ದಿನಕ್ಕೆ ಎಷ್ಟು ಹಣ್ಣು, ತರಕಾರಿ ತಿನ್ನಬೇಕು? ಇಲ್ಲಿದೆ ಹೊಸ ರೂಲ್ಸ್

By Suvarna Web DeskFirst Published Feb 25, 2017, 3:00 PM IST
Highlights

ಐದು ಹಣ್ಣು-ತರಕಾರಿ ಒಳ್ಳೆಯದೇ, ಆದರೆ, 10 ಹಣ್ಣು-ತರಕಾರಿಗಳನ್ನು ತಿಂದರೆ ಆರೋಗ್ಯ ಅತ್ಯುತ್ತಮವಾಗಿರುತ್ತದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಬೆಂಗಳೂರು(ಫೆ. 25): ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ಮಾತು ಚಾಲ್ತಿಯಲ್ಲಿದೆ. ಹಾಗೆಯೇ, ದಿನಕ್ಕೆ ಐದು ಹಣ್ಣು ಮತ್ತು ತರಕಾರಿ ತಿಂದರೆ ರೋಗಮುಕ್ತರಾಬಹುದು ಎಂಬ ತಿಳಿವಳಿಕೆಯೂ ನಮ್ಮಲ್ಲಿದೆ. ಆದರೆ, ಲಂಡನ್'ನ ವಿಜ್ಞಾನಿಗಳ ಅಧ್ಯಯನದ ಪ್ರಕಾರ ಸ್ಥಿರ ಆರೋಗ್ಯಕ್ಕೆ ದಿನಕ್ಕೆ ಐದು ಅಳತೆ ಸಾಕಾಗುವುದಿಲ್ಲ. ಅದರ ಬದಲು 10 ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕಂತೆ.

ಐದು, ಹತ್ತು ಎಂದರೆ ಯಾವ ಲೆಕ್ಕ?
ಒಂದು ಅಳತೆಯ ಹಣ್ಣು ಅಥವಾ ತರಕಾರಿ ಎಂದರೆ ಸುಮಾರು 80 ಗ್ರಾಂ ಎಂಬುದು ಒಂದು ಲೆಕ್ಕಾಚಾರ. ಅದರಂತೆ, ದಿನಕ್ಕೆ 10 ಹಣ್ಣು ಮತ್ತು ತರಕಾರಿ ಎಂದರೆ ಸುಮಾರು 800 ಗ್ರಾಂನಷ್ಟು ಹಣ್ಣು-ತರಕಾರಿಗಳನ್ನು ನಾವು ತಿಂದರೆ ಆರೋಗ್ಯದಿಂದ ಇರಬಹುದು ಎನ್ನುತ್ತಾರೆ ಲಂಡನ್'ನ ಇಂಪೀರಿಯಲ್ ಕಾಲೇಜ್'ನ ವಿಜ್ಞಾನಿಗಳು. ಇವರ ಪ್ರಕಾರ, ಐದು ಹಣ್ಣು-ತರಕಾರಿ ಒಳ್ಳೆಯದೇ, ಆದರೆ, 10 ಹಣ್ಣು-ತರಕಾರಿಗಳನ್ನು ತಿಂದರೆ ಆರೋಗ್ಯ ಅತ್ಯುತ್ತಮವಾಗಿರುತ್ತದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

click me!