'ನನ್ನ ಹತ್ರ ದುಡ್ ಇಲ್ಲ..' ನೇರವಾಗಿ ಹೇಳೋದೇ ಇಂದಿನ ಹೊಸ ಟ್ರೆಂಡ್! ಏನಿದು ಲೌಡ್ ಬಜೆಟಿಂಗ್?

Published : Oct 13, 2026, 01:55 PM IST
Loud Budgeting

ಸಾರಾಂಶ

ಹಿಂದೆ ಹಣವಿಲ್ಲ ಎಂದು ಹೇಳಿಕೊಳ್ಳಲು ಮುಜುಗರಪಡುತ್ತಿದ್ದ ಜನರು, ಈಗ ಆರ್ಥಿಕ ಮಿತಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿ, ಹಣ ಉಳಿಸುವ ಈ ಹೊಸ ಜೀವನಶೈಲಿಯೇ 'ಲೌಡ್ ಬಜೆಟಿಂಗ್'. ಇದು ಸಾಮಾಜಿಕ ಒತ್ತಡ ಕಡಿಮೆ ಮಾಡುವ, ಆರ್ಥಿಕ ಗುರಿಗಳಿಗೆ ಆದ್ಯತೆ ನೀಡುತ್ತದೆ.

ಹಿಂದೆಲ್ಲ ಹಣದ ಪರಿಸ್ಥಿತಿಯನ್ನ ಯಾರೊಂದಿಗೆ ಹೇಳಿಕೊಳ್ತಿರಲಿಲ್ಲ. ಎಲ್ಲಿಗಾದರೂ ಟ್ರಿಪ್ ಹೋಗುವಾಗ ಹಣವಿದ್ದವರು ಸಜ್ಜಾದರೆ, ಹಣ ಇಲ್ಲದವರು 'ನನ್ನ ಬಳಿ ಹಣವಿಲ್ಲ' ಎಂದು ಹೇಳಿಕೊಳ್ಳುತ್ತಿರಲಿಲ್ಲ. ಅದು ಅವಮಾನ, ಮುಜುಗರ ತರುವ ವಿಷಯವಾಗಿತ್ತು. ಆದರೀಗ ಕಾಲ ತುಂಬಾ ಬದಲಾಗಿದೆ. ಅಂದು ಯಾವುದನ್ನು ಯಾವುದನ್ನು ಮುಚ್ಚಿಟ್ಟುಕೊಳ್ಳುತ್ತಿದ್ದೆವೊ ಅದೀಗ ಹೇಳಿಕೊಳ್ಳುವ ಟ್ರೆಂಡ್ ಆಗಿದೆ.

ಹೌದು ಹಣ ಉಳಿಸುವುದನ್ನು ಮುಚ್ಚಿಡುವ ಕಾಲ ಹೋಗಿದೆ. ಆರ್ಥಿಕ ಪರಿಸ್ಥಿತಿಯನ್ನ ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.

ಗೆಳೆಯರ ಗುಂಪೊಂದು ವೀಕೆಂಡ್ ಪಾರ್ಟಿಗೆ ಪ್ಲಾನ್ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಹೆಚ್ಚಿನವರ ಜೇಬಿನಲ್ಲಿ ಬಿಡಿಗಾಸು ಇಲ್ಲದಿದ್ರೂ ಕ್ರೆಡಿಟ್ ಕಾರ್ಡ್ ಬಳಸಿ ಸ್ವೈಪ್ ಮಾಡ್ತಾರೆ. ಹಣವಿಲ್ಲ ಎಂದು ಹೇಳಿದ್ರೆ ಮರ್ಯಾದೆ ಹೋಗಿಬಿಡ್ತದೋ ಎನ್ನುವ ಆತಂಕ. ಆದರೆ ನೀವೀಗ ಮೆಟ್ರೋ ನಗರಗಳ ಇಂದಿನ ಜೆನ್-ಜೀ ಅಥವಾ ಯುವ ಉದ್ಯೋಗಿಗಳ ವಲಯವನ್ನು ಗಮನಿಸಿದರೆ ಅಚ್ಚರಿಯಾಗಬಹುದು. ಯಾರಾದರೂ ದುಬಾರಿ ಪಾರ್ಟಿ, ಔಟಿಂಗ್ ಅಥವಾ ಐಷಾರಾಮಿ ಟ್ರಿಪ್‌ಗೆ ಕರೆದರೆ, ಅವರು ಕಿಂಚಿತ್ತೂ ಮುಜುಗರವಿಲ್ಲದೆ, ‘ಸಾರಿ ಬಾಸ್, ಈ ತಿಂಗಳು ನನ್ನ ಬಜೆಟ್ ಮೀರಿದೆ. ನಾನಂತೂ ದುಡ್ಡು ವೇಸ್ಟ್ ಮಾಡಲ್ಲ, ನಾನು ಬರಲ್ಲ’ ಎಂದು ಯಾವುದೇ ಸಂಕೋಚವಿಲ್ಲದೆ ಹೇಳುತ್ತಾರೆ. ಆರ್ಥಿಕ ಮಿತಿಯನ್ನು ಹೆಮ್ಮೆಯಿಂದ ಸಾರ್ವಜನಿಕವಾಗಿ ಘೋಷಿಸಿಕೊಳ್ಳುವ ಈ ಹೊಸ ಜೀವನಶೈಲಿಯೇ ಈಗ ಜಾಗತಿಕವಾಗಿ ಸದ್ದು ಮಾಡುತ್ತಿರುವ ಲೌಡ್ ಬಜೆಟಿಂಗ್ ಟ್ರೆಂಡ್.

ಏನಿದು ಲೌಡ್ ಬಜೆಟಿಂಗ್ ಟ್ರೆಂಡ್?

‘ನನ್ನ ಬಳಿ ದುಡ್ಡೇ ಇಲ್ಲ’ ಎಂದು ಹೇಳಿ ಬಡತನ ಪ್ರದರ್ಶಿಸುವುದಲ್ಲ, ಬದಲಿಗೆ ‘ನನ್ನ ದುಡ್ಡನ್ನು ಎಲ್ಲಿ, ಹೇಗೆ ಖರ್ಚು ಮಾಡಬೇಕೆಂಬ ನಿಯಂತ್ರಣ ನನ್ನ ಕೈಯಲ್ಲಿದೆ’ ಎಂದು ಜಗತ್ತಿಗೆ ಸಾರುವುದು ಈ ಟ್ರೆಂಡ್‌ನ ಉದ್ದೇಶ. ಬೇರೆಯವರ ಮೆಚ್ಚುಗೆಗಾಗಿ ಅಥವಾ ಫೋಮೋ ಕಾರಣಕ್ಕೆ ಅನಗತ್ಯವಾಗಿ ಖರ್ಚು ಮಾಡುವುದನ್ನು ತಡೆಯುವುದೇ ಇದರ ಸಾರ.

ಲೌಡ್ ಬಜೆಟಿಂಗ್ ತಂದಿರುವ 3 ಪ್ರಮುಖ ಬದಲಾವಣೆಗಳು

1. ಸಾಮಾಜಿಕ ಒತ್ತಡಕ್ಕೆ ಪೂರ್ಣವಿರಾಮ: ಸ್ನೇಹಿತರು ಬ್ರಾಂಡೆಡ್ ಶೂ ಕೊಂಡರು ಎಂದೋ, ನೆರೆಹೊರೆಯವರು ದುಬಾರಿ ಕಾರು ಅಥವಾ ಐಫೋನ್ ಖರೀದಿಸಿದರು ಎಂದೋ ಸಾಲ ಮಾಡಿ ತಾವೂ ಅದನ್ನೇ ಕೊಳ್ಳುವ ಪ್ರವೃತ್ತಿ ಹಿಂದಿತ್ತು. ಲೌಡ್ ಬಜೆಟಿಂಗ್ ಇದಕ್ಕೆ ಬ್ರೇಕ್ ಹಾಕಿದೆ.

2. ಕ್ರೆಡಿಟ್ ಕಾರ್ಡ್ ಸಾಲದ ಸುಳಿಯಿಂದ ಮುಕ್ತಿ: ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾದರೂ ಸ್ಟೇಟಸ್‌ಗಾಗಿ ಕ್ರೆಡಿಟ್ ಕಾರ್ಡ್ ಉಜ್ಜುವ ಚಾಳಿಗೆ ಇದು ಕಡಿವಾಣ ಹಾಕುತ್ತದೆ.

3. ದೀರ್ಘಾವಧಿಯ ಆರ್ಥಿಕ ಗುರಿಗಳಿಗೆ ಆದ್ಯತೆ: ಒಂದು ವಾರಾಂತ್ಯದ ಪಾರ್ಟಿಗೆ ₹3,000–₹5,000 ಖರ್ಚು ಮಾಡುವ ಬದಲು, ಆ ಹಣವನ್ನು ಎಸ್‌ಐಪಿ ಮೂಲಕ ಹೂಡಿಕೆ ಮಾಡುವುದು ಅಥವಾ ತುರ್ತು ನಿಧಿಗೆ ಜಮೆ ಮಾಡುವುದು ಆದ್ಯತೆಯಾಗುತ್ತಿದೆ.

ನಿಮ್ಮ ಜೀವನದಲ್ಲೂ ಲೌಡ್ ಬಜೆಟಿಂಗ್ ಅಳವಡಿಸಿಕೊಳ್ಳುವುದು ಹೇಗೆ?

1. ಪ್ರತಿ ತಿಂಗಳ ಸಂಬಳ ಬಂದ ತಕ್ಷಣ ಉಳಿತಾಯ, ಬಾಡಿಗೆ ಮತ್ತು ತಿಂಗಳ ದಿನಸಿ ಖರ್ಚುಗಳನ್ನು ಪ್ರತ್ಯೇಕಿಸಿ. ಹೊರಗಿನ ತಿಂಡಿ, ಮನರಂಜನೆಗೆ ನಿರ್ದಿಷ್ಟ ಮಿತಿ ಇರಲಿ.

2. ಸ್ನೇಹಿತರು ಬಜೆಟ್‌ಗೆ ಮೀರಿದ ದುಬಾರಿ ಹೋಟೆಲ್ ಅಥವಾ ಕೆಫೆಗೆ ಆಹ್ವಾನಿಸಿದಾಗ, ‘ಈ ತಿಂಗಳು ನನ್ನ ಔಟಿಂಗ್ ಬಜೆಟ್ ಮುಗಿದಿದೆ, ಮನೆಯಲ್ಲೇ ಭೇಟಿಯಾಗೋಣ’ ಎಂದು ಧೈರ್ಯವಾಗಿ ಹೇಳಿ.

3. ಪಾರ್ಟಿ ಬೇಡ ಎನ್ನುವುದರ ಜತೆಗೆ, ಕಡಿಮೆ ಖರ್ಚಿನ ಪರ್ಯಾಯಗಳನ್ನು ನೀಡಿ. ಉದಾಹರಣೆಗೆ, ಪಾರ್ಕ್ ವಾಕ್, ಮನೆಯಲ್ಲೇ ಊಟ ಅಥವಾ ಬೋರ್ಡ್ ಗೇಮ್ಸ್

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karna Serial ನಲ್ಲೂ ಜೋಗಮ್ಮ ಎಂಟ್ರಿ! ಧಾರಾವಾಹಿಗಳಲ್ಲಿ ಜೋಗತ್ತಿಯರಿಗೆ ಏಕಿಷ್ಟು ಡಿಮಾಂಡ್​
ಆಲೂಗಡ್ಡೆ ಮಾರುತ್ತಿದ್ದ ವ್ಯಕ್ತಿ ಇಂದು ₹1,500 ಕೋಟಿ ಕಂಪನಿಯ ಮಾಲೀಕ! ಬರ್ಗರ್ ಕಿಂಗ್, KFCಗೂ ಇವರದ್ದೇ ಫ್ರೆಂಚ್ ಫ್ರೈಸ್!