂಬ ಸಮಸ್ಯೆಗಳು ಬಂದಾಗ ನೆರವಿಗೆ ನಿಲುತ್ತಾರೆ. ಆದರೆ ಲವ್ ವಿಚಾರದಲ್ಲಿ ಸಲಹೆ ನೀಡುವುದು ವಿರಳ. ಆದರೆ ಎಐಎಂಐಎಂ ನಾಯಕ, ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಇದೀಗ ಯುವ ಸಮೂಹಕ್ಕೆ ಮಹತ್ವದ ರಿಲೇಶನ್‌ಶಿಪ್ ಸಲಹೆ ನೀಡಿದ್ದಾರೆ. ಪ್ರೀತಿ, ಪ್ರೇಮ ಹಾಗೂ ಮದುವೆ ಕುರಿತು ಓವೈಸಿ ಕೆಲ ಸೂಚನೆ ನೀಡಿದ್ದಾರೆ. ನೀವು ಐ ಲವ್ ಯು ಎಂದು ಹೇಳುವ ಮೊದಲೇ ಮದುವೆಯಾಗಿಬಿಡಿ ಎಂದು ಒವೈಸಿ ಸಲಹೆ ನೀಡಿದ್ದಾರೆ.

ಲವ್ ಗುರು ಒವೈಸಿ

ಓವೈಸಿ ರಾಜಕೀಯ, ಅಭಿವೃದ್ಧಿ, ಯೋಜನೆ, ನಿಯಮ, ನೀತಿ, ಧರ್ಮ, ತಮ್ಮ ಸಮುದಾಯಗಳ ಕುರಿತು ಹಲವು ವೇದಿಕೆಗಳಲ್ಲಿ ಭಾಷಣ ಮಾಡಿದ್ದಾರೆ. ಆದರೆ ಒವೈಸಿ ಮೊದಲ ಬಾರಿಗೆ ಲವ್ ಗುರುವಾಗಿ ಕಾಣಿಸಿಕೊಂಡಿದ್ದಾರೆ. ನೀವು ಪತ್ನಿಗೆ ಐ ಲವ್ ಯು ಹೇಳಿ ಎಂದು ಒವೈಸಿ ಹೇಳಿದ್ದಾರೆ. ಈ ಸಭೆಯಲ್ಲಿ ಎಷ್ಟು ಜನ ಮದುವೆಯಾಗಿಲ್ಲ ಎಂದು ಸಮೂಹಕ್ಕೆ ಪ್ರಶ್ನಿಸಿದ್ದಾರೆ. ಬಹುತೇಕರು ಕೈ ಎತ್ತಿದ್ದಾರೆ. ಇದನ್ನು ನೋಡಿ ಅರೆ, ತುಂಬಾ ಜನ ಮದುವೆಯಾಗದವರಿದ್ದಾರೆ, ಮದುವೆಯಾಗಲು ಬಯಸುತ್ತಿದ್ದೀರಾ ಎಂದು ಒವೈಸಿ ಮಾತು ಆರಂಭಿಸಿದ್ದಾರೆ.

ನೀವು ಯಾರನ್ನು ಪ್ರೀತಿಸುತ್ತಿದ್ದೀರೋ, ಅಥವಾ ಯಾರ ಮೇಲೆ ಪ್ರೀತಿ ಹುಟ್ಟಿದೆಯೋ ಅವರನ್ನು ಮದುವೆಯಾಗಿ ಬಳಿಕ ಐ ಲವ್ ಯೂ ಹೇಳಿ ಎಂದು ಒವೈಸಿ ಸಲಹೆ ನೀಡಿದ್ದಾರೆ. ಮದುವೆಯಾದರೆ ನಿಮ್ಮ ಅರ್ಧ ನಂಬಿಕೆ ಮುಗಿಯುತ್ತದೆ. ನಾವು ಯುವ ಸಮೂಹಕ್ಕೆ ಹೇಳುತ್ತಿದ್ದೇನೆ, ಮದುವೆಯಾಗಿ, ಅಮೇಲೆ ಪತ್ನಿಯನ್ನು ಪ್ರೀತಿಸಿ ಎಂದು ಒವೈಸಿ ಸಲಹೆ ನೀಡಿದ್ದಾರೆ.

ನನ್ನ ಗಡ್ಡ ಬಳಿಯಾಗಿದೆ, ಇನ್ನೂ ನಾನು ಸೆಟಲ್ ಆಗಿಲ್ಲ

ನಮ್ಮ ದೆಹಲಿ ಸಂಸದ ಇಮ್ತಿಯಾಜ್ ಅಲಿ ಮನೆಗೆ ಹೋಗಿದ್ದೆ. ಅವರ ಕಿರಿಯ ಪುತ್ರನ ಬಳಿ ಮದುವೆಯಾಗು ಎಂದು ಸೂಚಿಸಿದ್ದೆ. ಇಲ್ಲ ಅಸಾದ್ ಅಂಕಲ್, ನಾನು ಲೈಫ್‌ನಲ್ಲಿ ಸೆಟಲ್ ಆಗಬೇಕು, ಬಳಿಕ ಮದುವೆ ಎಂದು ಒವೈಸಿ ಹೇಳಿದ್ದಾರೆ. ನನ್ನ ಗಡ್ಡ ಬಳಿಯಾಗಿದೆ. ಆದರೆ ಇನ್ನೂ ನಾನು ಸೆಟಲ್ ಆಗಿಲ್ಲ ಎಂದು ಆತನಿಗೆ ಸಲಹೆ ನೀಡಿದ್ದೆ ಎಂದು ಒವೈಸಿ ಹೇಳಿದ್ದಾರೆ. ನೀವು ಸೆಟ್ ಆಗಲು ಕಾಯಬೇಡಿ, ನೀವು ಮದುವೆಯಾದರೆ ಸೆಟ್ ಆಗುತ್ತೀರಿ ಎಂದು ಒವೈಸಿ ಸಲಹೆ ನೀಡಿದ್ದಾರೆ.

ಪೋಷಕರ ಒಪ್ಪದಿದ್ದರೆ ಏನು ಮಾಡಬೇಕು

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಮನೆಗೆ ಹೋಗಿ ಪೋಷಕರಿಗೆ ಹೇಳಿ. ಪೋಷಕರು ನಿಮ್ಮ ಪ್ರೀತಿಗೆ ಒಪ್ಪದಿದ್ದರೆ ಈ ವಿಡಿಯೋ ತೋರಿಸಿ ಎಂದು ಒವೈಸಿ ಸಲಹೆ ನೀಡಿದ್ದಾರೆ. ಪೋಷಕರ ಒಪ್ಪಿಸಿ ಮದುವೆಯಾಗಿ. ನೀವು ಯಾರನ್ನು ಪ್ರೀತಿಸುತ್ತೀರೋ, ಅವರನ್ನು ಮೊದಲು ಮದುವೆಯಾಗಿ ಬಳಿಕ ಐ ಲವ್ ಯೂ ಹೇಳಿ ಎಂದು ಒವೈಸಿ ಸಲಹೆ ನೀಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಕ್ಕರ್ ಗ್ಯಾಸ್ಕೆಟ್ ಒಂದಲ್ಲ, ಎರಡಲ್ಲ ವರ್ಷಗಟ್ಟಲೇ ಬಾಳಿಕೆ ಬರುತ್ತೆ.. ಫ್ರಿಡ್ಜ್ ಬೇಡ, ಈ ಟ್ರಿಕ್ ಟ್ರೈ ಮಾಡಿ
ಕುಕ್ಕರ್ ವಿಷಲ್ ಬರೋ ಮುನ್ನವೇ ಹಬೆ ಹೊರಗೆ ಬರುತ್ತಿದ್ರೆ ಹುಷಾರ್! ಈ ತಪ್ಪು ಮಾಡಬೇಡಿ