
ತನ್ನಿಂತಾನೇ ಓಡುವ ಚಾಲಕರಹಿತ ಕಾರುಗಳ ಸಂಶೋಧನೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಕೆಲವೆಡೆ ಬಂದಿವೆ. ಅವು ದೊಡ್ಡ ಪ್ರಮಾಣದಲ್ಲಿ ಜಗತ್ತಿನೆಲ್ಲೆಡೆ ರಸ್ತೆಗಿಳಿದಾಗ ಏನಾಗುತ್ತದೆ? ಕಾರಲ್ಲಿ ಕುಳಿತವರು ಫೋನ್‌ನಲ್ಲಿ ಬ್ಯುಸಿ ಆಗ್ತಾರಾ? ಸಾಮಾಜಿಕ ಜಾಲತಾಣ ಬ್ರೌಸ್ ಮಾಡಿಕೊಂಡು ಇರುತ್ತಾರಾ? ಅಥವಾ ಹೆಚ್ಚು ಓದಿ-ಬರೆದು ಮಾಡುತ್ತಾರಾ? ಇವ್ಯಾವುದೂ ಅಲ್ಲ. ಹೆಚ್ಚು ಸೆಕ್ಸ್ ಮಾಡುತ್ತಾರೆ.
ಈ ಕುರಿತು ಅಮೆರಿಕದ ಸರ್ರಿ ವಿವಿ ತಜ್ಞರು ಸಮೀಕ್ಷೆ ನಡೆಸಿದ್ದಾರೆ. ಅದರಲ್ಲಿ ಪಾಲ್ಗೊಂಡಿದ್ದ ಶೇ.60ರಷ್ಟುಜನರು ತಾವು ಕಾರಿನಲ್ಲಿ ಸೆಕ್ಸ್ ನಡೆಸುವುದು ಹೆಚ್ಚಲಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕಾರಿನಲ್ಲಿ ಪ್ರಣಯದಾಟ ನಡೆಸಲು ಕಾರನ್ನು ಮೂಲೆಯಲ್ಲೆಲ್ಲಾದರೂ ಪಾರ್ಕ್ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿ ಜಾಗ ಹುಡುಕಬೇಕಿತ್ತು. ಇನ್ನು ಆ ಸಮಸ್ಯೆ ಇರುವುದಿಲ್ಲ. ಕಾರು ಅದರ ಪಾಡಿಗೆ ಓಡುತ್ತಿರುತ್ತದೆ.
ಒಳಗೆ ಬರೀ ಇಷ್ಟೇ ಅಲ್ಲ. ಡ್ರೈವರ್‌ಲೆಸ್ ಕಾರು ಬಂದಮೇಲೆ ಜಗತ್ತಿನಾದ್ಯಂತ ಸೆಕ್ಸ್ ಟೂರಿಸಮ್ಮಿನ ದಿಕ್ಕೇ ಬದಲಾಗುತ್ತದೆಯಂತೆ. ಹೋಟೆಲ್ ರೂಮುಗಳಿಗೆ ಬೇಡಿಕೆ ಕಡಿಮೆಯಾಗಿ ಕಾರಿನಲ್ಲೇ ವೇಶ್ಯಾವಾಟಿಕೆ ಕೂಡ ಹೆಚ್ಚಲಿದೆಯಂತೆ. ಅದಕ್ಕೆ ತಕ್ಕಂತೆ ಈಗಾಗಲೇ ಕಾರುಗಳ ವಿನ್ಯಾಸ ಬದಲಾಗಿ, ಒಳಗಡೆ ಸಾಕಷ್ಟುಸ್ಥಳಾವಕಾಶ ಬೇರೆ ಸೃಷ್ಟಿಯಾಗಿದೆ. ಒಟ್ಟಾರೆ ಈ ಬದಲಾವಣೆ 2040ರ ದಶಕದಲ್ಲಿ ಆಗಲಿದೆ ಎಂಬುದು ಸಮೀಕ್ಷಕರ ಅಂದಾಜು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.