ಹೆರಿಗೆಯಾದ ನಂತರ ಎಷ್ಟು ದಿನಗಳ ಕಾಲ ಲೈಂಗಿಕ ಕ್ರಿಯೆ ನಿಷಿದ್ಧ?

By Suvarna Web DeskFirst Published Mar 19, 2018, 5:07 PM IST
Highlights

ಹೆರಿಗೆ ನಂತರ ಹೆಣ್ಣು ಮಾನಸಿಕವಾಗಿ ಹಾಗೂ ದೈಹಿಕವಾಗಿ ವೀಕ್ ಆಗೋದು ಹೌದು. ಹಾಗಂತೆ ಜೀವನಪರ್ಯಂತ ಆಕೆಯನ್ನು ಕಡೆಗಣಿಸೋದು ಬೇಡೆ. ಹಾಗಾದ್ರೆ ಪ್ರಸವದ ನಂತರ ಎಷ್ಟು ದಿನ ರೆಸ್ಟ್ ಅಗತ್ಯ, ಯಾವಾಗ ಲೈಂಗಿಕ ಕ್ರೆಯೆ ನಡೆಸಬಹುದು?

- ಡಾ. ಶ್ರೀಪ್ರದ ವಿನೇಕರ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು 

ಇತ್ತೀಚೆಗೆ ಹೆಚ್ಚಾಗ್ತಿರೋ ಗೈನಕಾಲಜಿ ಸಮಸ್ಯೆಗಳು ಯಾವುವು?  

ಇತ್ತೀಚೆಗೆ ಇನ್‌ಫರ್ಟಿಲಿಟಿ ಅರ್ಥಾತ್ ಬಂಜೆತನದ ಸಮಸ್ಯೆ ಹೆಚ್ಚಾಗ್ತಿದೆ. ಈ ಜನರೇಶನ್‌ನವರು ಕೆರಿಯರ್‌ಗೆ ಒತ್ತುಕೊಟ್ಟು ತಡವಾಗಿ ವಿವಾಹವಾಗುತ್ತಾರೆ. ಇನ್ನೊಂದು ಗರ್ಭಾಶಯದ ಫೈಬ್ರೋಡ್ ಸಮಸ್ಯೆ. ಇದರಿಂದ ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಮತ್ತು ಅತ್ಯಧಿಕ ಸ್ರಾವವಾಗುತ್ತದೆ. ಚಾಕೊಲೇಟ್ ಸಿಸ್ಟ್, ಪಿಸಿಒಡಿಯಂಥ ಸಮಸ್ಯೆಗಳು ಹೆಚ್ಚಾಗುತ್ತಿವೆ. 

ಗೈನಕಾಲಜಿಗೆ ಸಂಬಂಧಿಸಿ ಯಾವ ಸಮಸ್ಯೆಗಳನ್ನು ಕಡೆಗಣಿಸುವಂತಿಲ್ಲ?
ಮೆನೊಪಾಸ್ ಆಗಿ ಒಂದು ವರ್ಷದ ಬಳಿಕ ಮತ್ತೆ ಬ್ಲೀಡಿಂಗ್ ಶುರುವಾದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಕ್ಯಾನ್ಸರ್‌ನ ಲಕ್ಷಣವಾಗಿರುವ ಸಾಧ್ಯತೆ ಇದೆ. ಹಾಗೇ 15 ದಿನಗಳಿಗೊಮ್ಮೆ ಅಧಿಕ ಋತುಸ್ರಾವವಾಗೋದು, ದುರ್ವಾಸನೆಯಿಂದ ಕೂಡಿದ ಬಿಳಿಸ್ರಾವ, ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಬ್ಲೀಡಿಂಗ್ ಆಗೋದು ಸರ್ವಿಕ್ಸ್ ಕ್ಯಾನ್ಸರ್‌ನ ಲಕ್ಷಣಗಳು. ದಯವಿಟ್ಟು ಇದನ್ನು ಕಡೆಗಣಿಸಬೇಡಿ.

ಗರ್ಭನಿರೋಧಕ ಗುಳಿಗೆಗಳಿಂದ ಸೈಡ್‌ಎಫೆಕ್ಟ್ ಇಲ್ಲವಾ?
ಇಲ್ಲ. ಆದರೆ ವೈದ್ಯರನ್ನು ಸಂಪರ್ಕಿಸದೇ ಗರ್ಭನಿರೋಧಕ ಗುಳಿಗೆ ತೆಗೆದುಕೊಳ್ಳೋದು ಅಷ್ಟು ಸೇಫ್ ಅಲ್ಲ. ವೈದ್ಯರು ನಿಮ್ಮ ದೇಹಕ್ಕೆ ಸರಿಹೊಂದುವ ಗರ್ಭನಿರೋಧಕ ಗುಳಿಗೆ ನೀಡುತ್ತಾರೆ. ಅದರ ಸೇವನೆಯಿಂದ ಹಾನಿಯಿಲ್ಲ. ಕಾಪರ್ಟಿಯಂಥ ಗರ್ಭನಿರೋಧಕಗಳನ್ನು ಹೆರಿಗೆಯಾದ ೬ ವಾರಗಳಲ್ಲಿ ಅಳವಡಿಸುತ್ತಾರೆ. ಹೆರಿಗೆಯಾದ ಕೂಡಲೇ ಸಹ ಹಾಕುತ್ತಾರೆ. ಇದರಿಂದ ರಿಸ್ಕ್ ಜಾಸ್ತಿ, ಕಾಪರ್ಟಿ ಬಿದ್ದುಹೋಗಿ ಬಿಡಬಹುದು. ಹಾಗೇ ಮೈಗ್ರೇನ್‌ನಂಥ ಸಮಸ್ಯೆ ಇರುವವರಿಗೆ ಕಾಪರ್ಟಿ ಹಾಕಲ್ಲ. ಕಾಪರ್ಟಿ ಬಳಸಿದರೆ ದಪ್ಪಗಾಗ್ತಾರೆ ಅನ್ನೋದು ದೊಡ್ಡ ಸುಳ್ಳು. ವ್ಯಾಯಾಮ ಮಾಡದಿದ್ರೆ, ಬಾಣಂತನದಲ್ಲಿ ಅಧಿಕ ತುಪ್ಪ ತಿನ್ನೋದರಿಂದ ಕೆಲವರು ದಪ್ಪಗಾಗ್ತಾರೆ.

ಹೆರಿಗೆಯಾದ ಬಳಿಕ ಮಗುವಿಗೆ ಹಾಲುಣಿಸುತ್ತಿರುವಾಗ ಗರ್ಭಧರಿಸುವ ಸಾಧ್ಯತೆ ಇಲ್ಲ ಅಂತಾರೆ, ನಿಜವೇ? 

ಹೆರಿಗೆಯಾಗಿ 6 ವಾರ ಲೈಂಗಿಕ ಕ್ರಿಯೆ ನಿಷಿದ್ಧ. ಬಳಿಕ ಗರ್ಭನಿರೋಧಕ ಧರಿಸದೇ ಸೇರಿದರೆ ಗರ್ಭಧರಿಸುವ ಸಾಧ್ಯತೆ ಇರುತ್ತದೆ. ಯಾಕೆಂದರೆ ತತ್ತಿ ಬಿಡುಗಡೆಯಾದ 15 ದಿನದ ಬಳಿಕ ಋತುಸ್ರಾವವಾಗೋದು. ಅಷ್ಟರೊಳಗೆ ತತ್ತಿ ಫಲಿತಗೊಂಡರೆ ಗರ್ಭ ಧರಿಸುವ ಸಾಧ್ಯತೆ ಇದೆ.

ಹೆರಿಗೆಯಾದ ಮೇಲೆ ಎಷ್ಟು ದಿನ ರೆಸ್ಟ್ ಬೇಕು?

ಜಾಸ್ತಿ ಅಂದರೆ 4 ದಿನ ಸಾಕು. ಆಮೇಲೆ ಎಕ್ಸರ್‌ಸೈಸ್ ಶುರು ಮಾಡಬಹುದು. ಆದರೆ ಆ ಸಮಯದಲ್ಲಿ ದೇಹ ದುರ್ಬಲವಾಗಿರುವ ಕಾರಣ ಬೇಗ ಇನ್‌ಫೆಕ್ಷನ್ ಆಗುವ ಸಾಧ್ಯತೆ ಇರುತ್ತೆ. ಈ ಕಾರಣಕ್ಕೆ ಹಿರಿಯರು 2 ತಿಂಗಳು ಬಾಣಂತಿಯನ್ನು ಮನೆ ಹೊರಗೆ ಬಿಡಲ್ಲ. 
 

click me!