
ದಿನ ಸೇಬು ಸೇವಿಸಿ, ವೈದ್ಯರಿಂದ ದೂರವಿರಿ....ಎಂಬ ಮಾತಿದೆ. ಫೈಬರ್ ಅಂಶ ಹೆಚ್ಚಾಗಿರುವ ಸೇಬಿನಿಂದ ಹಲವು ಪ್ರಯೋಜನಗಳಿವೆ. ಸಾಮಾನ್ಯವಾಗಿ ಸಿಪ್ಪೆ ತೆಗೆದು ಸೇಬು ಸೇವಿಸುತ್ತಾರೆ. ಆದರೆ, ಸಿಪ್ಪೆಯೊಂದಿಗೆ ತಿಂದರೇ ಹೆಚ್ಚು ಲಾಭ. ಏಕೆ?
ಫೈಬರ್ ಹೆಚ್ಚು: ಸೇಬು ಹಣ್ಣಿನಲ್ಲಿರುವ ಅಧಿಕ ಫೈಬರ್ ಸಿಪ್ಪೆಯಲ್ಲಿರುತ್ತದೆ. ಇದು ತುಂಬಾ ಸಮಯದವರೆಗೆ ಹೊಟ್ಟೆ ಗಟ್ಟಿಯಾಗಿರಲು ಸಹಕರಿಸುತ್ತದೆ. ಇದಲ್ಲದೇ ದೇಹದ ಮೂಳೆ ಹಾಗೂ ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಪಚನ ಕ್ರಿಯೆ ಹೆಚ್ಚಿಸುವ ಫೈಬರ್ ಮಧುಮೇಹಕ್ಕೂ ಮದ್ದು.
ಇಡ್ಲಿ ಪ್ರಿಯರಿಗೆ ಈ ಲೇಖನ ಸಮರ್ಪಣೆ
ಶ್ವಾಸಕೋಶ ಆರೋಗ್ಯಕ್ಕೆ: ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ಕರ್ಸಿಟಿನ್ ಎಂಬ ಅಂಶ ಶ್ವಾಸಕೋಶ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತದೆ.
ತೂಕ ಕಡಿಮೆ ಮಾಡಲು: ಸೇಬಿನ ಸಿಪ್ಪೆಯಲ್ಲಿರುವ ಫೈಬರ್ ತುಂಬಾ ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಹೆಚ್ಚು ಆಹಾರ ಸೇವಿಸದೇ ಇರಬಹುದು. ಹೀಗಾದಾಗ ತೂಕ ಹೆಚ್ಚುವುದಿಲ್ಲ. ಸೇಬು ಹಣ್ಣಿನ ಸಿಪ್ಪೆಯಲ್ಲಿರುವ ಫಾಲಿಫೆನಾಲ್ ಬೊಜ್ಜು ನಿವಾರಿಸಲು ಸಹಕರಿಸುತ್ತದೆ. ಜೊತೆಗೆ ರಕ್ತದಲ್ಲಿರುವ ಶುಗರ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ.
ಹೃದಯದ ಅರೋಗ್ಯ: ಇದರಲ್ಲಿರುವ ಫಾಲಿಫೆನಾಲ್ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಿ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಇದು ಹೃದಯದ ಆರೋಗ್ಯವನ್ನು ಚೆನ್ನಾಗಿಡುತ್ತದೆ.
ಸೊಂಪಾಗ ಸುಖ ನಿದ್ರೆಗೆ ಬೆಸ್ಟ್ ಫುಡ್ಸ್
ಸಿಪ್ಪೆಯಲ್ಲಿ ವಿಟಮಿನ್: ವಿಟಮಿನ್ ಎ, ಸಿ ಮತ್ತು ಕೆ ಸೇಬಿನ ಸಿಪ್ಪೆ ಇರುತ್ತದೆ. ಇದಲ್ಲದೆ ಪೊಟ್ಯಾಷಿಯಂ, ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಮೊದಲಾ ಖನಿಜಾಂಶಗಳು ದೇಹಕ್ಕೆ ಸೇರಿ, ಅರೋಗ್ಯ ಚೆನ್ನಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.