
ವೇಗವಾಗಿ ನಡೆಯುವವರು ಆಮೆ ನಡಿಗೆಯವರಿಗಿಂತ 15 ವರ್ಷದಷ್ಟು ಹೆಚ್ಚು ಕಾಲ ಬದುಕುತ್ತಾರೆ ಎಂಬ ಆಸಕ್ತಿಕರ ಸಂಗತಿಯೊಂದು ಹೊರಬಿದ್ದಿದೆ. ಲೈಸೆಸ್ಟರ್ ಯುನಿವರ್ಸಿಟಿ ನಡೆಸಿದ ಅಧ್ಯಯನ ಈ ವಿಷಯ ಕಂಡುಕೊಂಡಿದೆ.
ಸುಮಾರು 4 ಲಕ್ಷದ 75 ಸಾವಿರ ಜನರನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು, ವೇಗವಾಗಿ ನಡೆವ ಅಭ್ಯಾಸ ಹೊಂದಿದವರು ಸರಾಸರಿ 86-87 ವರ್ಷ ಬದುಕುತ್ತಾರಾದರೆ, ನಿಧಾನಗತಿಯವರ ಸರಾಸರಿ ಜೀವಿತಾವಧಿ 64ರಿಂದ 78 ವರ್ಷ.
ಈ ಹಿಂದೆ ಸಿಡ್ನಿ ಯುನಿವರ್ಸಿಟಿ ನಡೆಸಿದ ಅಧ್ಯಯನ ಕೂಡಾ ವೇಗವಾಗಿ ನಡೆಯುವವರು ಅಕಾಲಿಕ ಮರಣವನ್ನು ತಪ್ಪಿಸಿಕೊಳ್ಳಬಲ್ಲರು ಎಂದು ಹೇಳಿತ್ತು. ಹಾಗಿದ್ದರೆ ಸ್ಪೀಡ್ ವಾಕಿಂಗ್‌ನ ಇತರೆ ಆರೋಗ್ಯ ಲಾಭಗಳೇನೇನು?
- ವಾಕಿಂಗ್‌ನಿಂದ ಫ್ಯಾಟ್ ಕರಗುತ್ತದೆ, ಆದರೆ ಸ್ನಾಯುಗಳು ಬಲಿಷ್ಠವಾಗುತ್ತವೆ. ನಡಿಗೆ ವೇಗವಾಗಿದ್ದಷ್ಟೂ ಹೆಚ್ಚಿನ ಕ್ಯಾಲೋರಿ ಕಳೆದುಕೊಳ್ಳಬಹುದು. ಇದರಿಂದ ತೂಕ ಇಳಿಕೆಯ ಗುರಿ ಬೇಗ ತಲುಪಬಹುದು.
- ವೇಗದ ನಡಿಗೆಯು ಮನಸ್ಸಿಗೆ ಹಿತ ನೀಡುತ್ತದೆ. ಒತ್ತಡ ನಿವಾರಿಸಿ ಮನಸ್ಸು ರಿಲ್ಯಾಕ್ಸ್ ಆಗಿ, ಯೋಚನೆಗಳ ಹಾದಿ ಸುಗಮವಾಗುತ್ತದೆ. ನೆನಪಿನ ಶಕ್ತಿಯೂ ಹೆಚ್ಚುತ್ತದೆ. ಹೀಗಾಗಿ, ನೀವು ಹೆಚ್ಚು ಬುದ್ದಿವಂತರಾಗಿ ಕಾಣಬಹುದು ಕೂಡಾ!
- ವೇಗದ ನಡಿಗೆಯಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಯುತವಾಗಿದ್ದು, ಗ್ಯಾಸ್ಟ್ರಿಕ್, ಮಲಬದ್ಧತೆ, ಅತಿಸಾರ ಮುಂತಾದ ಜೀರ್ಣಸಂಬಂಧಿ ಕಾಯಿಲೆಗಳನ್ನು ದೂರವಿಡಬಹುದು.
40 ನಿಮಿಷ ವಾಕ್ ಮಾಡಿ, ಕ್ಯಾನ್ಸರ್, ಹೃದ್ರೋಗ ದೂರವಿಡಿ
- ವೇಗದ ನಡಿಗೆ ಮೂಡ್ ಬೂಸ್ಟರ್ ಚಟುವಟಿಕೆಯಾದ್ದರಿಂದ ರಕ್ತದೊತ್ತಡದಂಥ ಜೀವನಶೈಲಿ ಕಾಯಿಲೆಗಳನ್ನೂ ದೂರವಿಡಬಹುದು.
- ವಾಕಿಂಗ್ ಮೂಳೆಗಳ ಮೇಲೆ ಹೆಚ್ಚು ಒತ್ತಡ ಹಾಕುವುದಿಲ್ಲ. ಹೀಗಾಗಿ, ಆರ್ಥ್ರೈಟಿಸ್ ಇರುವವರೂ ವಾಕ್ ಮಾಡಬಹುದು.
-ಹೃದಯ ಹಾಗೂ ಶ್ವಾಸಕೋಶದ ಆರೋಗ್ಯ ಕಾಪಾಡುತ್ತದೆ. ಅಲ್ಲದೆ, ಉದ್ಯಾನದಲ್ಲಿ ನಡೆಯುವುದರಿಂದ ಒಳ್ಳೆಯ ಗಾಳಿಯನ್ನೂ ಉಸಿರಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.