
'ಒಂದು ಐಡಿಯಾ ನಮ್ಮ ಜೀವನವನ್ನೇ ಬದಲಿಸಬಹುದು..' 22 ವರ್ಷದ ಗೆಬಿರಿಯಲ್ ರೆಲಿ ಜೊತೆ ಸಹ ಇದೆ ರೀತಿ ಆಯಿತು. ಅದೇನೆಂದರೆ ಈಕೆ ತನ್ನ ಆ್ಯಪಲ್ ಏರ್ ಪೋಡ್ಸ್ ಕಾಣೆಯಾಗುತ್ತದೆ ಎಂಬ ಭಯದಿಂದ ಅದನ್ನೇ ಕಿವಿಯೋಲೆ ಮಾಡಿಕೊಂಡಳು. ಅದೇ ಐಡಿಯಾದಿಂದ ಈಕೆ ಈಗ ಸಿಕ್ಕಾಪಟ್ಟೆ ಫೇಮಸ್.
ಈಕೆ ಏರ್ ಪೋಡ್ಸ್ ಅನ್ನು ಕಿವಿಯೋಲೆ ಮಾಡಿಕೊಂಡು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ವೈರಲ್ ಆಗಿದೆ. ಅಲ್ಲದೇ 36 ಲಕ್ಷ ಜನರು ಆ ವಿಡಿಯೋ ನೋಡಿದ್ದಾರೆ. ಇದೀಗ ರೆಲಿ ಅದನ್ನು 1400 ರೂ.ಗೆ ಮಾರಲು ಯೋಚಿಸುತ್ತಿದ್ದಾಳೆ.
ವರ್ಜಿನಿಯಾದಲ್ಲಿರುವ ರೆಲಿ ಬಳಿ ಮೊದಲು ಎರಡು ಜೋಡಿ ಬ್ಲೂ ಟೂತ್ ಇಯರ್ ಫೋನ್ ಇತ್ತಂತೆ. ಅವನ್ನು ಕಳ್ಕೊಂಡ ನಂತರ ಏರ್ ಪೋಡ್ಸ್ ಖರೀದಿಸಿದ್ದಾರೆ. ಇನ್ನೊಮ್ಮೆ ಕಳೆದುಕೊಳ್ಳಬಾರದೆಂದು ಅವನ್ನು ಕಿವಿಯೋಲೆ ಮಾಡಿಕೊಂಡಿದ್ದಾರೆ.
ಈ ಕಿವಿಯೋಲೆ ಮಾಡಿಕೊಳ್ಳಲು ರೆಲಿಗೆ ಗಂಟೆ ಬೇಕಾಯಿತಂತೆ. ಅವರು ಮಾಡಿದ ವಿಡಿಯೋ ವೈರಲ್ ಆದ ಮೇಲೆ ಈಕೆಗೆ ಕರೆ ಮಾಡಿ ತಮಗೂ ಅಂಥದ್ದೇ ಕಿವಿಯೋಲೆ ಮಾಡಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರಂತೆ.
ಇದೀಗ ಟ್ವಿಟರ್‌ನಲ್ಲಿ ಹಲವು ಆಫರ್ ಬಂದ ಮೇಲೆ ಗೆಬಿರಿಯಲ್ ಅದನ್ನು ಮಾರಲು ಯೋಚಿಸಿದ್ದಾರೆ. ಅದಕ್ಕಾಗಿ deadanimemom.myshopify.com ಎಂಬ ವೆಬ್ ಸೈಟ್ ಕೂಡ ಲಾಂಚ್ ಮಾಡಿದ್ದಾರೆ. ಇಲ್ಲಿ ನೀವು ಇಯರಿಂಗ್ಸ್ ಬುಕ್ ಖರೀದಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.