Poverty in Childhood: ಹಸಿವಾಗಿದ್ದು ಗೊತ್ತಾಗದಂತೆ ಹೊಟ್ಟೆ ಮೇಲೆ ಗುಂಡು ಕಲ್ಲು ಇಟ್ಟು ಮಲಗ್ತಿದ್ದೆ: ಬಡತನದ ದಿನ ನೆನೆದ Na.Someshwara

Published : Jul 08, 2025, 03:17 PM ISTUpdated : Jul 08, 2025, 03:20 PM IST
Dr Na Someshwar about poverty

ಸಾರಾಂಶ

ವೈದ್ಯರಾಗಿ, ಶಿಕ್ಷಣದ ಕ್ಷೇತ್ರದ ತಜ್ಞರಾಗಿ, ಲೇಖಕರಾಗಿರುವ ಡಾ.ನಾ.ಸೋಮೇಶ್ವರ ಅವರು ಬಾಲ್ಯದಲ್ಲಿ ಅನುಭವಿಸಿದ ಕಡು ಬಡತನದ ಬಗ್ಗೆ ಮಾತನಾಡಿದ್ದಾರೆ. 

ಬಹುತೇಕ ಯಶಸ್ವಿ ಜನರನ್ನು ಮಾತನಾಡಿದರೆ, ಅವರ ಬಾಲ್ಯದಲ್ಲಿ ಹಲವಾರು ಸವಾಲು, ಕಡು ಬಡತನವನ್ನೇ ಎದುರಿಸಿದವರು. ಇಂದು ಶತಕೋಟ್ಯಧಿಪತಿಯಾಗಿರುವ ಹಲವು ಉದ್ಯಮಿಗಳಿಂದ ಹಿಡಿದು ವಿಭಿನ್ನ ಕ್ಷೇತ್ರಗಳಲ್ಲಿ ಬೆರಗು ಮೂಡಿಸಿರುವ ತಾರೆಯರದ್ದು ಇದೇ ಕಥೆ. ಹುಟ್ಟಿನಿಂದಲೇ ಶ್ರೀಮಂತರಾಗಿದ್ದು, ಕೊನೆಗೆ ಬಹು ಎತ್ತರಕ್ಕೆ ಸಾಗಿರುವವರು ಬಲು ಅಪರೂಪ. ಇಂದು ಹಲವು ಪರೀಕ್ಷೆಗಳಲ್ಲಿ ಟಾಪ್​ ಸ್ಥಾನವನ್ನು ಗಳಿಸುವುದರಿಂದ ಹಿಡಿದು, ಬಹು ದೊಡ್ಡ ಹೆಸರು ಮಾಡಿದವರ ಹಿನ್ನೆಲೆ ಕೇಳಿದರೆ ಅಬ್ಬಾ ನಿಜಕ್ಕೂ ಹೀಗೆ ಇರಲು ಸಾಧ್ಯನಾ ಎಂದೂ ಎನ್ನಿಸುವುದು ಉಂಟು. ಅಂಥ ಒಬ್ಬ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು ಕರ್ನಾಟಕ ಕಂಡ ಅಪರೂಪದ ಶಿಕ್ಷಣ ತಜ್ಞ, ವೈದ್ಯ, ಲೇಖಕರೂ ಆಗಿರುವ ಡಾ.ನಾ.ಸೋಮೇಶ್ವರ ಅವರು. ದೂರದರ್ಶನದ ಚಂದನದಲ್ಲಿ ಬರುವ ಥಟ್​ ಅಂತ ಹೇಳಿ ಮೂಲಕವೇ ಪ್ರಸಿದ್ಧಿಗೆ ಬಂದಿರುವ ಡಾ.ನಾ.ಸೋಮೇಶ್ವರ, ಅವರ ಸಾಧನೆ ವಿಭಿನ್ನ ಕ್ಷೇತ್ರಗಳಿಗೆ ವಿಸ್ತರಿಸಿದೆ.

ಇದೀಗ Rapid Rashmi ಯುಟ್ಯೂಬ್​ ಚಾನೆಲ್​ಗೆ ಸೋಮೇಶ್ವರ ಅವರು ನೀಡಿರುವ ಸಂದರ್ಶನದಲ್ಲಿ ಜೀವನದ ಹಲವು ಕುತೂಹಲದ ವಿಷಯಗಳನ್ನು ಹೇಳಿದ್ದಾರೆ. ಸದಾ ನಗುಮೊಗದಿಂದಲೇ ಇರುವ ಸೋಮೇಶ್ವರ ಅವರ ಬಾಲ್ಯ ಮಾತ್ರ ಕಡುಬಡತನದಿಂದ ಕೂಡಿತ್ತು. ಅನೇಕ ರಾತ್ರಿಗಳನ್ನು ಊಟ ಇಲ್ಲದೇ ಕಳೆದಿದ್ದೇವೆ. ಉಪವಾಸದಲ್ಲಿಯೇ ನಿದ್ದೆ ಮಾಡಿದ್ದೇನೆ. ತುಂಬಾ ಹಸಿವಾದಾಗ ಏನು ಮಾಡುವುದು, ಎಷ್ಟು ಎಂದು ನೀರು ಕುಡಿಯುವುದು? ಅದಕ್ಕೆ ನಾನು ಕಂಡುಕೊಂಡಿದ್ದ ಉಪಾಯ ಎಂದರೆ ಗುಂಡುಕಲ್ಲು. ಅ ಕಲ್ಲನ್ನು ಇಟ್ಟುಕೊಳ್ಳುತ್ತಾ ಇದ್ದೆ. ಆ ಕಲ್ಲನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳುತ್ತಾ ಇದ್ದೆ. ಆ ಕಲ್ಲಿನಿಂದ ಹೊಟ್ಟೆಯ ಮೇಲೆ ಭಾರ ಬೀಳುತ್ತಿತ್ತು. ಆ ಭಾರದಲ್ಲಿ ಹಸಿವಿನ ನೋವು ಕಡಿಮೆಯಾಗುತ್ತಿತ್ತು ಎಂದು ಹೇಳಿದ್ದಾರೆ ಸೋಮೇಶ್ವರ ಅವರು.

ಇನ್ನು, ನಾ.ಸೋಮೇಶ್ವರ ಅವರ ಜೀವನದ ಕುರಿತು ಚಿಕ್ಕದಾಗಿ ಹೇಳುವುದಾದರೆ, ಇವರು ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.

ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ. 'ಹಸಿವು ಕೇವಲ ಆಹಾರವನ್ನೇ ಕೇಳಲ್ಲ, ಬದುಕಿನ ನಿಜವಾದ ಪಾಠಗಳನ್ನು ಕಲಿಸುತ್ತದೆ. ಅನ್ನದ ಮೌಲ್ಯ, ಸಹನೆ, ಕರುಣೆ — ಇವೆಲ್ಲವೂ ಹಸಿವಿನ ಮೂಲಕ ಹೃದಯದಲ್ಲಿ ಮೂಡುತ್ತವೆ. ಒಂದು ಗರಿಗರಿಯಾದ ಹೊತ್ತಿನಲ್ಲೂ ಅದು ನಿಲ್ಲದ ಪಾಠ ಕಲಿಸುತ್ತೇ ಇರುತ್ತದೆ' ಎನ್ನುವ ಸುಂದರ ಶೀರ್ಷಿಕೆ ಕೊಟ್ಟು ರಶ್ಮಿ ಅವರು ಇದನ್ನು ಶೇರ್​ ಮಾಡಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!
25 ಲಕ್ಷದ ಬ್ಯಾಗ್ ಬಿಟ್ಟು ದೋಣಿ ವಿಹಾರಕ್ಕೆ ಹೋದ ಮಹಿಳೆ, ವಾಪಸ್ ಬಂದಾಗ ಶಾಕ್