
ಒಬ್ಬ ವ್ಯಕ್ತಿಯ ಆಂಗಿಕ ಭಾಷೆ, ನಡೆಯುವ ಶೈಲಿ...ಮುಂತಾದ ಲಕ್ಷಣಗಳನ್ನು ನೋಡಿಯೇ ವ್ಯಕ್ತಿತ್ವವನ್ನು ಕಂಡು ಹಿಡಿಯಬಹುದು. ಆದರೆ, ಹೆಣ್ಣು ಮಕ್ಕಳು ಹಚ್ಚುವ ಲಿಪ್‌ಸ್ಟಿಕ್‌ನಿಂದಲೂ ಗುಣ ಏನೆಂಬುದನ್ನು ಕಂಡು ಹಿಡಿಯಬಹುದೆಂಬುವುದು ಗೊತ್ತಾ. ಕಾಲಕ್ಕೆ ತಕ್ಕಂತೆ, ಆಗಾಗ ಲಿಪ್‌ಸ್ಟಿಕ್ ಬಣ್ಣ ಬದಲಾಯಿಸೋ ಹೆಣ್ಣು ಮಕ್ಕಳನ್ನು 'ಊಸರವಳ್ಳಿ ವ್ಯಕ್ತಿತ್ವ'ದವರು ಎನ್ನಬಹುದಾ? ಏನು? ಎತ್ತ?
ಕೆಂಪು
ಅನಿಮೇಟೆಡ್, ಫಿಯರ್ಲೇಸ್, ಶಕ್ತಿಯುತ ಹಾಗೂ ಪ್ಯಾಷನೇಟ್ ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಬಳಸುತ್ತಾರೆ. ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚುವವರು ಇನ್ನೊಬ್ಬರ ಅಟೆನ್ಷನ್ ಬಯಸುತ್ತಾರೆ.
ಪಿಂಕ್/ ಗುಲಾಬಿ
ಸಿಕ್ಕಾಪಟ್ಟೆ ಕ್ಯೂಟ್ ಹಾಗೂ ಹೃದಯ ಶಾಲಿಗಳು ಹೆಚ್ಚಾಗಿ ಪಿಂಕ್ ಬಳಸುತ್ತಾರೆ. ಇವರು ಜನರಿಗೆ ಬೇಗ ಹತ್ತಿರದವರಾಗುವ ಗುಣ ವಿಶೇಷ ಹೊಂದಿರುತ್ತಾರೆ.
ಕಂದು
ಕಂದು ಬಣ್ಣ ಬಳಸುವವರು ವಿಭಿನ್ನ ಸವಾಲು ಹಾಕಲು, ಸವಾಲು ಎದುರಿಸಲೂ ಸಿದ್ಧರಿರುತ್ತಾರೆ.
ನ್ಯೂಡ್/ ತುಟಿ ಬಣ್ಣದ ಬಣ್ಣ
ಲಿಪ್ ಬಣ್ಣ ಧರಿಸುವವರು ಹೆಚ್ಚು ಪಾರದರ್ಶಕ ನೇಚರ್‌ನವರಾಗಿರುತ್ತಾರೆ. ಸರಳ ಹಾಗೂ ಸ್ವಾಭಿಮಾನಿಗಳಾಗಿರುತ್ತಾರೆ. ಸದಾ ಶಾಂತಿ ಹಾಗೂ ನೆಮ್ಮದಿ ಬಯಸುತ್ತಾರೆ.
ಲಿಪ್’ಸ್ಟಿಕ್ ಹಚ್ಚುವ ಮುನ್ನ ಹೀಗೆ ಮಾಡಿದ್ರೆ ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತೆ!
ಕಪ್ಪು
ಕಪ್ಪು ಅಥವಾ ಬೇರೆ ದಟ್ಟ ಬಣ್ಣದ ಲಿಪ್‌ಸ್ಟಿಕ್ ಹಚ್ಚುವ ಮಹಿಳೆಯರನ್ನು ದೂರದಿಂದಲೇ ಮಾತನಾಡಿಸಿದರೆ ಒಳಿತು. ಅವರು ಬ್ರೇವ್, ಮೊಂಡು ವ್ಯಕ್ತಿತ್ವದವರಾದರೂ ಬೇಗ ಬೆರೆಯುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.