
ಅಡುಗೆಮನೆಯ ಉಪಕರಣಗಳನ್ನು ನಮ್ಮ ಕೆಲಸವನ್ನು ಸುಲಭಗೊಳಿಸಲು ಮತ್ತು ಸಮಯವನ್ನು ಉಳಿಸಲು ತಯಾರಿಸಲಾಗುತ್ತದೆ. ಅಂತೆಯೇ, ಇಂದು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಚಿಮಣಿಯನ್ನು ಸ್ವಚ್ಛಗೊಳಿಸೋದು ಹೇಗೆ ಅನ್ನೋದನ್ನು ನೋಡೋಣ. ಇದು ಅಡುಗೆ ಮಾಡುವ ಸ್ಥಳದ ಮೇಲ್ಭಾಗದಲ್ಲಿರುತ್ತದೆ. ಆಹಾರವನ್ನು ತಯಾರಿಸುವಾಗ ಅದರಿಂದ ಬರುವ ಹೊಗೆ, ವಾಸನೆ ಮತ್ತು ಎಣ್ಣೆಯಂಶವನ್ನು ಹೀರಿಕೊಳ್ಳಲು ಚಿಮಣಿಯನ್ನು ಬಳಸಲಾಗುತ್ತದೆ. ನಿರಂತರವಾಗಿ ಹೊಗೆ ಮತ್ತು ಎಣ್ಣೆಯಂಶವನ್ನು ಹೀರಿಕೊಳ್ಳುವುದರಿಂದ ಚಿಮಣಿಯನ್ನು ಆಗಾಗ ಸ್ವಚ್ಛಗೊಳಿಸುವುದು ಅತ್ಯಗತ್ಯ. ಚಿಮಣಿಯನ್ನು ಸುಲಭವಾಗಿ ಸ್ವಚ್ಛಗೊಳಿಸಲು 5 ಸಲಹೆಗಳು ಇಲ್ಲಿವೆ.
ವಿನೆಗರ್: ವಿನೆಗರ್ ಆಮ್ಲೀಯ ಗುಣಗಳನ್ನು ಹೊಂದಿರುವುದರಿಂದ ಯಾವುದನ್ನಾದರೂ ಚೆನ್ನಾಗಿ ಸ್ವಚ್ಛಗೊಳಿಸಲು ಇದನ್ನು ಬಳಸುತ್ತಾರೆ.. ವಿನೆಗರ್ ದ್ರಾವಣದಲ್ಲಿ ಬಟ್ಟೆಯನ್ನು ಅದ್ದಿ ಚಿಮಣಿಯನ್ನು ಒರೆಸಬಹುದು. ಅಥವಾ ಬಿಸಿ ನೀರು ಮತ್ತು ವಿನೆಗರ್ ಅನ್ನು ಟಬ್‌ನಲ್ಲಿ ತುಂಬಿಸಿ ಚಿಮಣಿಯ ಫಿಲ್ಟರ್‌ಗಳನ್ನು ಅದರಲ್ಲಿ ಮುಳುಗಿಸಬಹುದು.
ಡಿಶ್ ವಾಶ್ ಲಿಕ್ವಿಡ್: ಡಿಶ್ ವಾಶ್ ಲಿಕ್ವಿಡ್‌ನಲ್ಲಿರುವ ಕ್ಲೀನಿಂಗ್ ಏಜೆಂಟ್‌ಗಳು ಚಿಮಣಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ಬಿಸಿ ನೀರಿನಲ್ಲಿ ಸ್ವಲ್ಪ ಡಿಶ್ ವಾಶ್ ಸೇರಿಸಿ ಚಿಮಣಿ ಫಿಲ್ಟರ್‌ಗಳನ್ನು ಅದರಲ್ಲಿ ಮುಳುಗಿಸಿಡಿ. ಸುಮಾರು 3 ಗಂಟೆಗಳ ಕಾಲ ಹಾಗೆಯೇ ಇಟ್ಟ ನಂತರ ಉಜ್ಜಿ ಸ್ವಚ್ಛಗೊಳಿಸಬಹುದು.
ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾ ಬಳಸಿ ಇವುಗಳನ್ನು ಸ್ವಚ್ಛಗೊಳಿಸಬಹುದು. ಎರಡು ಚಮಚ ಬೇಕಿಂಗ್ ಸೋಡಾಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ನಂತರ ಇದನ್ನು ಚಿಮಣಿಗೆ ಹಚ್ಚಬಹುದು. 10 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಂಡು ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿಕೊಳ್ಳಿ.
ಎಷ್ಟೇ ಬಿಸಿಲಿರಲಿ, ಬೇಸಗೆಯಲ್ಲಿ ನಿಮ್ಮನ್ನು ತಂಪಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್!
ಸೋಪು ಪುಡಿ: ಸೋಪು ಪುಡಿಯಲ್ಲಿರುವ ಗುಣಗಳು ಎಣ್ಣೆಯ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತವೆ. ಸೋಪು ನೀರಿನಲ್ಲಿ ಚಿಮಣಿ ಫಿಲ್ಟರ್ ಅನ್ನು ಸ್ವಲ್ಪ ಸಮಯದವರೆಗೆ ನೆನೆಸಿಡಿ. ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿಕೊಳ್ಳಬಹುದು.
ಮಾಡಿರೋ ಅಡುಗೆಯಲ್ಲಿ ಎಣ್ಣೆ ಹೆಚ್ಚಾಗಿದ್ಯಾ? ಈ ಸುಲಭ ಉಪಾಯದಿಂದ ಎಣ್ಣೆ ನಿವಾರಿಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.