
ಆಕೆಯನ್ನು ಗೌರವಿಸದ ಯುವಕನನ್ನು ಮದುವೆಯಾಗುವಂತೆ ಬಲವಂತ ಮಾಡಲು ನಮಗೂ ಸಾಧ್ಯವಿಲ್ಲ ಎಂದ ವಧುವಿನ ತಂದೆ ಮದುವೆಗೆ ನಿರಾಕರಿಸಿದ್ದಾರೆ. ವರನ ಗೆಳೆಯರು ಡ್ಯಾನ್ಸ್ ಮಾಡೋಕೆ ಎಳೆದರು, ಬಲವಂತ ಮಾಡಿದರೆಂದು ಯುವತಿ ಮದುವೆಯನ್ನು ಬೇಡ ಎಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬರೇಲಿ ಜಿಲ್ಲೆಯ ಯುವಕನ ಜೊತೆ ಕನೌಜ್ ಜಿಲ್ಲೆಯ ಯುವತಿಯ ಮದುವೆ ನಿಗದಿಯಾಗಿತ್ತು. ಇಬ್ಬರೂ ಚೆನ್ನಾಗಿ ಕಲಿತವರು. ಎರಡೂ ಕಡೆಯ ಕುಟುಂಬ ಮಾತನಾಡಿ ಮದುವೆ ನಿಶ್ಚಯಿಸಿತ್ತು.
ಬಿಸಿಲಿಗೆ ಬೀದಿ ಬೀದಿಯಲ್ಲಿ ವ್ಯಾಪಾರ ಮಾಡ್ತಿದ್ದ ಫುಟ್‌ಪಾತ್ ಹುಡುಗಿಯ ಫೋಟೋಶೂಟ್ ವೈರಲ್
ವಧುವಿನ ದಿಬ್ಬಣ ಬರೇಲಿಗೆ ಬಂದಿತ್ತು. ಅದ್ಧೂರಿ ಮದುವೆಗೆ ಎಲ್ಲ ಸಿದ್ಧತೆ ಮಾಡಲಾಗಿತ್ತು. ವಧುವಿಗೆ ಬೇಸರವಾಗುವಂತಹ ಆ ಘಟನೆ ನಡೆಯೋ ತನಕ ಎಲ್ಲವೂ ಸರಿಯಾಗಿಯೇ ಇತ್ತು.
ವರನ ಕೆಲವು ಗೆಳೆಯರು ವಧುವನ್ನು ಡ್ಯಾನ್ಸ್ ಫ್ಲೋರ್‌ಗೆ ಎಳೆದಿದ್ದೇ ವಧುವಿನ ಕೋಪಕ್ಕೆ ಕಾರಣ. ಇದೇ ವಿಚಾರವಾಗಿ ಎರಡೂ ಕುಟುಂಬದ ಮಧ್ಯೆ ಭಾರೀ ವಾಗ್ವಾದ ನಡೆದಿದೆ. ಘಟನೆ ಬೆನ್ನಲ್ಲಿಯೇ ಮದುವೆ ಕ್ಯಾನ್ಸಲ್ ಆಗಿದೆ.
ಹನಿಮೂನ್ ಕ್ಯಾನ್ಸಲ್ ಮಾಡಿ ಬೀಚ್‌ನಲ್ಲಿ ಕಸ ಹೆಕ್ಕೋಕೋದ್ರು ಈ ನವಜೋಡಿ..!
ವಧುವಿನ ಮನೆಯವರು ವರದಕ್ಷಿಣೆ ಆರೋಪದಲ್ಲಿ ವದನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ನಂತರ ಎರಡೂ ಕುಟುಂಬದ ನಡುವೆ ಮಾತುಕತೆ ನಡೆದಿದೆ. ವರನ ಕುಟುಂಬ 6.5 ಲಕ್ಷ ನೀಡೋಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ವರನ ಕುಟುಂಬ ಮತ್ತೊಮ್ಮೆ ಬಂದು ವಿವಾಹಕ್ಕಾಗಿ ಅಪೇಕ್ಷೆ ಇಟ್ಟರೂ ವಧುವಿನ ಕುಟುಂಬದವರು ನಿರಾಕರಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.