
ಚರ್ಮದ ಆರೈಕೆಯಲ್ಲಿ ದೈಹಿಕ ವ್ಯಾಯಾಮ, ಬಳಸುವ ಕ್ರೀಂಗಳು ಎಷ್ಟು ಮುಖ್ಯವೋ ಸೇವಿಸುವ ಆಹಾರವೂ ಅಷ್ಟೇ ಮುಖ್ಯ. ತ್ವಚೆಯ ಆರೋಗ್ಯಕ್ಕಾಗಿ ಉತ್ತಮ ಆಹಾರವನ್ನೇ ಸೇವಿಸುತ್ತಿರಬಹುದು. ಹಾಗಂತ ಅವೆಲ್ಲವೂ ಒಣತ್ವಚೆಗೂ ಆಗಿ ಬರುತ್ತವೆಂದೇನೂ ಇಲ್ಲ. ಹೀಗಾಗಿ, ಕೆಲವೊಂದು ಆಹಾರಗಳಿಂದ ಸ್ವಲ್ಪ ದೂರವಿದ್ದಲ್ಲಿ ಒಣತ್ವಚೆಯೂ ಕಡಿಮೆಯಾದೀತು, ಜೊತೆಗೆ ನಿಮ್ಮ ವಯಸ್ಸೂ ಕಡಿಮೆ ತೋರೀತು.
ವಿಟಮಿನ್ಎ
ವಿಟಮಿನ್ ಎ ಸಂಪನ್ನ ಆಹಾರ ಪದಾರ್ಥಗಳು ಚರ್ಮಕ್ಕೆ ಒಳಿತೆಂಬುದೇನೋ ನಿಜ. ಹಾಗಂಥ ಮಿತಿ ಮೀರಿ ಅವುಗಳನ್ನು ಸೇವಿಸಿದಲ್ಲಿ ಒಣ ಚರ್ಮ, ಜಾಂಡೀಸ್, ಅಂಗಾಲು ಒಡಕು ಮುಂತಾದ ಸಮಸ್ಯೆಗಳು ತೋರಿಬರುತ್ತವೆ.
ಆಲ್ಕೋಹಾಲ್
ಕಾಫಿಯಂತೆ ಆಲ್ಕೋಹಾಲೂ ಕೂಡಾ ದೇಹದಿಂದ ನೀರಿನಂಶವನ್ನು ಆರುವಂತೆ ಮಾಡುತ್ತದೆ. ಒಳಗಿನಿಂದ ಡ್ರೈ ಆದ ಮೇಲೆ ಹೊರಗಿನ ತ್ವಚೆಯಲ್ಲಿ ಅದು ತೋರಲೇ ಬೇಕಲ್ಲವೇ?
ಪ್ಯಾಕ್ಡ್ ಹಾಗೂ ಪ್ರೊಸೆಸ್ಡ್ ಆಹಾರ
ಚಿಪ್ಸ್, ಕುಕೀಸ್, ತಂಪು ಪಾನೀಯಗಳು ಸೇರಿದಂತೆ ಪ್ಯಾಕೆಟ್‌ನಲ್ಲಿ ಬರುವ ಹಲವಷ್ಟು ಪ್ರಸಿದ್ಧ ಆಹಾರ ಪದಾರ್ಥಗಳಲ್ಲಿ ಅತಿಯಾದ ಉಪ್ಪು, ಸಕ್ಕರೆ ಬಿಟ್ಟರೆ ದೇಹಕ್ಕೆ ಅಗತ್ಯವಿರುವ ಯಾವುದೇ ಪೋಷಕಾಂಶಗಳೂ ಇರುವುದಿಲ್ಲ. ಇವುಗಳಿಂದ ಬೊಜ್ಜು ಬರುವುದಲ್ಲಿ ಚರ್ಮ ಮತ್ತಷ್ಟು ಒಣಗಿ ಇತರೆ ಚರ್ಮ ಸಮಸ್ಯೆಗಳಿಗೆ ಎಡೆಮಾಡಿಕೊಡುವುದು.
ಹಾಲಿನ ಪದಾರ್ಥಗಳು
ಡೈರಿ ಉತ್ಪನ್ನಗಳು ಹೇರಳ ಕ್ಯಾಲ್ಶಿಯಂ ಹೊಂದಿದ್ದು ಹಲ್ಲು ಹಾಗೂ ಮೂಳೆಗಳ ಆರೋಗ್ಯಕ್ಕೆ ಅಗತ್ಯ ಹೌದಷ್ಟೇ. ಆದರೆ, ಇತ್ತೀಚಿನ ದಿನಗಳಲ್ಲಿ ಹಸು ಹೆಚ್ಚು ಹಾಲು ಕೊಡಲೆಂದು ಆರ್ಟಿಫಿಶಿಯಲ್ ಹಾರ್ಮೋನ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿದವರಲ್ಲಿ ಒಣಚರ್ಮ, ಸುಕ್ಕು, ಮೊಡವೆ, ಕಲೆಗಳು ಮುಂತಾದ ಸಮಸ್ಯೆಗಳು ಕಂಡು ಬರುತ್ತಿವೆ. ಹೀಗಾಗಿ ಹಾಲಿನ ಉತ್ಪನ್ನಗಳನ್ನು ಖರೀದಿಸುವಾಗ ಲೇಬಲನ್ನು ಸರಿಯಾಗಿ ಓದಿ ಹಾರ್ಮೋನ್ ಫ್ರೀ ಉತ್ಪನ್ನ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವೇ ಕ್ಯಾಲ್ಶಿಯಂನ ಇತರೆ ಮೂಲಗಳಾದ ಗೋಟ್ ಮಿಲ್ಕ್, ಚೀಸ್, ಬಾದಾಮಿ ಹಾಲು ಇತ್ಯಾದಿ ಸೇವಿಸುವುದನ್ನು ರೂಢಿಸಿಕೊಳ್ಳಿ.
ಕೆಫಿನ್
ದಿನಕ್ಕೆ 3ಕ್ಕಿಂತ ಅಧಿಕ ಕಾಫಿ ಸೇವನೆ ಹೆಚ್ಚಿನ ಸ್ಟ್ರೇಸ್ ಹಾರ್ಮೋನ್ ಬಿಡುಗಡೆಗೆ ಕಾರಣವಾಗಿ, ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ.
ಅಜೈವಿಕ ಆಹಾರ
ಕೆಮಿಕಲ್ ಬಳಸಿ ಬೆಳೆದ ಯಾವುದೇ ಹಣ್ಣು ತರಕಾರಿಗಳು ತ್ವಚೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಕುತ್ತು ತರುವುದು. ಜೈವಿಕವಾಗಿ ಬೆಳೆಸಿದ ಆಹಾರ ಪದಾರ್ಥಗಳಲ್ಲಿ ಇದಕ್ಕಿಂಥ ಮೂರು ಪಟ್ಟು ಹೆಚ್ಚು ಪೋಷಕಾಂಶಗಳಿದ್ದು, ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ.
ಪೇಸ್ಟ್ರಿ, ಕುಕೀಸ್, ಪಾಸ್ತಾ, ಬ್ರೆಡ್
ಈ ಪದಾರ್ಥಗಳಲ್ಲಿ ರಿಫೈನ್ಡ್ ಕಾರ್ಬೋಹೈಡ್ರೇಟ್ ಬಳಸಲಾಗುತ್ತದೆ. ಸಕ್ಕರೆಯಂತೆಯೇ ಇವು ನಿಮ್ಮ ತ್ವಚೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಏಕೆಂದರೆ ಇವುಗಳಲ್ಲಿ ನಾರಿನಂಶ ಕಡಿಮೆ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.