
ಮಾಡೆಲ್ ಎಂದಾಕ್ಷಣ ನೆನಪಾಗೋದು ಯಂಗ್ ಆಗಿರುವ ಸಣ್ಣ ನಡುವಿನ, ಕ್ಯಾಟ್ ವಾಕ್ ಮಾಡಿ, ವಯ್ಯಾರ ತೋರುವ ಮಾಡೆಲ್. ಆದರೆ ಈ ಎಲ್ಲಾ ಮಾಡೆಲ್‌ಗಳನ್ನೂ ಮೀರಿಸುತ್ತಾರೆ ಈ 97 ವರ್ಷದ ಈ ಸೂಪರ್ ಮಾಡೆಲ್.
ಈ ವಯಸ್ಸಿನಲ್ಲಿ ಪ್ರತಿಷ್ಠಿತ ಮ್ಯಾಗಜೀನ್ ಕವರ್ ಪೇಜಿನಲ್ಲಿ ಕಾಣಿಸಿಕೊಳ್ಳುವುದನ್ನು ಊಹಿಸಿಕೊಳ್ಳುವುದು ಸಾಧ್ಯವೇ? ಆದರೆ, ಐರಿಸ್ ಇದನ್ನು ಸಾಧ್ಯವಾಗಿಸಿಕೊಂಡಿದ್ದಾರೆ. ವಯಸ್ಸು ಎಷ್ಟಾದರೂ ನಿವೃತ್ತಿಯೇ ಆಗಬಾರದೆಂಬುವುದು ಐರಿಸ್ ಪಾಲಿಸಿ.
ಶಾಕ್ ಆಗಬೇಡಿ! ತಮ್ಮ 97ನೇ ವಯಸ್ಸಿನಲ್ಲಿಯೂ ಮಾರ್ಜಾಲ ನಡಿಗೆ ಮೂಲಕ ಎಲ್ಲರನ್ನೂ ತಮ್ಮತ್ತ ಆಕರ್ಷಿಸಿಕೊಳ್ಳುತ್ತಿರುವ ಅಮೆರಿಕದ ಈ ಅಜ್ಜಿಯ ಹೆಸರು ಐರಿಸ್ ಎಫೆಲ್. ವಿಶ್ವದ ಅತ್ಯಂತ ಜನಪ್ರಿಯ ಮಾಡೆಲ್ ಮ್ಯಾನೇಜ್‌ಮೆಂಟ್ ಕಂಪನಿ ಐಎಂಜಿಯೊಂದಿಗೆ ಐರಿಸ್ ಒಪ್ಪಂದ ಮಾಡಿಕೊಂಡಿದ್ದು, ಫುಲ್ ಖುಷಿಯಾಗಿದ್ದಾರೆ. ಜೀವನದಲ್ಲಿ ಯಾವತ್ತೂ ಈ ಮಟ್ಟೆಕ್ಕೆ ಬೆಳೆಯುತ್ತೇನೆಂದು ಕೊಂಡಿರಲಿಲ್ಲ ಎನ್ನುತ್ತಾರೆ ಈ ಅಜ್ಜಿ.
ಆಗಸ್ಟ್ 29, 1921ರಲ್ಲಿ ಜನಿಸಿದ ಐರಿಸ್, ಅಮೆರಿಕದ ಖ್ಯಾತ ಉದ್ಯಮಿ, ಇಂಟೀರಿಯರ್ ಡಿಸೈನರ್ ಮತ್ತು ಫ್ಯಾಷನ್ ಐಕಾನ್ ಕೂಡ ಹೌದು. ಸದ್ಯಕ್ಕೆ ಐಎಂಜಿ ಮಾಡೆಲ್ ಆಗಿರುವ ಇವರು ಇನ್ನು ಮುಂದಿನ ದಿನಗಳಲ್ಲಿ ಗೀಗಿ ಹದೀದ್, ಗಿಸೆಲ್ ಬಡ್ ಚೆನ್, ಲಿಲಿ ಎಲ್ಡ್ರಿಜ್ ಮತ್ತು ಹಲೀಮಾ ಅದನ ಮೊದಲಾದ ಬ್ರಾಂಡ್‌ಗಳಿಗೂ ಕೆಲಸ ಮಾಡಲಿದ್ದಾರೆ.
2014ರಲ್ಲಿ ನಿರ್ದೇಶಕ ಅಲ್ಬರ್ಟ್ ಮೇಯಲ್ಸ್ ಐರಿಸ್ ಜೀವನದ ಮೇಲೆ ಐರಿಸ್ ಹೆಸರಿನ ಒಂದು ಡಾಕ್ಯುಮೆಂಟರಿ ಮಾಡಿದ್ದರು. ಇನ್ನು 2018ರಲ್ಲಿ ಹಾರ್ಪರ್ ಕಾಲಿನ್ಸ್ 'ಐರಿಸ್ ಎಫೆಲ್ : ಆಕ್ಸಿಡೆಂಟಲ್ ಐಕಾನ್ ' ಹೆಸರಿನ ಬಯೋಗ್ರಫಿಯೂ ಬರೆದಿದ್ದಾರೆ.
ಸೀರೆಗೂ ಬಂತು ಬ್ಲೌಸ್ ನಲ್ಲೇ ಬೆಲ್ಟ್ : ಏನಿದು ಹೊಸ ಸ್ಟೈಲ್.?
ಈ ವಯಸ್ಸಿನಲ್ಲಿ ಮಾಡೆಲ್ ಆಗಿರುವ ಬಗ್ಗೆ ಹೇಳುವ ಇವರು ಮನುಷ್ಯರು ಯಾವತ್ತೂ ನಿವೃತ್ತಿಯಾಗಬಾರದು. ಇಂದಿಗೂ ನನಗೆ ಕೆಲಸ ಮಾಡುವುದೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಈ ವಯಸ್ಸಿನಲ್ಲಿ ಮಾಡೆಲ್ ಆಗಿ ಕಾರ್ಯ ನಿರ್ವಹಿಸುತ್ತೇನೆ ಎನ್ನುತ್ತಾರೆ ಈ ಹಿರಿಯ ಮಾಡೆಲ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.