
ನೀವು ಬೆಳಗಿನ ತಿಂಡಿ ಎಷ್ಟು ಗಂಟೆಗೆ ಮಾಡುತ್ತೀರಿ? ಇನ್ನು ರಾತ್ರಿ ಊಟದ ಸಮಯ ಎಷ್ಟು? ಹಲವರು ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವೆನೆ ಮಾಡುತ್ತಾರೆ. ಈ ಮೂಲಕ ಕಟ್ಟು ನಿಟ್ಟಾಗಿ ಸಮಯ ಪಾಲನೆ ಮಾಡಿ, ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಆದರೆ ಬೆಳಗಿನ ತಿಂಡಿ ಹಾಗೂ ರಾತ್ರಿಯ ಊಟ ಈ ಎರಡರಿಂದ ಸಾವಿನ ರಿಸ್ಕ್ ಎಷ್ಟಿದೆ ಅನ್ನೋದನ್ನು ಅಧ್ಯಯನ ವರದಿ ಮೂಲಕ ಪತ್ತೆ ಹಚ್ಚಲಾಗಿದೆ. ಅಮೆರಿಕದ ನ್ಯಾಷನಲ್ ಹೆಲ್ತ್ ಹಾಗೂ ನ್ಯೂಟ್ರಿಷನ್ ಎಕ್ಸಾಮಿನೇಶನ್ ಸರ್ವೆಯಲ್ಲಿ ನೀವು ತೆಗೆದುಕೊಳ್ಳುವ ಆಹಾರ ಸಮಯದಲ್ಲಿ ಸಾವಿನ ರಿಸ್ಕ್ ಸ್ಪಷ್ಟವಾಗಿದೆ ಎನ್ನುತ್ತಿದೆ. ನಿಮ್ಮ ಲೈಫ್ಸ್ಟೈಲ್ ಒಮ್ಮೆ ಪರಿಶೀಲಿಸಿಕೊಳ್ಳಿ.
ಕಚೇರಿ ಕೆಲಸ, ಟಾರ್ಗೆಟ್, ನೈಟ್ ಶಿಫ್ಟ್, ಪಾರ್ಟಿ, ಪ್ರಯಾಣ ಹೀಗೆ ಹಲವು ಕಾರಣಗಳಿಂದ ಬಹುತೇಕರ ಬೆಳಗಿನ ತಿಂಡಿ ತಡವಾಗಿ ಸೇವಿಸುತ್ತಾರೆ. ಹಲವರು ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ಅಂದರ್ ಬ್ರಂಚ್ ಒಟ್ಟಿಗೆ ಮಾಡುತ್ತಾರೆ. ಇನ್ನು ಕೆಲವರು ಬೆಳಗ್ಗೆ ಲೇಟ್ ಆಗಿ ಎದ್ದು 10 ಗಂಟೆ, 11 ಗಂಟೆ, 12 ಗಂಟೆಗೆ ತಿಂಡಿ ಮಾಡುತ್ತಾರೆ. ಸಾವು ಅದರಲ್ಲೂ ಹೃದಯಾಘಾತದ ಸಾವಿನ ಆತಂಕ ಕಡಿಮೆ ಮಾಡಲು ಬೆಳಗ್ಗೆ 7 ರಿಂದ 8 ಗಂಟೆಯೊಳಗೆ ತಿಂಡಿ ಸೇವಿಸಬೇಕು. ಈ ಸಮಯ ಮೀರಿದರೆ ರಿಸ್ಕ್ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ.
ಬೆಳಗ್ಗೆ 7 ರಿಂದ 8 ಗಂಟೆಯೊಳಗೆ ದಿನದ ಮೊದಲ ಆಹಾರ ಸೇವಿಸುವವರು ಆರೋಗ್ಯ ಸಮಸ್ಯೆಯಿಂದ, ಹೃದಯಾಘಾತದಿಂದ ಸಾವು ಸಂಭವಿಸುವ ಪ್ರಮಾಣ ಕಡಿಮೆ. ಆದರೆ ಬೆಳಗ್ಗೆ 8 ರಿಂದ 10 ಗಂಟೆ ಒಳಗೆ ಮೊದಲ ಆಹಾರ ಸೇವಿಸುವವರಿದೆ ಮರಣದ ಅಪಾಯ ಶೇಕಡಾ 10ರಷ್ಟು ಹೆಚ್ಚು. ಇನ್ನು ಬೆಳಗ್ಗೆ 10 ರಿಂದ 12 ಗಂಟೆಯಲ್ಲಿ ಬೆಳಗಿನ ತಿಂಡಿ ಸೇವಿಸುವವರ ಸಾವಿನ ರಿಸ್ಕ್ ಶೇಕಡಾ 19. ಇನ್ನು ಮಧ್ಯಾಹ್ನ 12 ಗಂಟೆ ನಂತರ ಬೆಳಗಿನ ತಿಂಡಿ ಸೇವಿಸುವವರ ಸಾವಿನ ರಿಸ್ಕ್ ಶೇಕಡಾ 29ರಷ್ಟು ಅಧಿಕ ಎಂದು ಸರ್ವೆ ಹೇಳುತ್ತಿದೆ. ವಿಶೇಷ ಅಂದರೆ ಮಧ್ಯಾಹ್ನ 12 ಗಂಟೆ ಬಳಿಕ ಬೆಳಗಿನ ತಿಂಡಿ ಸೇವಿಸುವವರಲ್ಲಿ ಹೃದಯಘಾತದಿಂದ ಸಾವನ್ನಪ್ಪುವರ ಸಂಖ್ಯೆ ಶೇಕಡಾ 46ರಷ್ಟು ಹೆಚ್ಚು. ಇಷ್ಟೇ ಅಲ್ಲ ಇವರ ಸರಾಸರಿ ಆಯಸ್ಸಿನಲ್ಲಿ 2.45 ವರ್ಷ ಕಡಿಮೆಯಾಗುತ್ತದೆ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.
ಅಮರಿಕ ನ್ಯಾಷನಲ್ ಹೆಲ್ತ್ ಹಾಗೂ ನ್ಯೂಟ್ರಿಶಿಯನ್ ಸಮೀಕ್ಷೆಯಲ್ಲಿ 1999ರಿಂದ 2018ರ ವರೆಗೆ 40 ವರ್ಷ ಅದಕ್ಕಿಂತ ಮೇಲ್ಪಟ್ಟ 31044 ಮಂದಿಯ ಆಹಾರ ಪದ್ಧತಿ, ಮರಣ ದಾಖಲೆಗಳನ್ನು ವಿಶ್ಲೇಷಿಸಿ ಅಧ್ಯಯನ ಮಾಡಲಾಗಿದೆ. 8.6 ವರ್ಷಗಳ ಕಾಲ ನಡೆದ ಅಧ್ಯಯನ ವೇಳೆ 7129 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 2259 ಮಂದಿ ಹೃದಯಾಘಾತ ಸಮಸ್ಯಗೆ ತುತ್ತಾಗಿದ್ದಾರೆ.
ದಿನದ ಕೊನೆಯ ಊಟ ಸೇವಿಸುವ ಸಮಯವೂ ಅಷ್ಟೇ ಮುಖ್ಯ. ರಾತ್ರಿ ಊಟ 7 ರಿಂದ 8 ಗಂಟೆಗೆ ಹೋಲಿಸಿದರೆ 7ಗಂಟೆ ಮೊದಲು ಕೊನೆಯ ಆಹಾರ ಸೇವಿಸುವರಲ್ಲಿ ಸಾವಿನ ಅಪಾಯ ಶೇಕಡಾ 13ರಷ್ಟು ಹೆಚ್ಚಿದೆ. ಇನ್ನು ಮಧ್ಯರಾತ್ರಿ 12 ಗಂಟೆ ಬಳಿಕ ಊಟ ಮಾಡುವವರ ಸಾವಿನ ಅಪಾಯದ ಶೇಕಡಾ 27ರಷ್ಟಿದೆ. ಇವರ ಆಯಸ್ಸಿನಲ್ಲಿ 2.35 ವರ್ಷ ಕಡಿಮೆಯಾಗಿರುತ್ತದೆ. ಹೀಗಾಗಿ ರಾತ್ರಿ 8 ಗಂಟೆ ಆಸುಪಾಸಿನಲ್ಲಿ ಊಟ ಮಾಡುವರಲ್ಲಿ ಅಪಾಯದ ಪ್ರಮಾಣ ಅತೀ ಕಡಿಮೆ ಎಂದು ವರದಿ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.