ಬೆಂಗ್ಳೂರು, ಮುಂಬೈ ಅಲ್ಲ, ಭಾರತದ ಈ ನಗರದಲ್ಲಿ ಕುಟುಂಬದ ಸರಾಸರಿ ವಾರ್ಷಿಕ ಖರ್ಚು ₹19 ಲಕ್ಷ

Published : Oct 13, 2026, 04:31 PM IST
Chandigarh weather today

ಸಾರಾಂಶ

ಬೆಂಗಳೂರು, ಮುಂಬೈ, ದೆಹಲಿಗೆ ಹೋಲಿಸಿದರೆ ಭಾರತದ ಈ ನಗರದಲ್ಲಿ ಕುಟುಂಬ ವಾರ್ಷಿಕವಾಗಿ ಅತೀ ಹೆಚ್ಚು ಹಣ ಖರ್ಚು ಮಾಡುತ್ತದೆ. ಇಲ್ಲಿ ಕುಟುಂಬದ ಸರಾಸರಿ ವಾರ್ಷಿಕ ಖರ್ಚು 19 ಲಕ್ಷ ರೂಪಾಯಿ.

ಭಾರತದ ಶ್ರೀಮಂತ ನಗರ, ಅತೀ ಹೆಚ್ಚು ಶ್ರೀಮಂತರ ಇರುವ ನಗರ ಸೇರಿದಂತೆ ಹಲವು ಅಂಕಿ ಅಂಶಗಳು ಕೆಲ ಅಚ್ಚರಿ ಮಾಹಿತಿ ನೀಡಿದೆ. ಇದೀಗ ಭಾರತದ ಯಾವ ನಗರದಲ್ಲಿ ಒಂದು ಕುಟುಂಬ ಅತೀ ಹೆಚ್ಚು ಖರ್ಚು ಮಾಡಲಿದೆ ಅನ್ನೋ ಕುರಿತು ಸಂಶೋಧನೆ ಮಾಡಲಾಗಿದೆ. ಆದಾಯಲ್ಲಿ ಬೆಂಗಳೂರು ದೇಶದ ನಂಬರ್ 1 ನಗರ. ಆದರೆ ಸರಾಸರಿ ಕುಟುಂಬ ಗರಿಷ್ಠ ಖರ್ಚು ಮಾಡುವ ನಗರಗಳ ಪೈಕಿ ಬೆಂಗಳೂರು ನಂಬರ್ 1 ಅಲ್ಲ. ದೆಹಲಿಯೂ ಅಲ್ಲ, ಮುಂಬೈ, ಚೆನ್ನೈ, ಕೋಲ್ಕತಾ ಅಲ್ಲ. ಅಧ್ಯಯನ ವರದಿ ಪ್ರಕಾರ ಈ ನಗರದಲ್ಲಿ ಕುಟುಂಬದ ಸರಾಸರಿ ವಾರ್ಷಿಕ ಖರ್ಚು ಬರೋಬ್ಬರಿ 19 ಲಕ್ಷ ರೂಪಾಯಿ.

ಹುಟ್ಟುವ ಮಗುವಿಗೆ ಇದೆ ಇಲ್ಲಿ ಕಾರು

ಪ್ರೈಸ್, ದಿ ಮಿನಿ ಅರ್ಬನ್ ಹಾಗೂ ಟಾಟಾ ಸನ್ಸ್ ನಡೆಸಿದ ಅಧ್ಯಯನದಲ್ಲಿ ರೋಚಕ ಮಾಹಿತಿ ಬಯಲಾಗಿದೆ. ಚಂಢೀಘಡದಲ್ಲಿ ಸರಾಸರಿ ಕುಟುಂಬ ವಾರ್ಷಿಕವಾಗಿ 19 ಲಕ್ಷ ರೂಪಾಯಿ ಖರ್ಚು ಮಾಡುತ್ತೆ ಎಂಬುದು ಬಯಲಾಗಿದೆ. ಚಂಡೀಘಡ ಕೇಂದ್ರಾಡಳಿತ ಪ್ರದೇಶ. ದೇಶದ ಅತೀ ಸಣ್ಣ ನಗರ ಇದು. ದೇಶದ 100 ನಗರಗಳಲ್ಲಿ ಚಂಢಿಘಡ ಅತೀ ಹೆಚ್ಚು ಖರ್ಚು ಮಾಡುವ ನಗರವಾಗಿ ಹೊರಹೊಮ್ಮಿದೆ.

ಚಂಡಿಘಡದಲ್ಲಿ ಕುಟುಂಬದ ಸರಾಸರಿ ವಾರ್ಷಿಕ ಖರ್ಚು 19 ಲಕ್ಷ ರೂಪಾಯಿ ದೇಶದಲ್ಲಿ ಗರಿಷ್ಠವಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಯಾವುದೇ ನಗರದಲ್ಲಿನ ಕುಟುಂಬದ ಸರಾಸರಿ ಖರ್ಚು ಇಷ್ಟಿಲ್ಲ. ಚಂಡಿಘಡ ಕೇಂದ್ರಾಡಳಿತ ಪ್ರದೇಶವಾಗಿದೆ. ಕೇಂದ್ರ ಸರ್ಕಾರಿ ನೌಕರರು, ವೈದ್ಯರು, ಭದ್ರತಾ ಪಡೆ, ನ್ಯಾಯಾಧೀಶರು ಇಲ್ಲಿ ಸ್ಥಿರ ವೇತನ ಪಡೆಯುತ್ತಿದ್ದಾರೆ. ಇನ್ನು ವ್ಯಾಪಾರ, ವಹಿವಾಟಿನಲ್ಲಿ ಚಂಡೀಘಡ ಉತ್ತಮ ಸ್ಥಾನ ಹೊಂದಿದೆ. ಬೆಂಗಳೂರಿನಲ್ಲಿ ಕುಟುಂಬದ ಸರಾಸರಿ ವಾರ್ಷಿಕ ಖರ್ಚು 15.3 ಲಕ್ಷ ರೂಪಾಯಿ. ದೆಹಲಿಯಲ್ಲಿ ಸರಾಸರಿ ಕುಟುಂಬದ ವಾರ್ಷಿಕ ಖರ್ಚು. 14.5 ಲಕ್ಷ ರೂಪಾಯಿ. ಮುಂಬೈನಲ್ಲಿ 14 ಲಕ್ಷ ರೂಪಾಯಿ. ಕೋಲ್ಕತಾದಲ್ಲಿ 10 ಲಕ್ಷ ರೂಪಾಯಿ ವಾರ್ಷಿಕ ಖರ್ಚು ಎಂದು ಅಧ್ಯಯನ ವರದಿ ಹೇಳುತ್ತಿದೆ.

ಚಂಡೀಘಡ ಶ್ರೀಮಂತ ನಗರವಲ್ಲ

ಖರ್ಚಿನಲ್ಲಿ ಚಂಡೀಘಡ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ಆದಾಯ ವಿಚಾರದಲ್ಲಿ ಚಂಡೀಘ ಎರಡನೇ ಸ್ಥಾನ. ಮೊದಲ ಸ್ಥಾನದಲ್ಲಿ ನಮ್ಮ ಬೆಂಗಳೂರು ನೆಲೆ ನಿಂತಿದೆ. ಬೆಂಗಳೂರು ಭಾರತದ ಅತೀ ಹೆಚ್ಚು ಆದಾಯ ನಗರವಾಗಿ ಗುರುತಿಸಿಕೊಂಡಿದೆ.

ಚಂಡೀಘಡ ಪಂಜಾಬ್ ಹಾಗೂ ಹರ್ಯಾಣದ ರಾಜಧಾನಿಯಾಗಿದೆ. ಚಂಡೀಘಡ ಸ್ವಾತ್ರಂತ್ರ್ಯ ಪೂರ್ವದಲ್ಲೇ ವ್ಯವಸ್ಥಿತವಾಗಿ ನಿರ್ಮಿಸಿದ ನಗರವಾಗಿದೆ. ಫ್ರೆಂಚ್ ಹಾಗೂ ಸ್ವಿಸ್ ಆರ್ಕಿಟೆಕ್ಟರ್ ಲೋ ಕೊರ್‌ಬಸಿಯರ್ ಪ್ಲಾನ್ ತಯಾರಿಸಿದ್ದಾರೆ. ಅಚ್ಚುಕಟ್ಟಾಗಿ ನಿರ್ಮಾಣಗೊಂಡ ನಗರ ಈಗಲೂ ವ್ಯವಸ್ಥಿತವಾಗಿದೆ. 2015ರಲ್ಲಿ ಈ ನಗರಕ್ಕೆ ಸಂತೋಷವಾಗಿರುವ ನಗರ ಎಂಬ ಬಿರುದು ಪಡೆದುಕೊಂಡಿತ್ತು. ಚಂಡಿ ಮಂದಿರದಿಂದ ಚಂಢೀಘಡ ಎಂಬ ಹೆಸರು ಬಂದಿದೆ ಅನ್ನೋ ದಾಖಲೆ ಇವೆ. ಹಿಂದೂ ದೇವತೆ ಚಂಡಿಯ ಮೂಲ ಸ್ಥಾನ ಇರುವ ಕಾರಣಕ್ಕೆ ಚಂಡೀಘಡ ಎಂಬು ಹೆಸರು ಬಂದಿದೆ ಎಂಬ ದಾಖಲೆಗಳಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಿಕ್ಸಿ ಜಾರ್‌ನ ಚೂಪಾದ ಬ್ಲೇಡ್ ಅಡಿಯಲ್ಲಿ ಜಿಡ್ಡು, ಕಲೆ ಕುಳಿತಿದ್ಯಾ? ಮುಟ್ಟದೆ ಕ್ಲೀನ್ ಮಾಡಲು ಇಲ್ಲಿದೆ 1 ನಿಮಿಷದ ಟ್ರಿಕ್
ಸೊಳ್ಳೆ ಪರದೆಯಲ್ಲಿ ಸಣ್ಣ ರಂಧ್ರವಾದ್ರೆ ಟೆನ್ಷನ್ ಬೇಡ, ಕೀಟ ಒಳಗೆ ಬರದಂತೆ ಹೀಗೆ ರಿಪೇರಿ ಮಾಡಿ